Basavaraj Bommai Budget 2022: ಮಹಿಳಾ ಉದ್ದಿಮೆದಾರರು, ಮಹಿಳೆ ನೇತೃತ್ವದ ಸ್ಟಾರ್ಟ್​ಅಪ್​ಗಳಿಗೆ 10 ಲಕ್ಷದ ತನಕ ಸಾಲ



ಕರ್ನಾಟಕ ಬಜೆಟ್ 2022ರಲ್ಲಿ ಮಹಿಳಾ ಉದ್ದಿಮೆದಾರರು/ ಮಹಿಳೆಯರ ನೇತೃತ್ವದ ಸ್ಟಾರ್ಟ್​ ಅಪ್​ಗಳಿಗೆ ಮಹಿಳಾ ಅಭಿವೃದ್ಧಿ ನಿಗಮದಿಂದ 10 ಲಕ್ಷದ ತನಕ ಸಾಲ ನೀಡಲಾಗುವುದು.

ವ್ಯಾಪಾರ/ಉದ್ಯಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ಬಜೆಟ್​ 2022ರಲ್ಲಿ (Karnataka Budget 2022) ಮಹಿಳಾ ಉದ್ದಿಮೆದಾರರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು ಮಹತ್ತರವಾದ ಸಾಲ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 10 ಲಕ್ಷ ರೂಪಾಯಿಗಳ ತನಕ ನೇರ ಸಾಲವನ್ನು ಒದಗಿಸಿ ಪ್ರೋತ್ಸಾಹಿಸಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ಅವರು ಬಜೆಟ್​ನಲ್ಲಿ ಪ್ರಸ್ತಾವ ಮಾಡಿದ್ದಾರೆ. KITSನಿಂದ “ಎಲಿವೇಟ್” ಯೋಜನೆಅಡಿಯಲ್ಲಿ ಗುರುತಿಸಲಾದ ಮಹಿಳಾ ಉದ್ದಿಮೆದಾರರು/ಮಹಿಳೆ ನೇತೃತ್ವದ ಸ್ಟಾರ್ಟ್​ಅಪ್​ಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಡೆಯಿಂದ ನೇರವಾಗಿ 10 ಲಕ್ಷ ರೂಪಾಯಿ ತನಕ ಒದಗಿಸಿ, ಪ್ರೋತ್ಸಾಹಿಸಲಾಗುತ್ತದೆ.

ಮೊದಲ ಬಾರಿಗೆ 2022-23ನೇ ಸಾಲಿಗೆ ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು ಬಜೆಟ್​ ಮಂಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, 2,65,720 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. – ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ. ಮೀಸಲಿಟ್ಟಿದ್ದಾರೆ.

ಬಂಡವಾಳ ವೆಚ್ಚ 46,595 ಕೋಟಿ ರೂಪಾಯಿ ಹಾಗೂ ಸಾಲ ಮರುಪಾವತಿಗೆ 14,179 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.





Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ