Rishabh Pant: ಅಂದು ಧೋನಿಯ 90 ರನ್ ವಿಶ್ವಕಪ್ ಗೆಲ್ಲಿಸಿತು: ಪಂತ್ 96 ರನ್ಗೆ ಔಟಾದ ಬಗ್ಗೆ ಗಂಭೀರ್ ಮಾತು
Rishabh Pant: ಅಂದು ಧೋನಿಯ 90 ರನ್ ವಿಶ್ವಕಪ್ ಗೆಲ್ಲಿಸಿತು: ಪಂತ್ 96 ರನ್ಗೆ ಔಟಾದ ಬಗ್ಗೆ ಗಂಭೀರ್ ಮಾತು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಗೌತಮ್ ಗಂಭೀರ್ ಕೂಡ ಪಂತ್ ಆಟವನ್ನು ಕೊಂಡಾಡಿದ್ದಾರೆ. ರಿಷಭ್ ಪಂತ್ 97 ರನ್ಗಳ ಇನ್ನಿಂಗ್ಸ್ ಅನ್ನು ಸ್ಮಾರ್ಟ್ ಕ್ರಿಕೆಟ್ ಎಂದಿರುವ ಗಂಭಿರ್, ಎಂಎಸ್ ಧೋನಿ 2011ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಸಿಡಿಸಿದ 90 ರನ್ಗೆ ಹೋಲಿಕೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಭಾರತ (India vs Sri Lanka) ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಮೊದಲ ದಿನ ಸಂಪೂರ್ಣ ಯಶಸ್ಸು ಸಾಧಿಸಿದ ಟೀಮ್ ಇಂಡಿಯಾ (Team India) ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಅರ್ಧಶತಕದ ಅಂಚಿನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಇದ್ದರೆ, ರವಿಚಂದ್ರನ್ ಅಶ್ವಿನ್ 10 ರನ್ ಗಳಿಸಿ ಮೊದಲ ದಿನದಾಟ ಅಂತ್ಯಗೊಳಿಸಿದ್ದು, 500 ರನ್ಗಳ ಟಾರ್ಗೆಟ್ ಮೇಲೆ ಭಾರತ ಕಣ್ಣಿಟ್ಟಿದೆ. ಟೀಮ್ ಇಂಡಿಯಾ ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಕಲೆಹಾಕಲು ಕಾರಣವಾಗಿದ್ದು ರಿಷಭ್ ಪಂತ್ (Risbah Pant). ಸ್ಫೋಟಕ ಆಟವಾಡಿ ಲಂಕಾನ್ನರ ಬೆವರಿಳಿಸಿ ಶತಕ ವಂಚಿತರಾಗಿ ಪಂತ್ 96 ರನ್ಗೆ ನಿರ್ಗಮಿಸಿದರು. ಥೇಟ್ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಪಂತ್ ಆಟದ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರ