ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ
ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

ಹೈದರಾಬಾದ್: ಆಟೋ ಟ್ರಾಲಿ ಚಾಲಕನೋರ್ವ ಸಾರ್ವಜನಿಕ ಪೋರ್ಟಬಲ್ ಶೌಚಾಲಯವನ್ನು ಕದ್ದು 45 ಸಾವಿರಕ್ಕೆ ಮಾರಾಟ ಮಾಡಿದ್ದಾನೆ.
ಆರೋಪಿಯನ್ನು ಎಂ ಜೋಗಯ್ಯ ಎಂದು ಗುರುತಿಸಲಾಗಿದ್ದು, ಈತ ಮೇದಕ್ ಜಿಲ್ಲೆಯ ದೋಮಲಗುಡ ನಿವಾಸಿಯಾಗಿದ್ದಾನೆ. ಇದೀಗ ಮಲ್ಕಾಜ್‍ಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಜೋಗಯ್ಯ ಮತ್ತು ಆತನ ಇಬ್ಬರು ಸಹಚರರಾದ ಬುದ್ಧ ಭವನದ ಜಿಎಚ್‍ಎಂಸಿ ಕಾರ್ಯಕರ್ತ ಅರುಣ್ ಕುಮಾರ್ ಮತ್ತು ಮಲ್ಕಾಜ್‍ಗಿರಿಯ ಆನಂದಬಾಗ್‍ನಲ್ಲಿರುವ ಜೈನ್ ಕನ್‍ಸ್ಟ್ರಕ್ಷನ್‍ನ ಬಿಕ್ಷಪತಿ ಸಾರ್ವಜನಿಕ ಆಸ್ತಿಯನ್ನು ಕದ್ದು ಪರಾರಿಯಾಗಿದ್ದರು.
ನಂತರ ಜೋಗಯ್ಯ ಸಾರ್ವಜನಿಕ ಶೌಚಾಲಯವನ್ನು 45,000 ರೂ.ಗೆ ಮುಶೀರಾಬಾದ್‍ನ ಸ್ಕ್ರ್ಯಾಪ್ ವ್ಯಾಪಾರಿಗೆ ಮಾರಾಟ ಮಾಡಿದ್ದಾನೆ. ಬಳಿಕ ಬಂದ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೆ ಇಟ್ಟುಕೊಂಡಿದ್ದ. ಆದರೆ ಕಳೆದ ವಾರ ಜಿಎಚ್‍ಎಂಸಿ ಜಿಲ್ಲಾಧಿಕಾರಿ ಜಿ.ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದರು. ಈ ವೇಳೆ ಜೋಗಯ್ಯ ಕಂಡು ಬಂದಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿ, ಆರೋಪಿ ಬಳಿ ಇದ್ದ ಹಣ ಮತ್ತು ಆಟೋ ಟ್ರಾಲಿಯನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Comments
Post a Comment