ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

 

ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಡುತ್ತಿರುವ ಆಲಿಯಾ ಭಟ್, ಇತರ ನಟಿಯರ ನಿದ್ದೆಗೆಡಿಸಿದ್ದಾರೆ. ಮೊದಲ ಬಾರಿಗೆ ಮಹಿಳಾ ನಟಿಯೊಬ್ಬರು ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವಂತಹ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಬಾಲಿವುಡ್ ನಲ್ಲಿ ಆಲಿಯಾ ಹವಾ ಜೋರಾಗಿದೆ


ಸದ್ಯ ಬಿಡುಗಡೆ ಆಗಿರುವ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಇದೇ ಹೊತ್ತಿನಲ್ಲಿ ಅವರಿಗೆ ಹಾಲಿವುಡ್ ನಲ್ಲಿ ಭಾರೀ ಆಫರ್ ಒಂದು ಬಂದಿದೆ. ಇನ್ನೇನು ಅವರು ಬಾಲಿವುಡ್ ನಿಂದ ಗಂಟುಮೂಟೆ ಕಟ್ಟಿಕೊಂಡು ಕೆಲ ವರ್ಷಗಳ ಕಾಲಿ ಹಾಲಿವುಡ್ ಅಂಗಳದಲ್ಲಿ ಠಿಕಾಣೆ ಹೂಡಲಿದ್ದಾರೆ.

ಹಾಲಿವುಡ್ ನ ಖ್ಯಾತ ನಿರ್ದೇಶಕ ಟಾಮ್ ಹಾರ್ಪರ್ ಸದ್ಯ ಹೊಸ ಸಿನಿಮಾ ಮಾಡುತ್ತಿದ್ದು, ಆಲಿಯಾ ಭಟ್ ಅವರಿಗೆ ನಟಿಸುವಂತೆ ವಿನಂತಿಸಿದ್ದಾರೆ. ಆಲಿಯಾ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಾ.8 ರ ಮಹಿಳಾ ದಿನಾಚರಣೆ ದಿನದಂದು ಅಧಿಕೃತವಾಗಿ ಈ ವಿಷಯವನ್ನು ನಿರ್ಮಾಣ ಸಂಸ್ಥೆ ಬಹಿರಂಗ ಪಡಿಸಿದೆ. 

ಅಂದಹಾಗೆ ಈ ಚಿತ್ರಕ್ಕೆ ‘ಹಾರ್ಟ್ ಆಫ್ ಸ್ಟೋನ್’ ಎಂದು ಹೆಸರಿಡಲಾಗಿದೆ. ಸ್ಪೈ ಮತ್ತು ಥ್ರಿಲ್ಲರ್ ಜಾನರ್ ನ ಈ ಸಿನಿಮಾದಲ್ಲಿ ಹಾಲಿವುಡ್ ನ ಖ್ಯಾತ ತಾರೆಯರಾದ ಜೇಮಿ ಡೊರ್ನಾನ್, ಗಾಲ್ ಗಾಡೋಡ್ ಸೇರಿದಂತೆ ಅನೇಕರು ಇರಲಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಈ ಸಿನಿಮಾಗಾಗಿ ತಯಾರಿ ನಡೆದಿದ್ದು, ಈಗ ಶೂಟಿಂಗ್ ಶುರುವಾಗುತ್ತಿದೆ. ಯುಕೆಯಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆಯಂತೆ. ಹಾಲಿವುಡ್ ಆಫರ್ ನಿಂದಾಗಿ ಕೆಲ ತಿಂಗಳುಗಳ ಕಾಲ ಆಲಿಯಾ ಭಟ್ ಬಾಲಿವುಡ್ ಮಂದಿಗೆ ಸಿಗುವುದಿಲ್ಲವಂತೆ.





Comments

Popular posts from this blog

ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ರಾಜಧಾನಿ- ಜಗತ್ತಿನ ಟಾಪ್‌ 50ರಲ್ಲಿ ಭಾರತದ 35 ನಗರಗಳು

37 ವರ್ಷಗಳಲ್ಲೇ ಇದೇ ಮೊದಲು: ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ, ಸತತ 2ನೇ ಬಾರಿಗೆ 'ಯೋಗಿ ಸರ್ಕಾರ'!!

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ಮನವಿ.