Posts

Showing posts from March 13, 2022

ಬಾವಿಗೆ ಬಿದ್ದ ಸಹೋದರಿಯರಿಬ್ಬರ ಶವ ಪತ್ತೆ – ನಾಲ್ವರ ಬಂಧನ

Image
ಬಾವಿಗೆ ಬಿದ್ದ ಸಹೋದರಿಯರಿಬ್ಬರ ಶವ ಪತ್ತೆ – ನಾಲ್ವರ ಬಂಧನ ಬೀದರ್:  ಬಾವಿಗೆ ಬಿದ್ದು ಸಾವನ್ನಪ್ಪಿರುವ ಸಹೋದರಿಯರಿಬ್ಬರ ಆತ್ಮಹತ್ಯೆ  ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಂಬಾಜೀ, ವಿಠಲ್, ರಾಣಿ ಬಂಧಿತ ಆರೋಪಿಗಳಾಗಿದ್ದಾರೆ. ನಾಲ್ಕು ಜನ ಆರೋಪಿಗಳನ್ನು ಮೇಹಕರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಡೆದಿದ್ದೇನು?:  ಎರಡು ದಿನಗಳ ಹಿಂದೆ ಅಂಕಿತ(15) ಹಾಗೂ ಶ್ರದ್ಧಾ(13) ಸಹೋದರಿಯರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಟ್ಟರ್ಗಾ ಗ್ರಾಮದಲ್ಲಿ ಘಟನೆಯಾಗಿದ್ದು, ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಮದುವೆ ಸಂಬಂದ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಈ ವೇಳೆ ಸಂಬಾಜೀ, ಸಹೋದರಿಯರ ಪೋಷಕರ ಮೇಲೆ ಹಲ್ಲೆ ಮಾಡಿದ್ದನು. ಈ ವಿಚಾರವಾಗಿ ಮನನೊಂದು ಸಹೋದರಿಯರಿಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

ವ್ಯಕ್ತಿ ಕೊಲೆಗೈದು ಅರ್ಧಂಬರ್ಧ ಶವ ಸುಟ್ಟು ಪರಾರಿಯಾದ ಹಂತಕರು

Image
ವ್ಯಕ್ತಿ ಕೊಲೆಗೈದು ಅರ್ಧಂಬರ್ಧ ಶವ ಸುಟ್ಟು ಪರಾರಿಯಾದ ಹಂತಕರು ಕಲಬುರಗಿ:  ಮಹಾರಾಷ್ಟ್ರದ ಪುಣೆಯಿಂದ ಎರಡು ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟುಹಾಕಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಹೊರವಲಯದ ತಾಜಸುಲ್ತಾನಪುರನಲ್ಲಿ ನಡೆದಿದೆ. ಸುಲ್ತಾನಪುರ ಗ್ರಾಮದ ನಿವಾಸಿ ಮನೋಹರ್ ರುದ್ರಕರ್(35) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮನೋಹರ್ ಪುಣೆಯಲ್ಲಿ ವಾಸವಿದ್ದನು. ಹೋಳಿ ಹಬ್ಬದ ಪ್ರಯುಕ್ತ ಎರಡು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಆಗಮಿಸಿದ್ದನು ನಿನ್ನೆ(ಸೋಮವಾರ) ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಹೋರಹೋಗಿದ್ದ ಮನೋಹರ್‌ನನ್ನು ಹಂತಕರು ಕೊಲೆಗೈದು ಗ್ರಾಮದಿಂದ ಕೊಂಚ ದೂರದಲ್ಲಿ ದೇಹ ಸುಟ್ಟುಹಾಕಿದ್ದಾರೆ. ದೇಹ ಅರ್ಧಂಬರ್ದ ಸುಟ್ಟು ಕರಕಲಾಗಿದೆ. ಕೊಲೆಗೆ ಕಾರಣ ಏನು? ಹಂತಕರು ಯಾರು? ಅನ್ನೋದು ತಿಳಿದುಬಂದಿಲ್ಲ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಹಂತಕರ ಬಂಧನಕ್ಕೆ ಜಾಲ ಬೀಸಿದ್ದಾರೆ. ಹಂತಕರ ಬಂಧನ ನಂತರವಷ್ಟೆ ಕೊಲೆಗೆ ಕಾರಣ ಏನು ಎಂಬುದು ತಿಳಿದುಬರಬೇಕಿದೆ. ಈ ಭೀಕರ ಹತ್ಯೆಯಿಂದ ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ.

ಅಣ್ಣಾವ್ರ ಸಿನಿಮಾ ಪರಂಪರೆಗೆ ಅಪ್ಪು ಸಲ್ಲಿಸಿದ ಕೊನೆಯ ಶುಭವಿದಾಯ: ಜೇಮ್ಸ್ ಚಿತ್ರವಿಮರ್ಶೆ

Image
  ಅಣ್ಣಾವ್ರ ಸಿನಿಮಾ ಎಂದರೆ ಸದಭಿರುಚಿಯ ಸಿನಿಮಾ, ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಎಲ್ಲಾ ವಯೋಮಾನದವರೂ, ಸಕುಟುಂಬಪರಿವಾರ ಸಮೇತರಾಗಿ ನೋಡಬಹುದಾದ ಸಿನಿಮಾ. 'ಜೇಮ್ಸ್' ಈ ಸಾಲಿಗೆ ಸೇರುವ ಸಿನಿಮಾ. ಭಾರತದ ಮೊದಲ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದ ಬಾಲಿವುಡ್ ನಟ ರಾಜೇಶ್ ಖನ್ನಾ ಕಾರ್ಯಕ್ರಮವೊಂದರ ಜಗಮಗಿಸುವ ವೇದಿಕೆ ಮೇಲೆ, ಅಮಿತಾಭ್ ಉಪಸ್ಥಿತಿಯಲ್ಲಿ ಒಂದು ಮಾತು ಹೇಳಿದ್ದರು. ಆ ವೇಳೆಗೆ ಖನ್ನಾ ತೆರೆಮರೆಗೆ ಸರಿದು ಅಮಿತಾಭ್ ಸೂಪರ್ ಸ್ಟಾರ್ ಆಗಿ, ಬಿಗ್ ಬಿ ಎಂದು ಖ್ಯಾತಿ ಗಳಿಸಿದ್ದ ಸಮಯ. 'ಇವತ್ತು ನಾನಿರೋ ಜಾಗದಲ್ಲಿ ನೆನ್ನೆ ಬೇರೆ ಯಾರೋ ಇದ್ದರು, ನಾಳೆ ಇನ್ಯಾರೋ!'. ಯಾರ ಸ್ಥಾನವೂ ಯಾವ ದೊಣ್ಣೆನಾಯಕನದೂ ಅಲ್ಲ ಎನ್ನುವುದು ಖನ್ನಾ ಅವರ ಮಾತಿನ ತಾತ್ಪರ್ಯವಾಗಿತ್ತು. ಕನ್ನಡಿಗರ ಪಾಲಿಗೆ ಈ ಮಾತನ್ನು ಸುಳ್ಳಾಗಿಸಿದ್ದು ಪುನೀತ್ ರಾಜ್ ಕುಮಾರ್. ಆ ಸೀಟು ಮತ್ತು ಸೀಟಿ ರಿಸರ್ವ್ಡ್ ಅಪ್ಪು ಆಸೀನರಾಗಿದ್ದ ಕನ್ನಡಿಗರ ಹೃದಯ ಸಿಂಹಾಸನಗಳು ಯಾವ ಕಾಲಕ್ಕೂ ಆಚಂದ್ರಾರ್ಕ ಅವರಿಗಾಗಿ ರಿಸರ್ವ್ಡ್ ಆಗಿಯೇ ಉಳಿದಿರುತ್ತವೆ. ಅದು ಯಾವತ್ತಿಗೂ ಖಾಲಿಯೇ. ಖಾಲಿತನ ಎಂದರೆ ಏನೆಂಬುದನ್ನು ಕನ್ನಡ ನಾಡಿಗೇ ಏಕಕಾಲಕ್ಕೆ ಕಲಿಸಿಕೊಟ್ಟಿದ್ದನ್ನು ನೆನೆದು ಹನಿಗಣ್ಣಾವುದಷ್ಟೇ ನಮ್ಮ ಪಾಲಿಗೆ ಉಳಿದದ್ದು. ಅಪ್ಪುವನ್ನು ಕೊನೆಯ ಬಾರಿ ಹಿರಿತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು, ಹನಿಗಣ್ಣಾಗಲು ಸಾಧ್ಯವಾಗಿಸಿದ್ದು ಚೇತನ್ ಕುಮಾರ್ ನಿರ್ದೇಶನದ, ಕಿ

ಜಿ23 ಗುಂಪಿನ ನಾಯಕ ಭೂಪಿಂದರ್ ಸಿಂಗ್ ಹೂಡಾರನ್ನು ಭೇಟಿಯಾದ ರಾಹುಲ್ ಗಾಂಧಿ; ಮಹತ್ವ ಪಡೆದ ಮಾತುಕತೆ!

Image
  ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಪಕ್ಷದಿಂದ ಸೋಲಿಗೆ ಕಾರಣಗಳ ಬಗ್ಗೆ ಮಂಥನ ಮುಂದುವರಿದಿದೆ. ನವದೆಹಲಿ:  ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಪಕ್ಷದಿಂದ ಸೋಲಿಗೆ ಕಾರಣಗಳ ಬಗ್ಗೆ ಮಂಥನ ಮುಂದುವರಿದಿದೆ. ಈ ನಡುವೆ ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದು ಇದು ಗಾಂಧಿ ಕುಟುಂಬ ಮತ್ತು ಜಿ23 ಗುಂಪಿನ ನಾಯಕರ ನಡುವೆ ನಡೆಯುತ್ತಿರುವ ಜಗಳದ ನಡುವೆ ಈ ಸಭೆ ಬಹಳ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಹುಲ್ ಗಾಂಧಿ ಭೇಟಿಯನ್ನು ಕಾಂಗ್ರೆಸ್ ಪಕ್ಷದಲ್ಲಿ ಸಮನ್ವಯತೆ ಎಂದು ಪರಿಗಣಿಸಲಾಗಿದೆ. ಭೂಪಿಂದರ್ ಸಿಂಗ್ ಹೂಡಾ ಅವರು ಎರಡೂ ಶಿಬಿರಗಳಿಗೆ ಹತ್ತಿರವಿರುವ ಏಕೈಕ ನಾಯಕರಾಗಿದ್ದಾರೆ. ಹೊರಬರುತ್ತಿರುವ ಮಾಹಿತಿಯ ಪ್ರಕಾರ, ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನೂ ಭೂಪಿಂದರ್ ಸಿಂಗ್ ಹೂಡಾ ಭೇಟಿಯಾಗಲಿದ್ದಾರೆ. ಇದನ್ನೂ ಓದಿ:  ಸಕ್ರಿಯ ರಾಜಕೀಯಕ್ಕೆ ಎಳೆದು ತಂದಿದ್ದ ಮುಖಂಡರೇ ಈಗ ಸೋನಿಯಾ ಸೈದ್ಧಾಂತಿಕ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ವಿಷಾದನೀಯ! ಇದಕ್ಕೂ ಮುನ್ನ ಬುಧವಾರ ರಾತ್ರಿ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ

ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

Image
ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ ಪು ನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಧ್ಯೆ ರಾತ್ರಿಯಿಂದಲೇ ತೆರೆಯ ಮೇಲೆ ಅಪ್ಪು ರಾರಾಜಿಸುತ್ತಾ ಇದ್ದಾರೆ. ಇಂದು ಅವರ ಹುಟ್ಟುಹಬ್ಬವೂ ಆಗಿರುವುದರಿಂದ ಒಂದು ರೀತಿಯಲ್ಲಿ ಜಾತ್ರೆಯ ವಾತಾವರಣವೇ ಥಿಯೇಟರ್ ಮುಂದಿದೆ. ಆದರೆ, ಅಪ್ಪು ಇಲ್ಲ ಎನ್ನುವ ಕೊರಗು ಸದಾ ಇದ್ದೇ ಇರುತ್ತದೆ. ಜೇಮ್ಸ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ. ಖಂಡಿತಾ ಈ ಸೆಂಟಿಮೆಂಟ್ ಸಿನಿಮಾಗೆ ಬಂದ ಮೇಲೆ ವರ್ಕ್ ಆಗಲ್ಲ. ಸೆಂಟಿಮೆಂಟ್ ಆಚೆಯೂ ಸಿನಿಮಾ ಗೆದ್ದು ನಿಲ್ಲುತ್ತದೆ. ಕಾರಣ ‘ಪವರ್ ಸ್ಟಾರ್’. ಸಾಮಾನ್ಯವಾಗಿ ಕಥೆಯೇ ಇಲ್ಲದೇ ಸ್ಟಾರ್ ನಟರು ಚಿತ್ರ ಮಾಡುತ್ತಾರೆ ಎನ್ನುವ ಆರೋಪವಿದೆ. ಆದರೆ, ಜೇಮ್ಸ್ ಸಿನಿಮಾದಲ್ಲಿ ಭರ್ಜರಿ ಕಥೆಯಿದೆ. ಅದು ಕೇವಲ ನಮ್ಮ ನೆಲದ ಕಥೆ ಮಾತ್ರವಲ್ಲ, ವಿದೇಶಿ ನೆಲದಲ್ಲೂ ಬೇರೂರಿರುವಂತಹ ಕಥಾವಸ್ತುವನ್ನು ಅದು ಹೊಂದಿದೆ. ಅಪ್ಪು ಎಂಟ್ರಿನೇ ಮೈ ಜುಮ್ಮೆನಿಸುತ್ತದೆ. ಅದರಲ್ಲೂ ಕಾರ್ ಚೇಸಿಂಗ್ ದೃಶ್ಯ ನೋಡುಗರ ಎದೆ ನಡುಗಿಸುತ್ತದೆ. ಹೇಳಿ ಕೇಳಿ ಪುನೀತ್ ರಾಜ್ ಕುಮಾರ್ ಆಕ್ಷನ್ ಕಿಂಗ್. ಅವರಿಗೆ ಹೇಳಿ ಮಾಡಿಸಿದಂತೆಯೆ ಸಾಹಸ ದೃಶ್ಯಗಳ ಸಂಯೋಜನೆ. ರವಿವರ್ಮಾ ಅದ್ಭುತವಾಗಿ ಸ್ಟಂಟ್ ಕೊರಿಯೋಗ್ರಫಿ ಮಾಡಿದ್ದಾರೆ. ಅಪ್ಪು ಕಾಲುಗಳು ಬೆಳೆದದ್ದೇ ಡಾನ್ಸ್ ಮಾಡಲು. ಪುನೀತ್ ರಾಜ್ ಕುಮಾರ್ ಸಿನಿಮಾಗಳೆಂದರೆ, ಅಲ್ಲಿ ಹಾಡಿಗೆ ಹೆಚ್ಚು ಮ

ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ: ಸಿದ್ದರಾಮಯ್ಯ

Image
ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ: ಸಿದ್ದರಾಮಯ್ಯ ಬೆಂಗಳೂರು:  ಕರ್ನಾಟಕದ ರಾಜರತ್ನ ಪವರ್‌ಸ್ಟಾರ್ ಡಾ.ಪುನೀತ್ರಾಜ್‍ಕುಮಾರ್ ಅಭಿನಯಿಸಿರುವ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ಕೊಡಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುತ್ತೇನೆ. ಬೊಮ್ಮಾಯಿಗೆ ಪುನೀತ್ ಮೇಲೆ ಪ್ರೀತಿ ಇದೆ. ಪುನೀತ್‍ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದರ ಬಗ್ಗೆ ಒತ್ತಾಯ ಮಾಡಿದ್ದೇನೆ.  ಜನಪ್ರಿಯ ನಾಯಕ ರಾಜ್‍ಕುಮಾರ್ ಅವರು ಇದ್ದಾಗ, ನನ್ನನ್ನು ನಮ್ಮ ಕಾಡಿನವರು ಅಂತ ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಎಲ್ಲರೂ ಜೇಮ್ಸ್ ಚಿತ್ರ ನೋಡಿ, ಪುನೀತ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ನಾನು ಸಾಮಾನ್ಯವಾಗಿ ಚಲನಚಿತ್ರಗಳನ್ನು ನೋಡಲು ಥಿಯೇಟರ್‌ಗೆ ಹೋಗಲ್ಲ. ಯಾರಾದರು ಒತ್ತಾಯ ಮಾಡಿ ಕರೆದರೆ ಹೋಗಿರುತ್ತೇನೆ. ಸ್ವಲ್ಪ ನೋಡಿ ಎದ್ದು ಬಂದಿದ್ದೂ ಇದೆ. ಜೇಮ್ಸ್ ಚಿತ್ರವನ್ನು ಟಿವಿಯಲ್ಲಿ ಬಂದಾಗ ನೋಡುತ್ತೇನೆ. ನಾನು ಈ ಹಿಂದೆ ಪುನೀತ್ ಅವರು ನಟಿಸಿದ್ದ ಚಿತ್ರ ರಾಜಕುಮಾರ ನೋಡಲು ಥಿಯೇಟರ್‌ಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿ

Image
ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿ ಬೆಂಗಳೂರು:  ಡಾ. ಬಿ.ಆರ್. ಅಂಬೇಡ್ಕರ್ ಅವರು ಬುರ್ಕಾ ಮಾನಸಿಕ ಗುಲಾಮಗಿರಿ ಎಂದು ತಿಳಿಸಿದ್ದಾರೆ. ಅವರ ಮಾತನ್ನು ಹೇಳುವವರು, ಒಮ್ಮೆ ಅಂಬೇಡ್ಕರ್ ಹೇಳಿರುವುದನ್ನು ಓದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಮಕ್ಕಳು ಒಂದೇ ಅನ್ನೋದಕ್ಕೆ ಹಿಜಬ್‍ನ್ನು ಶಾಲೆಗಳಲ್ಲಿ ಬ್ಯಾನ್ ಮಾಡಲಾಗಿದೆ. ಎಲ್ಲರೂ ಒಂದಾಗಿ ಕಲಿಯಬೇಕು ಎನ್ನುವುದು ಉದ್ದೇಶವಾಗಿದೆ ಎಂದು ತಿಳಿಸಿದರು. ಸಾರ್ವಜನಿಕ ಸ್ಥಳದಲ್ಲಿ ಹಿಜಬ್, ಬುರ್ಕಾ ಬ್ಯಾನ್ ಮಾಡಿಲ್ಲ. ಫ್ರಾನ್ಸ್, ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಬುರ್ಕಾವನ್ನು ಬ್ಯಾನ್ ಮಾಡಲಾಗಿದೆ. ಭಾರತ ಆಗಲಿ, ಕರ್ನಾಟಕ ಆಗಲಿ ಹಿಜಬ್, ಬುರ್ಕಾವನ್ನು ಬ್ಯಾನ್ ಮಾಡಿಲ್ಲ ಎಂದರು. ಹಿಜಬ್ ವಿಚಾರ ಬಹಳ ಸ್ಪಷ್ಟ ಇದೆ. ಅವರ ಮೂಗಿಗೆ ನೇರವಾಗಿ ತೀರ್ಪು ಬಂದರೆ ಸಂವಿಧಾನ ಬಗ್ಗೆ ಮಾತಾಡ್ತಾರೆ. ಹಿಂದೆ ಶಾಬಾನ ವಿಚಾರವಾಗಿ ತೀರ್ಪು ಬಂದಾಗ ಹೀಗೆ ಮಾಡಿದ್ದರು. ಅಂದಿನ ರಾಜೀವ್ ಗಾಂಧಿ ಸರ್ಕಾರ ಬೆದರಿಕೆಗೆ ಮಣಿದಿತ್ತು. ಇಂದು ಆ ರೀತಿ ಮಣಿಯೋದಿಲ್ಲ. ಈಗ ಇರೋದು ಬಿಜೆಪಿ ಸರ್ಕಾರ. ನಿಮ್ಮ ಅಜೆಂಡಾ ಈಗ ತರಬೇಡಿ. ಜಿನ್ನಾ ಅಜೆಂಡಾ ಈಗ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು

ಹ್ಯಾಪಿ ಬರ್ತಡೇ ಪವರ್ ಸ್ಟಾರ್ ಬ್ಯಾನರ್ ಹೊತ್ತ ವಿಮಾನ : ಯಾವೆಲ್ಲ ಸ್ಥಳದಲ್ಲಿ ಹಾರಾಟ, ವೇಳಾಪಟ್ಟಿ ಡಿಟೇಲ್ಸ್

Image
ಹ್ಯಾಪಿ ಬರ್ತಡೇ ಪವರ್ ಸ್ಟಾರ್ ಬ್ಯಾನರ್ ಹೊತ್ತ ವಿಮಾನ : ಯಾವೆಲ್ಲ ಸ್ಥಳದಲ್ಲಿ ಹಾರಾಟ, ವೇಳಾಪಟ್ಟಿ ಡಿಟೇಲ್ಸ್ ಪು ನೀತ್ ರಾಜ್ ಕುಮಾರ್ ಜನ್ಮದಿನದ ನಿಮಿತ್ತ ಮತ್ತು ಜೇಮ್ಸ್ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹೂಗಳನ್ನು ಸುರಿಸುವ ಅಭಿಮಾನಿಗಳ ಆಸೆಗೆ ಪೊಲೀಸ್ ಇಲಾಖೆ ತಣ್ಣೀರೆರಚಿತ್ತು. ಮಾಡಿಕೊಂಡಿದ್ದ ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿತ್ತು. ಆದರೂ, ಪುಟ್ಟ ವಿಮಾನವೊಂದು ಬಾನಂಗಳದಿಂದಲೇ ‘ಹ್ಯಾಪಿ ಬರ್ತಡೇ ಪವರ್ ಸ್ಟಾರ್’ ಎಂಬ ಬ್ಯಾನರ್ ಹೊತ್ತು, ಶುಭಾಶಯ ಕೋರಿದೆ. ಬೆಳಗ್ಗೆ 9.30ಕ್ಕೆ ಬಾನಂಗಳಕ್ಕೆ ಹಾರಿದ ವಿಮಾನ ಕಂಡು ಪುನೀತ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಎರಡು ಗಂಟೆಗಳ ಕಾಲ ಈ ಬ್ಯಾನರ್ ಹೊತ್ತ ಮಿನಿ ವಿಮಾನ ಆಗಸದಲ್ಲಿ ಹಾರಾಡಿದೆ. ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟ ಈ ಪುಟ್ಟ ವಿಮಾನವು ಮೊದಲು ಪುನೀತ್ ರಾಜ್ ಕುಮಾರ್ ಅವರ  ಸಮಾಧಿ ಸ್ಥಳದ ಮೇಲೆ ಹಾರಾಟ ನಡೆಸಿತು. ಈ ಸ್ಥಳದಲ್ಲಿಯೇ ಸುಮಾರು 25ಕ್ಕೂ ಹೆಚ್ಚು ನಿಮಿಷ ಹಾರಾಟ ಮಾಡಿ, ಅಭಿಮಾನಿಗಳ ಹರ್ಷೋದ್ಘಾರಕ್ಕೆ ಸಾಕ್ಷಿ ಆಯಿತು. ನಂತರ ಸದಾಶಿವ ನಗರ, ಒರಾಯನ್ ಮಾಲ್, ರಾಜಾಜಿನಗರ, ಮಲ್ಲೇಶ್ವರಂ, ಗಾಂಧಿನಗರ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಹಾರಾಡಿದೆ. 9.30 ರಿಂದ ಶುರುವಾದ ಈ ಪುಟ್ಟ ವಿಮಾನದ ಹಾರಾಟ, 11.30ಕ್ಕೆ ಮತ್ತೆ ಜಕ್ಕೂರು ವಿಮಾನ ನಿಲ್ದಾಣ ತಲುಪಿದ ನಂತರ ಮುಕ್ತಾಯವಾಯಿತು.  ಸಂಜೆ ಮತ್ತೊಂದು ಸುತ್ತಿನ ಹಾರಾಟಕ್ಕೆ ಈ ವಿಮಾನ ಸಜ್ಜಾಗಿದೆ. 

ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

Image
ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್ ತುಮಕೂರು:  ಹಿಜಬ್ ವಿವಾದದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದರ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಇಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ಹೈಕೋರ್ಟ್ ತೀರ್ಪು ಸಂಬಂಧಿಸಿದಂತೆ ಮುಸ್ಲಿಂ ವ್ಯಾಪಾರಸ್ಥರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲ್ ಟ್ಯಾಕ್ಸ್ ಸರ್ಕಲ್, ಬಿ.ಜಿ.ಪಾಳ್ಯ ಸರ್ಕಲ್, ಗುಬ್ಬಿ ಗೇಟ್, ಕುಣಿಗಲ್ ರಿಂಗ್ ರಸ್ತೆಗಳಲ್ಲಿನ ಪ್ರಮುಖ ಗ್ಯಾರೇಜ್, ಆಟೋ ಮೊಬೈಲ್ಸ್ ಅಂಗಡಿಗಳು ಬಂದ್ ಆಗಿದ್ದು, ಉಳಿದಂತೆ ಯಥಾಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.  ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ್ದು, ಸರ್ಕಾರದ ವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿದೆ. ಹೀಗಾಗಿ ನಮಗೆ ಕಾನೂನಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮುಸಲ್ಮಾನ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. 

ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

Image
ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ ದಿ ಹೇಗ್:  ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿ ಭಾರತದ ನ್ಯಾಯಾಧೀಶರೊಬ್ಬರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮತ ಚಲಾಯಿಸಿದ್ದಾರೆ. ಯುಎನ್‌ನ ಉನ್ನತ ನ್ಯಾಯಾಲಯವು ಉಕ್ರೇನ್‌ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಬುಧವಾರ ಆದೇಶ ನೀಡಿತು. ರಷ್ಯಾದ ಒಕ್ಕೂಟವು ಫೆಬ್ರವರಿ 24 ರಂದು ಉಕ್ರೇನ್ ಭೂಪ್ರದೇಶದಲ್ಲಿ ಪ್ರಾರಂಭಿಸಿದ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಪ್ರಕರಣದ ಅಂತಿಮ ತೀರ್ಮಾನ ಬಾಕಿಯಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ನ್ಯಾಯಾಧೀಶ ಜೋನ್ ಡೊನೊಗ್ಯು ಹೇಳಿದ್ದಾರೆ. ರಷ್ಯಾ ದಾಳಿ ಕುರಿತು ಯುಎನ್‌ ನ್ಯಾಯಾಲಯಕ್ಕೆ ಉಕ್ರೇನ್‌ ಅರ್ಜಿ ಸಲ್ಲಿಸಿತ್ತು. ಆಕ್ರಮಣ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ವೇಳೆ ಭಾರತದ ನ್ಯಾಯಾಧೀಶ ದಲ್ವೀರ್‌ ಭಂಡಾರಿ ಅವರು ರಷ್ಯಾ ವಿರುದ್ಧ ಮತ ಹಾಕಿದ್ದಾರೆ. ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಸಭೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿದಿದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದೆ. ಆದರೆ ಭಾರತದ ನ್ಯಾಯಾಧೀಶ ಈಗ ರಷ್ಯಾ ವಿರುದ್ಧ ಮತ ಚಲಾಯಿಸಿದ್ದಾರೆ. ದಾಳಿ ನಡೆಸುತ್ತಿರುವ ರಷ್ಯಾವನ್ನು ತಡೆಯಬೇಕು. ಅದನ್ನು ನಿಲ್ಲಿಸುವ ಜವಾಬ್ದಾರಿಯೂ ನ್ಯಾ

ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

Image
ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ  ಸಿ ನಿಮಾ ನೋಡೋಕೆ ಹೋದಾಗ ಯಾವತ್ತೂ ನಾನು ಸಂಕಟದಿಂದ ಚಿತ್ರಮಂದಿರಕ್ಕೆ ಹೆಜ್ಜೆ ಇಟ್ಟವನು ಅಲ್ಲ. ಪುನೀತ್ ರಾಜ್ ಕುಮಾರ್ ಅವರ ‘ಜೇಮ್ಸ್’ ಚಿತ್ರಕ್ಕೆ ಹೋಗುವಾಗ ಅಂಥದ್ದೊಂದು ಸಂಕಟವಿತ್ತು. ಸಿನಿಮಾ ನೋಡುವ ಕುತೂಹಲದ ಜತೆಗೆ ನಾನು ತೆರೆಯ ಮೇಲೆ ಅಪ್ಪು ಸರ್ ನ ನೋಡೋಕೆ ಸಾಧ್ಯವಾ? ಅದು ನನ್ನಿಂದ ಆಗತ್ತಾ ಅನ್ನುವ ನೋವಿತ್ತು. ಆ ಒದ್ದಾಟದಲ್ಲೇ ಥಿಯೇಟರ್ ಗೆ ಹೋದೆ.  ಸಿನಿಮಾ ಶುರುವಾಗುತ್ತಿದ್ದಂತೆಯೇ ‘ಜೇಮ್ಸ್’ ಅಂತ ಟೈಟಲ್ ಬಂತು. ಎದೆ ಬಡಿತ ಜೋರಾಯಿತು. ಕಾರ್ ಚೇಸ್ ಮಾಡಿಕೊಂಡು ಅಪ್ಪು ಸರ್ ಬರುವಾಗ ಎದ್ದೇ ನಿಂತುಕೊಂಡು ಬಿಟ್ಟೆ. ಆ ರೀತಿಯಲ್ಲಿ ಅಪ್ಪು ಸರ್ ಪಾತ್ರವನ್ನು ಎಂಟ್ರಿ ಕೊಡಿಸಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಇದೊಂದು ದೇಶಾಭಿಮಾನ ಇಟ್ಟುಕೊಂಡ ನಾಯಕನ ಕುರಿತಾದ ಚಿತ್ರ. ಅಪ್ಪು ಈವರೆಗೂ ನಾನಾ ರೀತಿಯ ಚಿತ್ರಗಳನ್ನು ಮಾಡಿದ್ದಾರೆ. ಆದರೆ, ಈ ಜಾನರ್ ನ ಚಿತ್ರದಲ್ಲಿ ಅವರು ನಟಿಸಿರಲಿಲ್ಲ. ಆ ಕೊರತೆಯನ್ನು ನೀಗಿಸಿದಂತಹ ಚಿತ್ರ ಇದಾಗಿದೆ.  ಸೆಕ್ಯುರಿಟಿ ಏಜೆನ್ಸ್, ಡ್ರಗ್ಸ್ ಮಾಫಿಯಾ, ದೇಶಪ್ರೇಮ, ಗೆಳೆತನ ಹೀಗೆ ಹಲವು ಕವಲುಗಳ ಕಥೆ ಸಿನಿಮಾದಲ್ಲಿದ್ದರೂ, ಅಷ್ಟಕ್ಕೂ ಗೆಲ್ಲುವುದು ಪುನೀತ್ ರಾಜ್ ಕುಮಾರ್ ಎಂಬ ಸಂತೋಷ್ ಪಾತ್ರ. ನಿರ್ದೇಶಕ ಚೇತನ್ ಕುಮಾರ್ ಅವರ ಕಥೆ ಹೇಳುವ ಶೈಲಿಯೇ ಚೆನ್ನಾಗಿದೆ. ಯಾವುದು ಎಷ್ಟಿರಬೇಕೋ, ಯಾವ ಪಾತ್ರಕ್ಕ

ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

Image
ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್ ವಾಷಿಂಗ್ಟನ್:  ಉಕ್ರೇನ್-ರಷ್ಯಾ ನಡುವೆ ಯುದ್ಧ ತೀವ್ರಗತಿಯಲ್ಲಿ ಸಾಗುತ್ತಿದೆ. ಈ ನಡುವೆ ರಷ್ಯಾ ಸೇನೆ 1,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಕೊಟ್ಟಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿದ್ದಾರೆ. ಈ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾ ಅಧ್ಯಕ್ಷ ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದು ಕರೆದಿದ್ದಾರೆ. ಶ್ವೇತಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾ – ಉಕ್ರೇನ್ ಯುದ್ಧ ಕುರಿತು ಮಾತನಾಡಿದ ಬೈಡನ್, ಉಕ್ರೇನ್‍ನಲ್ಲಿ ರಷ್ಯಾದ ನಾಯಕನ ದಾಳಿಯು ಹೆಚ್ಚು ನಾಗರಿಕರನ್ನು ಬಲಿತೆಗೆದುಕೊಂಡಿತು. ‘ನೂರಾರು’ ಜನರು ಆಶ್ರಯ ಪಡೆದಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಇದು ಅಮಾನವೀಯವಾಗಿದೆ. ಈ ಮೂಲಕ ಪುಟಿನ್ ‘ಯುದ್ಧ ಅಪರಾಧಿ’ ಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಂದರು ನಗರವಾದ ಮಾರಿಯುಪೋಲ್‍ನ ಅಧಿಕಾರಿಗಳು ಡ್ರಾಮಾ ಥಿಯೇಟರ್‌ನಲ್ಲಿ ಸತ್ತವರನ್ನು ಎಣಿಸಲು ಹೆಣಗಾಡುತ್ತಿದ್ದರು. ಕಟ್ಟಡದ ಅವಶೇಷಗಳಿಂದ ದಟ್ಟವಾದ ಹೊಗೆ ಏರಿತುತ್ತಿದೆ ಎಂದು ಹೇಳಿದ್ದಾರೆ. ಫೆಬ್ರವರಿ 24 ರಂದು ಪುಟಿನ್ ಆಕ್ರಮಣ ಮಾಡಿದ ನಂತರ ಉಕ್ರೇನ್‍ನಾದ್ಯಂತ ನಾಗರಿಕರ ಮೇಲಿನ ಹಲ್ಲೆ ನಡೆಯುತ್ತ ಇದೆ. ಇತ್ತೀಚೆಗೆ ಇದು ಅತೀರೇಕಕ್ಕೆ ಹೋಗಿದ್ದು, ಮನೆಗಳು, ಆಸ್ಪತ್ರೆಗಳು, ಆಂಬ್ಯುಲೆನ್ಸ್ ಗಳು ಮತ್ತು ಗಿರಣಿ ಅಂಗಡಿಗಳ ಮೇಲೆಯೇ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದಾರೆ. ಇದರಿಂದ ಅಲ್

ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಮೇಯರ್ ಬಿಡುಗಡೆ

Image
ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಮೇಯರ್ ಬಿಡುಗಡೆ ಕೀವ್:  ಕಳೆದ ವಾರ ರಷ್ಯಾ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ನ ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರು ಬಿಡುಗಡೆಗೊಂಡಿದ್ದಾರೆ. ಈ ಬಗ್ಗೆ ಉಕ್ರೇನ್‍ನ ರಕ್ಷಣಾ ಸಚಿವಾಲಯ ಅಧಿಕೃತವಾದ ಮಾಹಿತಿ ಹಂಚಿಕೊಂಡಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೇನ್ಸ್ಕಿ ಅವರು ಮೆಲಿಟೊಪೋಲ್‍ನ ಮೇಯರ್‍ನೊಂದಿಗೆ ಮಾತನಾಡುತ್ತಿರುವ ತುಣುಕನ್ನು ಬಿಡುಗಡೆ ಮಾಡಿದೆ.  ಈ ವೀಡಿಯೋದಲ್ಲಿ ಮೇಯರ್ ಅವರು ಝೆಲೆನ್ಸ್ಕಿಗೆ ಧನ್ಯವಾದ ತಿಳಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ ನಾವು ನಮ್ಮವರನ್ನು ಬಿಟ್ಟುಕೊಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಮೇಯರ್‌ನ್ನು ಬಿಡುಗಡೆಗೊಳಿಸಲು ಉಕ್ರೇನ್ ರಷ್ಯಾದ 9 ಸೈನಿಕರನ್ನು ಹಸ್ತಾಂತರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಡೋರೊವ್‍ನ್ನು ಕಳೆದ ವಾರ ರಷ್ಯಾ ಪಡೆಗಳು ಕಿಡ್ನಾಪ್ ಮಾಡಿದ್ದರು. ಫೆಡೋರೊವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಝೆಲೆನ್ಸ್ಕಿಯ ಕಚೇರಿ ಈ ಹಿಂದೆ ಹೇಳಿತ್ತು ಆದರೆ ಯಾವುದೇ ವಿವರಗಳನ್ನು ನೀಡಿಲ್ಲ. ಫೆಡೋರೊವ್ ಅವರನ್ನು ಮಾರ್ಚ್ 11 ರಂದು ರಷ್ಯಾದ ಪಡೆಗಳು ಅಪಹರಿಸಿದ್ದವು. 10 ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ ಎಂದು ಉಕ್ರೇನ್ ಸಂಸತ್ ಟ್ವಿಟ್ಟರ್‌ನಲ್ಲಿ ತಿಳಿಸಿತ್ತು. ಮೇಯರ್ ಅವರು ನಗರದ ಬಿಕ್ಕಟ್ಟಿನ ಕೇಂದ್ರದಲ್ಲಿ ಮೂಲಸೌಕರ್ಯ ಪೂರೈಕೆಯಲ್ಲಿನ ಸಮಸ್ಯೆಗಳ ಬಗ್ಗ

ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

Image
ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ ಬೆಳಗಾವಿ:  ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ನೋಡಲು ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರದಲ್ಲೇ ಆಗಮಿಸಿ ಅಭಿಮಾನ ಮೆರೆದಿದ್ದಾರೆ. ನಗರದ ಚಿತ್ರಾ ಚಿತ್ರಮಂದಿರಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವಾಸಿ ನಿವೃತ್ತ ಯೋಧ ವಿನಾಯಕ ಮೇದಾರ್ ಅವರು ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿದ್ದಾರೆ. ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿ ಆಗಿರುವ ನಿವೃತ್ತ ಯೋಧ ವಿನಾಯಕ ಅವರು ಚಿತ್ರಾ ಟಾಕೀಸ್‍ನಲ್ಲಿ ಕೇಕ್ ಕಟ್ ಮಾಡುವ ಮೂಲಕ ಪುನೀತ್ ಅವರ ಹುಟ್ಟುಹಬ್ಬ ಆಚರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪು ಕೊನೆಯ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಾನು ನಿವೃತ್ತ ಯೋಧನಾಗಿ ಸೇನಾ ಸಮವಸ್ತ್ರದಲ್ಲೇ ಚಿತ್ರ ನೋಡಲು ಬಂದಿದ್ದೇನೆ. ಅಪ್ಪು ಕೊನೆಯ ಸಿನಿಮಾ ಅಂತ ನಮಗೇನು ದುಃಖ ಇಲ್ಲ. ನಮ್ಮ ಎದೆಯಲ್ಲಿ ಎಂದೆಂದಿಗೂ ಅಪ್ಪು ಅಜರಾಮರ. ಇದು ಅಪ್ಪು ಅವರ ಕೊನೆಯ ಚಿತ್ರ ಅಂತ ಯಾರೂ ದಯವಿಟ್ಟು ಹೇಳಬೇಡಿ ಎಂದು ಮನವಿ ಮಾಡಿಕೊಂಡರು.

ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

Image
ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ ಬೆಂಗಳೂರು:  ಸ್ಯಾಂಡಲ್‍ವುಡ್ ನಟ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಜನುಮದಿನವನ್ನು ರಾಜ್ಯದ ಜನತೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ನಡುವೆ ನಟಿ ಸುಮಲತಾ ಅಂಬರೀಶ್ ಅವರು ಪುನೀತ್ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯ ಅಪ್ಪುಗೆ ಶುಭ ಕೋರಿದ್ದಾರೆ. ಮೊದಲಿನಿಂದಲೂ ವರನಟ ಡಾ. ರಾಜ್‍ಕುಮಾರ್ ಹಾಗೂ ರೆಬೆಲ್‍ಸ್ಟಾರ್ ಅಂಬರೀಶ್ ಕುಟುಂಬಗಳು ಬಹಳ ಆತ್ಮೀಯತೆಯನ್ನು ಹೊಂದಿದೆ. ಅಲ್ಲದೇ ಪುನೀತ್ ಚಿಕ್ಕ ವಯಸಿನಿಂದಲೂ ಅಂಬರೀಶ್ ಅವರನ್ನು ಪ್ರೀತಿಯಿಂದ ಅಂಬಿ ಮಾಮ ಎಂದು ಕರೆಯುತ್ತಿದ್ದರು. ಅಂದಿನಿಂದಲೂ ಅಂಬಿ ಕುಟುಂಬಕ್ಕೆ ರಾಜ್ ಕುಟುಂಬ ಬಹಳ ಹತ್ತಿರವಾಗಿದ್ದು, ಇತ್ತೀಚೆಗಷ್ಟೇ ಪುನೀತ್ ಅಗಲಿಕೆಯಿಂದ ಸುಮಲತಾ ಅವರು ದುಃಖ ವ್ಯಕ್ತಪಡಿಸಿದ್ದರು. ಅಲ್ಲದೇ ಪುನೀತ್ ಸಾವಿನಿಂದ ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳುಗಿತ್ತು. ಇದೀಗ ಪುನೀತ್ ಹುಟ್ಟುಹಬ್ಬವನ್ನು ರಾಜ್ಯದ ಜನತೆ ಹಬ್ಬದಂತೆ ಬಹಳ ಸಡಗರದಿಂದ ಆಚರಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‍ವುಡ್ ಕಲಾವಿದರೂ ಸಹ ಪುನೀತ್ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿ ಮಳೆಯನ್ನೇ ಹರಿಸುತ್ತಿದ್ದಾರೆ. ಈ ಮಧ್ಯೆ ನಟಿ, ಸಂಸದೆ ಸುಮಲತಾ ಅವರು, ಪುನೀತ್ ಫ್ಯಾಮಿಲಿ ಜೊತೆಗೆ ತಮ್ಮ ಫ್ಯಾಮಿಲಿ ಕ್ಲಿಕ್ಲಿಸಿಕೊಂಡಿರುವ ಫೋಟೋ ಹಾಗೂ ದೊಡ್ಮನೆ ಹುಡ್ಗ ಸಿನಿಮ

ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ

Image
ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ ಕಲಬುರಗಿ:  ಡಾ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನೆನೆದು ಸಿನಿರಂಗದವರು ಮಾತ್ರವಲ್ಲ ಅವರ ಸಮಾಜಮುಖಿ ಕೆಲಸಗಳನ್ನು ನೆನೆದು ರಾಜಕೀಯ ಮುಖಂಡರು ಅವರನ್ನು ಗುಣಗಾನ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು ಅಪ್ಪು ನೆನೆದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮಾಜಿ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸಹ ಅಪ್ಪು ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ. ಖರ್ಗೆ ಅವರು ಟ್ವಿಟ್ಟರ್‌ನಲ್ಲಿ, ಕಾಂಗ್ರೆಸ್ ಯೂಥ್ ಐಕಾನ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿರುವುದು ನಿಜಕ್ಕೂ ನಂಬಲಾರದ ಸತ್ಯ. ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ಅವರ ಯೋಚನೆಗಳು, ಯೋಜನೆಗಳು ಎಂದೆಂದಿಗೂ ನಮ್ಮೊಂದಿಗಿರುತ್ತದೆ ಎಂದು ಕರುನಾಡ ಕುವರನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ. ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿ, ಅನೇಕರಿಗೆ ತೆರೆಮರೆಯಲ್ಲಿ ನಿಂತು ಬದುಕು ಕಟ್ಟಿ ಕೊಟ್ಟ ರಾಜಕುಮಾರ, ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್‍ಕುಮಾರ್ ಅವರ ಜಯಂತಿಯಂದು ಅವರನ್ನ ಹೃದಯ ಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲಾಗುವುದಿಲ್ಲ: ಮೇಘಾಲಯ ಹೈಕೋರ್ಟ್

Image
  ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲಾಗುವುದಿಲ್ಲ: ಮೇಘಾಲಯ ಹೈಕೋರ್ಟ್ ಶಿಲ್ಲಾಂಗ್:  ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಒಳ ಉಡುಗಳಿದ್ದಾಗಲೂ ಎಸಗುವ ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೆ ಸಮ ಎಂದು ಮೇಘಾಲಯ ಹೈಕೋರ್ಟ್‌ ಹೇಳಿದೆ. ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ನಡೆಸಿ ನ್ಯಾಯಾಲಯ, ಅಪರಾಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 (ಬಿ) ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ತಿಳಿಸಿದೆ. 10 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ.ಡಿಯೆಂಗ್ಡೊ ಅವರ ವಿಭಾಗೀಯ ಪೀಠವು, ಅಪರಾಧಿಗೆ ಶಿಕ್ಷೆ ವಿಧಿಸಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಈ ಘಟನೆಯು 2006ರ ಸೆಪ್ಟೆಂಬರ್ 23ರಂದು ನಡೆದಿದೆ. ಒಂದು ವಾರದ ನಂತರ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಬಾಲಕಿಯ ಖಾಸಗಿ ಭಾಗಗಳಲ್ಲಿ ನೋವು ಕಾಣಿಸಿಕೊಂಡಿತ್ತು. ತಾನು ಆಕೆಯ ಒಳ ಉಡುಪುಗಳನ್ನು ತೆಗೆದಿಲ್ಲ ಎಂದು ಆರೋಪಿ ಹೇಳಿದರೂ, ಲೈಂಗಿಕ ದೌರ್ಜನ್ಯಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. 2018ರ ಅಕ್ಟೋಬರ್‌ 31ರಂದು ವಿಚಾರಣಾ ನ್ಯಾಯಾಲಯ, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 25,000 ದಂಡ ವಿಧಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಪರಾಧಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆದರೆ ವಿಚ