ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ
ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ
ಕೀವ್: ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಂತೆಯೇ, ಎಲ್ವಿವ್‍ನ ಅರ್ಮೇನಿಯನ್ ಕ್ಯಾಥೆಡ್ರಲ್‍ನಲ್ಲಿರುವ ಯೇಸುಕ್ರಿಸ್ತನ ಶಿಲ್ಪವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೂರ್ವ ಯುರೋಪಿಯನ್ ಮಾಧ್ಯಮ ಸಂಸ್ಥೆ ನೆಕ್ಸ್‌ಟಾ ಮಂಗಳವಾರ ವರದಿ ಮಾಡಿದೆ.
ಈ ಹಿಂದೆ ವಿಶ್ವ ಸಮರ 2ರ (1939-1945) ಸಮಯದಲ್ಲಿ ಕ್ಯಾಥೆಡ್ರಲ್ ಚರ್ಚ್‍ನಿಂದ ಕೊನೆಯ ಬಾರಿಗೆ ಈ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನಗರಗಳನ್ನು ಆಕ್ರಮಿಸಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಅಂದಿನಿಂದ ರಷ್ಯಾದ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ದೇಶಾದ್ಯಂತ ಮತ್ತು ಇತರ ಸೈಟ್‍ಗಳ ಮೇಲೆ ನಡೆಸಿವೆ.
ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.
Comments
Post a Comment