Posts

ಪ್ರವೀಣ್ ಹತ್ಯೆ: ಬೆಳ್ಳಾರೆ ಉದ್ವಿಗ್ನ, ಸೆಕ್ಷನ್ 144 ಜಾರಿ; ನಳಿನ್ ಕಾರಿಗೆ ಮುತ್ತಿಗೆ, ಪೊಲೀಸರಿಂದ ಲಾಠಿ ಚಾರ್ಚ್!

Image
  ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಹಿಂದೂ ಪರ ಕಾರ್ಯಕರ್ತರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಮಂಗಳೂರು:  ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಹಿಂದೂ ಪರ ಕಾರ್ಯಕರ್ತರು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಬೆಳ್ಳಾರೆಯಲ್ಲಿ ಪ್ರತಿಭಟನೆ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಇನ್ನು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿ ಚಾರ್ಚ್ ನಿಂದಾಗಿ ಹಲವು ಕಾರ್ಯಕರ್ತರಿಗೆ ಗಾಯಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.  ಹತ್ಯೆಯನ್ನು ಖಂಡಿಸಿ ಪುತ್ತೂರು, ಸುಳ್ಯ, ಕಡಬ ಪಟ್ಟಣಗಳಲ್ಲಿ ಸ್ವಯಂ ಘೋಷಿತ ಬಂದ್ ಗೆ ಹಿಂದು ಪರ ಸಂಘಟನೆಗಳು ಕರೆ ನೀಡಿವೆ. ಮರಣೋತ್ತರ ಪರೀಕ್ಷೆ ಕೈಗೊಂಡಿದ್ದು, ಕುಟುಂಬಸ್ಥರು ನೆಟ್ಟಾರುವಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಾದ್ಯಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಹಂತಕರು ಕೇರಳ ನೋಂದಣಿ ಇರುವ ವಾಹನದಲ್ಲಿ ಬಂದು ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹಂತರ ಪತ್ತೆಗೆ 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಐದು ತಂಡಗಳ ಪೈಕಿ ಮೂರು ತಂಡಗಳನ್ನು ಕ್ರಮವಾಗಿ ಕೇರಳ ಮತ್ತು ಮಡ

ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆ ಯುವತಿಯ ವೈದ್ಯಕೀಯ ವೆಚ್ಚ ಸರ್ಕಾರ ಭರಿಸುತ್ತದೆ: ಆರೋಗ್ಯ ಸಚಿವ ಡಾ ಕೆ ಸುಧಾಕರ್

Image
  ತನ್ನ ಪ್ರೀತಿಯ ನಿವೇದನೆಯನ್ನು ನಿರಾಕರಿಸಿದಳು ಎಂದು ಆಕ್ರೋಶದಿಂದ ಯುವಕ ಆಸಿಡ್ ಎರಚಿ(Acid attack) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 24 ವರ್ಷದ ಯುವತಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಭರವಸೆ ನೀಡಿದ್ದಾರೆ. ಬೆಂಗಳೂರು:  ತನ್ನ ಪ್ರೀತಿಯ ನಿವೇದನೆಯನ್ನು ನಿರಾಕರಿಸಿದಳು ಎಂದು ಆಕ್ರೋಶದಿಂದ ಯುವಕ ಆಸಿಡ್ ಎರಚಿ(Acid attack) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 24 ವರ್ಷದ ಯುವತಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಭರವಸೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ಸುಂಕದಕಟ್ಟೆ ಬಳಿ ಕೆಲಸಕ್ಕೆ ಹೊರಟಿದ್ದ ಯುವತಿ ಬಸ್ ನಿಲ್ದಾಣ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಬಂದ ಆರೋಪಿ ಯುವಕ ನಾಗೇಶ್ ಯುವತಿ ಮೇಲೆ ಏಕಾಏಕಿ ಆಸಿಡ್ ಎರಚಿ ಪರಾರಿಯಾಗಿದ್ದು ಆತನಿಗಾಗಿ ಬೆಂಗಳೂರು ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯ ವಿಚಾರಿಸಲು ಇಂದು ಆರೋಗ್ಯ ಸಚಿವ ಡಾ ಸುಧಾಕರ್ ಭೇಟಿ ನೀಡಿದ್ದರು. ನಂತರ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತೆಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ವೈಯಕ್ತಿಕವಾಗಿ ನಾನು 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ. ಸಂತ್ರಸ್ತ ಯುವತಿಗೆ ವೈದ್

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸಕಲ ಸಿದ್ಧತೆ – ಗ್ರೀನ್ ಗೇಮ್ಸ್‌ಗೆ ಸಜ್ಜಾದ ಬೆಂಗಳೂರು

Image
  ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸಕಲ ಸಿದ್ಧತೆ – ಗ್ರೀನ್ ಗೇಮ್ಸ್‌ಗೆ ಸಜ್ಜಾದ ಬೆಂಗಳೂರು ಬೆಂಗಳೂರು:  ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಏಪ್ರಿಲ್ 1 ರಂದು ಲೋಗೋ, ಥೀಮ್ ಸಾಂಗ್ ಹಾಗೂ ಜೆರ್ಸಿ ಬಿಡುಗಡೆಗೊಳಿಸಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಎರಡನೇ ಆವೃತ್ತಿಯನ್ನು ಆಯೋಜಿಸುವುದು ನಮ್ಮ ಕರ್ನಾಟಕಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯ. ಏಪ್ರಿಲ್ 24 ರಿಂದ ಮೇ 03 ವರೆಗೂ ನಡೆಯಲಿದ್ದು, ಏಪ್ರಿಲ್ 1 ರಂದು ಕ್ರೀಡಾಕೂಟದ ಲೋಗೋ, ಥೀಮ್ ಸಾಂಗ್, ಜೆರ್ಸಿ, ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಯುವಜನ ಮತ್ತು ಕ್ರೀಡೆ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಕೇಂದ್ರ ಗೃಹ ಇಲಾಖೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ನಿಸಿತ್ ಪ್ರಾಮಾಣಿಕ್, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.   ಏಪ್ರಿಲ್ 24 ರಂದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಉದ್ಘಾಟನೆಗೆ ಉಪ ರಾಷ್

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು

Image
  ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು ಮುಂಬೈ:  ಮೋಸ್ಟ್ ವ್ಯಾಲ್ಯುಬಲ್ ಭಾರತೀಯ ಸೆಲೆಬ್ರಿಟಿಗಳ ಲಿಸ್ಟ್ ಬಿಡುಗಡೆಯಾಗಿದೆ. ಈ ಲಿಸ್ಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗಿದ್ದರೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಡಫ್ ಮತ್ತು ಫೆಲ್ಪ್ಸ್‌ನ ಮೋಸ್ಟ್ ವ್ಯಾಲ್ಯೂಬಲ್ ಭಾರತೀಯ ಸೆಲೆಬ್ರಿಟಿಗಳ ಹೊಸ ಸಮೀಕ್ಷೆಯಲ್ಲಿ ಬಿಡುಗಡೆಯಾಗಿದೆ. ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ 2021ರಲ್ಲಿ 237.7 ಡಾಲರ್(1,800 ಕೋಟಿ ರೂ.) ಇತ್ತು. ಆದರೆ ಈಗ ಈ ಮೌಲ್ಯ 185.7 ಮಿಲಿಯನ್ ಡಾಲರ್‍ಗೆ(1,400 ಕೋಟಿ ರೂ.) ಇಳಿಕೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿ 21% ರಷ್ಟು ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗಿದೆ. ಆದರೂ ಕೊಹ್ಲಿಗೆ ಮೊದಲ ಸ್ಥಾನ ಸಿಕ್ಕಿದೆ.  ಈ ಲಿಸ್ಟ್‌ನಲ್ಲಿ, ಕ್ರಮವಾಗಿ ರಣವೀರ್ ಸಿಂಗ್ 158.3 ಮಿಲಿಯನ್ ಡಾಲರ್(1200 ಕೋಟಿ ರೂ.), ಅಕ್ಷಯ್ ಕುಮಾರ್ 139.6 ಮಿಲಿಯನ್ ಡಾಲರ್(1058 ಕೋಟಿ ರೂ.), ಆಲಿಯಾ ಭಟ್ 68.1 ಮಿಲಿಯನ್ ಡಾಲರ್(516 ಕೋಟಿ ರೂ), ಎಂ.ಎಸ್.ಧೋನಿ 61.2 ಮಿಲಿಯನ್ ಡಾಲರ್(463 ಕೋಟಿ ರೂ.) ಇದ್ದು ಟಾಪ್ 5 ಸ್ಥಾನಗಳಲ್ಲಿ ಇದ್ದಾರೆ. ಸಚಿನ್ ತೆಂಡೂಲ್ಕರ್ 47.4 ಮಿಲಿಯನ್ ಡಾಲರ್(359 ಕೋಟಿ ರೂ.) ಪಡೆದು 11ನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ 32.2 ಡಾಲರ್(244 ಕೋಟಿ ರೂ.) ಪಡೆದು 13ನೇ ಸ್ಥಾನದಲ್ಲಿದ್ದಾರೆ. ಪಿ.ವಿ.ಸಿಂಧೂ 22 ಮಿ

40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

Image
  40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ ಹುಬ್ಬಳ್ಳಿ:  ಗ್ರಾಮೀಣಾಭಿವೃದ್ಧಿ ಇಲಾಖೆ 40% ಕಮಿಷನ್ ಇಲಾಖೆಯಿದ್ದ ಹಾಗೆ. ಕಾಮಗಾರಿಗಳ ಬಿಲ್ ಆಗಬೇಕು ಅಂದ್ರೆ 40% ಕಮಿಷನ್ ಕೊಡಲೇ ಬೇಕು ಅಂತ, ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದು, ಸಚಿವ ಕೆಎಸ್ ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರ ಸಂತೋಷ್, ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಅಭಿವೃದ್ಧಿಗಾಗಿ, 4 ಕೋಟಿ ವೆಚ್ಚದಲ್ಲಿ ಸುಮಾರು 108 ವಿವಿಧ ಕಾಮಗಾರಿಗಳನ್ನು ಈಶ್ವರಪ್ಪ ಮಂಜೂರು ಮಾಡಿದ್ದರು. ಸದ್ಯ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಗುತ್ತಿಗೆದಾರ ಸಂತೋಷ ಅವರಿಗೆ ಇನ್ನೂ ಒಂದು ರೂಪಾಯಿ ಸಹ ಬಂದಿಲ್ಲ. ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಈಶ್ವರಪ್ಪ ಆಪ್ತರು ಮತ್ತು ಇಲಾಖೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತು ಹಣ ಬಿಡುಗಡೆ ಮಾಡಲು ಸೂಚನೆ ನೀಡುವಂತೆ ಪ್ರಧಾನಿ ಮೋದಿಗೆ ಗುತ್ತಿಗೆದಾರ ಸಂತೋಷ ಪತ್ರ ಬರೆದಿದ್ದಾರೆ.

ಕಾಶ್ಮೀರ ಹತ್ಯಾಕಾಂಡ – 31 ವರ್ಷದ ಬಳಿಕ ಪಾತಕಿ ಬಿಟ್ಟಾ ಕರಾಟೆ ವಿರುದ್ಧ ಅರ್ಜಿ ಸಲ್ಲಿಕೆ

Image
  ಕಾಶ್ಮೀರ ಹತ್ಯಾಕಾಂಡ – 31 ವರ್ಷದ ಬಳಿಕ ಪಾತಕಿ ಬಿಟ್ಟಾ ಕರಾಟೆ ವಿರುದ್ಧ ಅರ್ಜಿ ಸಲ್ಲಿಕೆ ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಬಿಟ್ಟಾ ಕರಾಟೆಯ ವಿರುದ್ಧ 31 ವರ್ಷದ ಹಿಂದೆ ನಡೆದ ಪ್ರಕರಣದ ವಿಚಾರಣೆ ನಡೆಸುವಂತೆ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ ವಿರುದ್ಧ ಮೃತ ಕಾಶ್ಮೀರಿ ಪಂಡಿತ ಸತೀಶ್ ಟಿಕ್ಕೂ ಅವರ ಕುಟುಂಬವು 31 ವರ್ಷಗಳ ಬಳಿಕ ಮರು ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಇಂದು ಮನವಿ ಮಾಡಿದೆ. ಬಿಟ್ಟಾ ಕರಾಟೆ ಆಜಾದಿ ಹೆಸರಲ್ಲಿ ಪ್ರಾರಂಭಿಸಿದ್ದ ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಮೊದಲು ಬಲಿಯಾಗಿದ್ದು ಸತೀಶ್ ಟಿಕ್ಕೂ. ಈತ ಬಿಟ್ಟಾನ ಬಾಲ್ಯದ ಸ್ನೇಹಿತನಾಗಿದ್ದ. ಸತೀಶ್ ಟಿಕ್ಕೂ ಅವರನ್ನು ಕೊಲೆ ಮಾಡಿರುವುದಾಗಿ ಬಿಟ್ಟಾ ಖಾಸಗಿ ಚಾನೆಲ್‍ಗೆ ಸಂದರ್ಶನ ನೀಡಿದ್ದ ವೇಳೆ ಒಪ್ಪಿಕೊಂಡಿದ್ದ. ಈ ಸಾಕ್ಷಿಯನ್ನು ಇಟ್ಟುಕೊಂಡು ಕುಟುಂಬ ಕೋರ್ಟ್ ಮೆಟ್ಟಿಲೇರಿದೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ಶ್ರೀನಗರದ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 16ರೊಳಗೆ ಸಂದರ್ಶನದ ಹಾಡ್ ಕಾಪಿಯನ್ನು ಸಲ್ಲಿಸುವಂತೆ ಟಿಕೂ ಕುಟುಂಬದ ವಕೀಲ ಉತ್ಸವ್ ಬೈನ್ಸ್‍ಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದೆ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ದುಃಸ್ಥಿತಿಯನ್ನು ತೋರಿಸಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸಿನ ಬೆನ್ನ

ವಿಜಯ್ ಸೇತುಪತಿ ಜತೆ ಕುಣಿದ ಸಮಂತಾ, ನಯನಾ : ಕುಚಿಕು ಗೆಳೆತಿಯರ ಡಾನ್ಸ್ ಕಹಾನಿ

Image
  ವಿಜಯ್ ಸೇತುಪತಿ ಜತೆ ಕುಣಿದ ಸಮಂತಾ, ನಯನಾ : ಕುಚಿಕು ಗೆಳೆತಿಯರ ಡಾನ್ಸ್ ಕಹಾನಿ ಟಾ ಲಿವುಡ್ ಸೂಪರ್ ಸ್ಟಾರ್‌ಗಳಾದ ಸಮಂತಾ, ನಯನತಾರಾ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ‘ವಿಘ್ನೇಶ್ ಶಿವನ್’ ಆಕ್ಷನ್ ಕಟ್ ಹೇಳುತ್ತಿದ್ದು, ಶೂಟಿಂಗ್ ವೇಳೆಯಲ್ಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಈ ಸಿನಿಮಾದಲ್ಲಿ ಬಹುತೇಕ  ಸ್ಟಾರ್‌ಗಳೇ ಇದ್ದು, ನಿರೀಕ್ಷೆಯು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಇದೀಗ ಈ ಸಿನಿಮಾದ ಬಗ್ಗೆ ಎಕ್ಸ್‌ಕ್ಲೂಸಿವ್ ಸುದ್ದಿಯೊಂದು ಹೊರಬಿದ್ದಿದ್ದು, ಸಮಂತಾ ಕೂಡ ಚಿತ್ರದ ಭಾಗವಾಗಿದ್ದಾರೆ. ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲೇ ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದು. ಅದಕ್ಕೂ ಮುನ್ನ ಈ ಸಿನಿಮಾದಲ್ಲಿಸ್ಪೆಷಲ್ ಸಾಂಗ್ ಒಂದರ ಶೂಟಿಂಗ್ ನಡೆದಿದ್ದು, ಇದರ ಚಿತ್ರೀಕರಣಕ್ಕಾಗಿ ಸಮಂತಾ ಚೆನ್ನೈಗೆ ತೆರಳಿದ್ದಾರೆ. ಪ್ರಸ್ತುತ ಸ್ಯಾಮ್, ನಯನ ಮತ್ತು ವಿಜಯ್ ಸೇತುಪತಿ ‘ಟೂ ಟೂ ಟು’ ಹಾಡಿನ ಚಿತ್ರೀಕರಣದಲ್ಲಿದ್ದಾರೆ. ಈ ಹಾಡನ್ನು ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದು, ಇದೊಂದು ಎಪಿಕ್ ಫನ್ ಸಾಂಗ್ ಆಗಲಿದೆಯಂತೆ. ಇತ್ತೀಚೆಗಷ್ಟೇ ‘ಕಾತುವಾಕುಲ ರೆಂದು ಕಾದಲ್’ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಟೀಸರ್ ನ ಪ್ರತಿ ಬಿ