Posts

Showing posts from March 6, 2022

ಆಪ್​ ಈಗ ರಾಷ್ಟ್ರೀಯ ಪಕ್ಷ, ಅರವಿಂದ್​ ಕೇಜ್ರಿವಾಲ್​ ಪ್ರಧಾನಿಯಾಗಲಿದ್ದಾರೆ: ರಾಘವ್ ಚಡ್ಡಾ

Image
ಆಪ್​ ಈಗ ರಾಷ್ಟ್ರೀಯ ಪಕ್ಷ, ಅರವಿಂದ್​ ಕೇಜ್ರಿವಾಲ್​ ಪ್ರಧಾನಿಯಾಗಲಿದ್ದಾರೆ: ರಾಘವ್ ಚಡ್ಡಾ ಪಂಜಾಬ್​ನ ಆರ್ಥಿಕತೆ ಸುಧಾರಣೆಯನ್ನು ಪುನರುಜ್ಜೀವನಗೊಳಿಸಿ, ಇಲ್ಲಿನ ವೈಭವನ್ನು ಮರುಸ್ಥಾಪಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಈ ವಿಜಯ ನಮ್ಮ ಪಾಲಿಗೆ ಎಷ್ಟು ಮುಖ್ಯ ಎಂಬುದು ನಮಗೇ ಗೊತ್ತು ಎಂದು ರಾಘವ್ ಚಡ್ಡಾ ಹೇಳಿದ್ದಾರೆ. ದೆಹಲಿಯಲ್ಲಿ ಮಾತ್ರ ಆಡಳಿತದಲ್ಲಿದ್ದ  ಆಮ್​ ಆದ್ಮಿ ಪಕ್ಷ  ಇದೀಗ ಪಂಜಾಬ್​ನಲ್ಲೂ ಸರ್ಕಾರ ರಚನೆ ಮಾಡುತ್ತಿದೆ. ಪಂಜಾಬ್​ನಲ್ಲಿ ಅಧಿಕಾರದಲ್ಲಿದ್ದ ಒಂದು ರಾಷ್ಟ್ರೀಯ ಪಕ್ಷವನ್ನು ಸೋಲಿಸಿ, ಜಯ ಸಾಧಿಸಿದ್ದು ಸಾಧನೆಯಲ್ಲದೆ ಇನ್ನೇನೂ ಅಲ್ಲ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಈ ಗೆಲುವಿನ ಬೆನ್ನಲ್ಲೇ ಆಪ್​ ನಾಯಕ ರಾಘವ್ ಚಡ್ಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ,  ಆಮ್ ಆದ್ಮಿ ಪಕ್ಷ, ಪ್ರಾದೇಶಿಕ ಪಕ್ಷವಾಗಿ ಉಳಿದಿಲ್ಲ. ಅದೀಗ ರಾಷ್ಟ್ರೀಯ ಪಕ್ಷವಾಗಿ ಮಾರ್ಪಾಡಾಗಿದೆ. ಅತಿ ಶೀಘ್ರದಲ್ಲಿಯೇ ಕಾಂಗ್ರೆಸ್​ನ್ನು ಹಿಂದಿಕ್ಕಿ, ಅತಿದೊಡ್ಡ ಮತ್ತು ಪ್ರಭಾವಿ ಪ್ರತಿಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.  ಅಷ್ಟೇ ಅಲ್ಲ, ಮುಂದೆ ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಖಂಡಿತವಾಗಿಯೂ ಒಂದಲ್ಲ ಒಂದು ದಿನ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದೂ ಪ್ರತಿಪಾದಿಸಿದ್ದಾರೆ. ಆಪ್​ ಪಾಲಿಗೆ ಇಂದು ಅದ್ಭುತವಾದ ದಿನ. ಯಾಕೆಂದರೆ ನಮ್ಮ ಪಕ್ಷ ಒಂದು ರಾಷ್ಟ್ರೀಯ ಪಕ್ಷವೆಂದು ಇಂದು ಸಾಬೀತಾಯ್ತು. ದೇವರು ನಮಗೆ ಆಶ

37 ವರ್ಷಗಳಲ್ಲೇ ಇದೇ ಮೊದಲು: ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ, ಸತತ 2ನೇ ಬಾರಿಗೆ 'ಯೋಗಿ ಸರ್ಕಾರ'!!

Image
  ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ನಿರ್ಣಾಯಕ ಹಂತದಲ್ಲಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತದತ್ತ ಸಾಗಿದೆ. ಅಂತೆಯೇ ಇಲ್ಲಿ ಬಿಜೆಪಿ 37 ವರ್ಷಗಳ ದಾಖಲೆ ಬರೆದಿದ್ದು, ಸತತ 2ನೇ ಬಾರಿಗೆ 'ಯೋಗಿ ಸರ್ಕಾರ' ರಚನೆಯಾಗುತ್ತಿದೆ. By : Naveen Online Desk ಲಖನೌ:  ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ನಿರ್ಣಾಯಕ ಹಂತದಲ್ಲಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತದತ್ತ ಸಾಗಿದೆ. ಅಂತೆಯೇ ಇಲ್ಲಿ ಬಿಜೆಪಿ 37 ವರ್ಷಗಳ ದಾಖಲೆ ಬರೆದಿದ್ದು, ಸತತ 2ನೇ ಬಾರಿಗೆ 'ಯೋಗಿ ಸರ್ಕಾರ' ರಚನೆಯಾಗುತ್ತಿದೆ.

ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?

Image
ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ? ಚಂಡೀಗಢ:  ಪಂಜಾಬ್ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) 88 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕ್ಲೀನ್ ಸ್ವೀಪ್ ಸಾಧನೆಯತ್ತ ಸಾಗಿದೆ. ಕಳೆದ 70 ವರ್ಷಗಳಿಂದ ಪಂಜಾಬ್ ರಾಜ್ಯವನ್ನು ಆಳಿದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (SDA) ಸಾಂಪ್ರದಾಯಿಕ ಪಕ್ಷಗಳಿಗಿಂತ ಈಗ ಎಎಪಿ ಮುನ್ನಡೆ ಸಾಧಿಸಲು ಐದು ಪ್ರಮುಖ ಕಾರಣಗಳಿವೆ. ಪಂಜಾಬ್‌ನಲ್ಲಿ ಬಿಜೆಪಿ-ಅಕಾಲಿದಳ, ಕಾಂಗ್ರೆಸ್ ಸರ್ಕಾರಗಳ ಆಡಳಿತವನ್ನು ನೋಡಿದ್ದರು. ಹೊಸ ಪಕ್ಷಕ್ಕೆ ಅಧಿಕಾರ ನೀಡುವ ಬಯಕೆಯನ್ನು ಹೊಂದಿದ್ದರು. ಇದಕ್ಕೆ ಪೂರಕ ಎನ್ನುವಂತೆ ಒಂದು ಅವಕಾಶವನ್ನು ಎಎಪಿ ಕೇಳಿತ್ತು. ದೆಹಲಿ ಸರ್ಕಾರದ ಜನಪ್ರಿಯ ಯೋಜನೆಗಳು ಪಂಜಾಬ್ ಜನರ ಗಮನ ಸೆಳೆದಿವೆ. ಶಾಲೆಗಳ ಅಭಿವೃದ್ಧಿ, ಉಚಿತ ವಿದ್ಯುತ್ – ನೀರು ಜನರನ್ನು ಸೆಳೆಯಲು ಮತ್ತೊಂದು ಕಾರಣವಾಗಿದೆ. ಬಿಜೆಪಿಗೆ ಅಸ್ತಿತ್ವ ಇಲ್ಲ, ಮಾಜಿ ಸಿಎಂ ಅಮರೀಂದರ್ ಸಿಂಗ್ ವಯಸ್ಸಿನ ಕಾರಣ ಪಂಜಾಬ್ ಜನರು ಕೈ ಬಿಟ್ಟರು ಎಂದು ವಿಶ್ಲೇಷಿಸಲಾಗಿದೆ. ಅಕಾಲಿದಳ ಬಿಜೆಪಿ ಜೊತೆಗಿದ್ದ ಕಾರಣ ಮತ್ತು ಈಗಾಗಲೇ ಆಡಳಿತ ನೋಡಿರುವ ಕಾರಣ ಜನ ತಿರಸ್ಕರಿಸಿದ್ದಾರೆ. ಇನ್ನು ಕಾಂಗ್ರೆಸ್ ಒಳ ಬಂಡಾಯ, ನಾಯಕರ ನಡುವಿನ ಜಗಳ, ಸಿಎಂ ಅಭ್ಯರ್ಥಿ ಘೋಷಣೆ ವಿಳಂಬವೂ ಆಪ್‌ಗೆ ನೆರವುವಾಗಿದೆ. ಕಳೆದ ಬಾರಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದ ಆಪ್ ಈ ಬಾರಿ ಅದ್ಭುತವಾಗಿ ಆಗಿ ಪ್ರಚಾರ ನಡೆಸಿತ್

ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸ

Image
  ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸ ಬೆಳಗಾವಿ:  ನಗರದ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಬೆಳಗಾವಿಯಲ್ಲಿ ಭಾರತ – ಜಪಾನ್ ಜಂಟಿ ಸಮರಾಭ್ಯಾಸ ಆರಂಭಿಸಿದ್ದು ಇಂದು ಭಾರತ-ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ಜರುಗಿತು. ನಗರದ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್‍ಯಲ್ಲಿ ಫೆಬ್ರವರಿ 27ರಿಂದ ನಡೆಯುತ್ತಿರುವ ಭಾರತ ಜಪಾನ್ ಜಂಟಿ ಸಮರಾಭ್ಯಾಸ ಮಾರ್ಚ್ 10ರವರೆಗೆ ನಡೆಯಲಿದೆ. ಇಂದಿನ ಮೂರು ದಿನಗಳ ಕಾಲ ಭಾರತ ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ಕೂಡ ನಡೆಯುತ್ತಿದೆ. ವಾರ್ಷಿಕ ತರಬೇತಿ ಭಾಗವಾಗಿರುವ ‘ಧರ್ಮ ಗಾರ್ಡಿಯನ್ 2022’ ಕಾರ್ಯಕ್ರಮ ಇದ್ದಾಗಿದ್ದು 2018ರಿಂದಲೂ ಜಂಟಿ ಸಮರಾಭ್ಯಾಸ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್‍ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‍ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿವೆ. ಸಮರಾಭ್ಯಾಸದಲ್ಲಿ ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಯಲಿದೆ. ಇದರ ಜೊತೆಗೆ ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ, ಮನೆಗಳ ಮೇಲಿನ ಡ್ರಿಲ್‍ಗಳು, ಭಯೋತ್ಪಾದಕ ಹಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಸೇರಿದಂತೆ ನಿರಾಯುಧ ಯುದ್ಧ ಸೇರಿ

ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ

Image
  ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಚೌ ಕಬಾರ ಕಿರುಚಿತ್ರಕ್ಕಾಗಿ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ಪಡೆದಿರುವ ನಿರ್ದೇಶಕ ರಾಘು ಶಿವಮೊಗ್ಗ ಈಗ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು, ಅರಸಿ ಸೇರಿದಂತೆ ಅನೇಕ ಹಿಟ್ ಧಾರಾವಾಹಿಗಳಲ್ಲಿ ನಟಿಸಿದರು. ಮದರಂಗಿ, ಜನುಮದ ಜೋಡಿ ಧಾರಾವಾಹಿಗಳಿಗೆ ನಿರ್ದೇಶನ ಮಾಡಿದರು. ಅಲ್ಲಿಂದ ಸಿನಿಮಾ ರಂಗಕ್ಕೂ ಕಾಲಿಟ್ಟು ‘ಚೂರಿಕಟ್ಟೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು.  ಪ್ರವೀಣ್ ನಾಯಕನಟನಾಗಿ ನಟಿಸಿರುವ ಈ ಸಿನಿಮಾ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.  ಅಲ್ಲಿಂದ ರಾಘು ಮತ್ತೆ ನಟನೆಯತ್ತ ಮುಖ ಮಾಡಿದರು. ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಸಿನಿಮಾದ ಬೆಂಜಮನ್ ಪಾತ್ರ  ರಾಘು ಶಿವಮೊಗ್ಗ ವೃತ್ತಿ ಬದುಕಿಗೆ ಮತ್ತೊಂದು ತಿರುವು ನೀಡಿತು. ಅಲ್ಲಿಂದ ಇದೀಗ ನಟನೆಯಲ್ಲೇ ಬ್ಯುಸಿಯಾಗಿದ್ದಾರೆ. ಲವ್ ಯೂ ರಚ್ಚು,  ರೂಮ್ ಬಾಯ್, ಸದ್ದು ವಿಚಾರಣೆ ನಡೆಯುತ್ತಿದೆ, ರಾಘವೇಂದ್ರ ಸ್ಟೋರ್ಸ್ ಸೇರಿದಂತೆ ಎಂಟು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸದ್ಯ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದಲ್ಲೂ ರಾಘು ಶಿವಮೊಗ್ಗ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ನಟನೆಯ ಜತೆ ಜತೆಗೆ ಪೆಂಟಗನ್ ಸಿನಿಮಾದ ಒಂದು ಕಥೆಗೆ ಇವರ ನಿರ್ದೇಶನವಿದೆ. 

ಮಹಿಳಾ ದಿನಾಚರಣೆ ಪ್ರಯುಕ್ತ ಕೇರಳದಲ್ಲಿ ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ

Image
  ಮಹಿಳಾ ದಿನಾಚರಣೆ ಪ್ರಯುಕ್ತ ಕೇರಳದಲ್ಲಿ ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ ತಿರುವನಂತಪುರಂ:  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕೇರಳದ ಕೊಚ್ಚಿ ಮೆಟ್ರೋ ರೈಲಿನಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಮೆಟ್ರೋದಲ್ಲಿ ಪಯಾಣಿಸಲು ಅನುಮತಿ ನೀಡಲಾಗಿದೆ. ಈ ಕುರಿತಂತೆ ಕೊಚ್ಚಿ ಮೆಟ್ರೋ ರೈಲ್ವೇ(ಕೆಎಂಆರ್‍ಎಲ್), ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಮಹಿಳೆಯರು ಕೊಚ್ಚಿ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ನಿಲ್ದಾಣಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದೆ. ಇಷ್ಟಲ್ಲದೇ ಈ ವಿಶೇಷ ದಿನದಂದು 10 ಪ್ರಮುಖ ನಿಲ್ದಾಣಗಳಲ್ಲಿ ಮಹಿಳಾ ಸಿಬ್ಬಂದಿ ನಿಲ್ದಾಣ ನಿಯಂತ್ರಕರಾಗಿರುತ್ತಾರೆ ತಿಳಿಸಿದೆ.  ಕೊಚ್ಚಿ ಮೆಟ್ರೋ ಟ್ವೀಟ್‍ನಲ್ಲಿ, ಮಾರ್ಚ್ 8, ಅಂತರಾಷ್ಟ್ರೀಯ ಮಹಿಳಾ ದಿನದಂದು, ಮಹಿಳೆಯರು ಕೊಚ್ಚಿ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಸ್ಟೇಷನ್‍ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದಿದೆ. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮೊದಲಿಗೆ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‍ನಲ್ಲಿ 1975ರಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಲಾಯಿತು. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ,

ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದ ಧೋನಿ – ಮುಗಿಬಿದ್ದ ಅಭಿಮಾನಿಗಳು

Image
  ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದ ಧೋನಿ – ಮುಗಿಬಿದ್ದ ಅಭಿಮಾನಿಗಳು ಗಾಂಧೀನಗರ:  15ನೇ ಆವೃತ್ತಿ ಐಪಿಎಲ್‍ಗೆ ಇನ್ನೇನು ಕೆಲದಿನಗಳಷ್ಟೇ ಭಾಗಿ ಉಳಿದುಕೊಂಡಿದೆ. ಇದೀಗ ಐಪಿಎಲ್ ಸಿದ್ಧತೆಗಾಗಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದೆ. ಸೂರತ್‍ನಲ್ಲಿ ಕ್ಯಾಂಪ್ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕ ಧೋನಿ, ಅಂಬಾಟಿ ರಾಯುಡು ಸೇರಿದಂತೆ ಕೆಲ ಆಟಗಾರರು ಮೈದಾನಕ್ಕಿಳಿದಿದ್ದಾರೆ. ಜಡೇಜಾ, ಬ್ರಾವೋ ಸೇರಿದಂತೆ ಕೆಲ ಆಟಗಾರರು ಇನ್ನಷ್ಟೇ ತಂಡ ಸೇರಿಕೊಳ್ಳಬೇಕಾಗಿದೆ. ನಿನ್ನೆ ಸೂರತ್‍ನಲ್ಲಿ ಅಭ್ಯಾಸ ಆರಂಭಿಸಲು ಚೆನ್ನೈ ತಂಡ ಆಗಮಿಸುತ್ತಿದ್ದಂತೆ ಅಭಿಮಾನಿಗಳು ದಾರಿ ಉದ್ದಕ್ಕೂ ನಿಂತು ತಂಡಕ್ಕೆ ಶುಭಕೋರಿದ್ದಾರೆ. ಧೋನಿ ಯುವ ಆಟಗಾರೊಂದಿಗೆ ಅಭ್ಯಾಸ ಆರಂಭಿಸಿದ್ದು, ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಅಲ್ಲದೇ ಫುಟ್‍ಬಾಲ್ ಕೂಡ ಆಡಿ ಆಟಗಾರು ಸಂಭ್ರಮಿಸಿದರು. ಈ ವೀಡಿಯೋವನ್ನು ಚೆನ್ನೈ ಸೂಪರ್‌ಕಿಂಗ್ಸ್‌ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ತಂಡವನ್ನು ಎದುರಿಸಲಿದೆ. 14ನೇ ಆವೃತ್ತಿ ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿತ್ತು. ಫೈನಲ್‍ನಲ್ಲಿ ಚೆನ್ನೈ ತಂಡ 27 ರನ್‍ಗಳ ಅಂತರದಿಂದ ಗೆದ್ದು ಚಾಂಪಿಯನ

ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

Image
  ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್ ಬಾ ಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಡುತ್ತಿರುವ ಆಲಿಯಾ ಭಟ್, ಇತರ ನಟಿಯರ ನಿದ್ದೆಗೆಡಿಸಿದ್ದಾರೆ. ಮೊದಲ ಬಾರಿಗೆ ಮಹಿಳಾ ನಟಿಯೊಬ್ಬರು ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವಂತಹ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಬಾಲಿವುಡ್ ನಲ್ಲಿ ಆಲಿಯಾ ಹವಾ ಜೋರಾಗಿದೆ ಸದ್ಯ ಬಿಡುಗಡೆ ಆಗಿರುವ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಇದೇ ಹೊತ್ತಿನಲ್ಲಿ ಅವರಿಗೆ ಹಾಲಿವುಡ್ ನಲ್ಲಿ ಭಾರೀ ಆಫರ್ ಒಂದು ಬಂದಿದೆ. ಇನ್ನೇನು ಅವರು ಬಾಲಿವುಡ್ ನಿಂದ ಗಂಟುಮೂಟೆ ಕಟ್ಟಿಕೊಂಡು ಕೆಲ ವರ್ಷಗಳ ಕಾಲಿ ಹಾಲಿವುಡ್ ಅಂಗಳದಲ್ಲಿ ಠಿಕಾಣೆ ಹೂಡಲಿದ್ದಾರೆ. ಹಾಲಿವುಡ್ ನ ಖ್ಯಾತ ನಿರ್ದೇಶಕ ಟಾಮ್ ಹಾರ್ಪರ್ ಸದ್ಯ ಹೊಸ ಸಿನಿಮಾ ಮಾಡುತ್ತಿದ್ದು, ಆಲಿಯಾ ಭಟ್ ಅವರಿಗೆ ನಟಿಸುವಂತೆ ವಿನಂತಿಸಿದ್ದಾರೆ. ಆಲಿಯಾ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಾ.8 ರ ಮಹಿಳಾ ದಿನಾಚರಣೆ ದಿನದಂದು ಅಧಿಕೃತವಾಗಿ ಈ ವಿಷಯವನ್ನು ನಿರ್ಮಾಣ ಸಂಸ್ಥೆ ಬಹಿರಂಗ ಪಡಿಸಿದೆ.  ಅಂದಹಾಗೆ ಈ ಚಿತ್ರಕ್ಕೆ ‘ಹಾರ್ಟ್ ಆಫ್ ಸ್ಟೋನ್’ ಎಂದು ಹೆಸರಿಡಲಾಗಿದೆ. ಸ್ಪೈ ಮತ್ತು ಥ್ರಿಲ್ಲರ್ ಜಾನರ್ ನ ಈ ಸಿನಿಮಾದಲ್ಲಿ ಹಾಲಿವುಡ್ ನ ಖ್ಯಾತ ತಾರೆಯರಾದ ಜೇಮಿ ಡೊರ್ನಾನ್, ಗಾಲ್ ಗಾಡೋಡ್ ಸೇರಿದಂತೆ ಅನೇಕರು ಇರಲಿದ್ದಾರೆ. ಎರಡು ವರ್ಷಗಳ ಹಿಂದೆಯೇ ಈ ಸಿನಿಮಾಗಾಗಿ ತ

ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

Image
  ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ ಕೀವ್:  ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಂತೆಯೇ, ಎಲ್ವಿವ್‍ನ ಅರ್ಮೇನಿಯನ್ ಕ್ಯಾಥೆಡ್ರಲ್‍ನಲ್ಲಿರುವ ಯೇಸುಕ್ರಿಸ್ತನ ಶಿಲ್ಪವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೂರ್ವ ಯುರೋಪಿಯನ್ ಮಾಧ್ಯಮ ಸಂಸ್ಥೆ ನೆಕ್ಸ್‌ಟಾ ಮಂಗಳವಾರ ವರದಿ ಮಾಡಿದೆ. ಈ ಹಿಂದೆ ವಿಶ್ವ ಸಮರ 2ರ (1939-1945) ಸಮಯದಲ್ಲಿ ಕ್ಯಾಥೆಡ್ರಲ್ ಚರ್ಚ್‍ನಿಂದ ಕೊನೆಯ ಬಾರಿಗೆ ಈ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನಗರಗಳನ್ನು ಆಕ್ರಮಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಅಂದಿನಿಂದ ರಷ್ಯಾದ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ದೇಶಾದ್ಯಂತ ಮತ್ತು ಇತರ ಸೈಟ್‍ಗಳ ಮೇಲೆ ನಡೆಸಿವೆ. ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ

Image
  ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ ಲಕ್ನೋ:  ಆಸ್ತಿ ವಿಚಾರಕ್ಕೆ ವೃದ್ಧ ತಂದೆಯ ಕತ್ತು ಹಿಸುಕಿ ಮಗನೇ ಹತ್ಯೆಗೈದು, ಶವವನ್ನು ಕಂಬಳಿಯಲ್ಲಿ ಸುತ್ತಿ ನಂತರ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಮಥುರಾದ ನರ್ಹೌಲಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಅಮೃತ್ ಲಾಲ್ (55) ಮಾಸ್ಟರ್ ಮೇಸ್ತ್ರಿ ಎಂದು ಗುರುತಿಸಲಾಗಿದೆ. ಸುಮಾರು 10-12 ದಿನಗಳ ಹಿಂದೆ ಅಮೃತ್ ಲಾಲ್ ಅವರ ಪತ್ನಿ ಆಶಾದೇವಿ ಅವರು ತಂದೆ-ಮಗ ಇಬ್ಬರನ್ನು ಮನೆಯಲ್ಲಿ ಬಿಟ್ಟು ತಂದೆಯ ಮನೆಗೆ ಹೋಗಿದ್ದರು. ತಂದೆಯೊಂದಿಗೆ ಏಕಾಂಗಿಯಾಗಿದ್ದ ವಿನೀತ್ ಅಮೃತ್ ಲಾಲ್‍ಗೆ ಮನೆ ಮಾರಾಟ ಮಾಡುವಂತೆ ಒತ್ತಡ ಹೇರಲು ಆರಂಭಿಸಿದ್ದಾರೆ. ಇದಕ್ಕೆ ಅಮೃತ್ ಲಾಲ್ ಅವರು ನಿರಾಕರಿಸಿ ವಿನೀತ್‍ಗೆ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ವಿನೀತ್ ತಂದೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕಂಬಳಿಯಲ್ಲಿ ಸುತ್ತಿ ಸುಟ್ಟು ಹಾಕಿದ್ದಾನೆ. ಈ ಘಟನೆ ಕುರಿತಂತೆ ತನಿಖೆ ವೇಳೆ ಆಶಾದೇವಿ ಅವರು, ವಾಸಿಸುತ್ತಿದ್ದ ಮನೆಯನ್ನು ಮಾರಾಟ ಮಾಡಲು ವಿನೀತ್ ಬಯಸಿದ್ದ. ವಿನೀತ್ ಈಗಾಗಲೇ ತಮ್ಮ 100 ಚದರ ಮೀಟರ್‍ನಷ್ಟು ನಿವೇಶನವನ್ನು ಮಾರಾಟ ಮಾಡಿದ್ದಾನೆ. ಇದು ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಗಿತ್ತು ಮತ್ತು ವಿನೀತ್ ಆಗಾಗ್ಗೆ ಮನೆಯನ್ನು ಮಾರಾಟ ಮಾಡಿ ತನಗೆ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ನಾಲ್ಕು ವರ್ಷಗಳ ಹಿಂದೆ ಕಿರಿಯ ಮಗ ನೆಹನಾ ಆತ್ಮಹತ್ಯ