ಆಪ್​ ಈಗ ರಾಷ್ಟ್ರೀಯ ಪಕ್ಷ, ಅರವಿಂದ್​ ಕೇಜ್ರಿವಾಲ್​ ಪ್ರಧಾನಿಯಾಗಲಿದ್ದಾರೆ: ರಾಘವ್ ಚಡ್ಡಾ

ಆಪ್​ ಈಗ ರಾಷ್ಟ್ರೀಯ ಪಕ್ಷ, ಅರವಿಂದ್​ ಕೇಜ್ರಿವಾಲ್​ ಪ್ರಧಾನಿಯಾಗಲಿದ್ದಾರೆ: ರಾಘವ್ ಚಡ್ಡಾ

ಪಂಜಾಬ್​ನ ಆರ್ಥಿಕತೆ ಸುಧಾರಣೆಯನ್ನು ಪುನರುಜ್ಜೀವನಗೊಳಿಸಿ, ಇಲ್ಲಿನ ವೈಭವನ್ನು ಮರುಸ್ಥಾಪಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಈ ವಿಜಯ ನಮ್ಮ ಪಾಲಿಗೆ ಎಷ್ಟು ಮುಖ್ಯ ಎಂಬುದು ನಮಗೇ ಗೊತ್ತು ಎಂದು ರಾಘವ್ ಚಡ್ಡಾ ಹೇಳಿದ್ದಾರೆ.

ದೆಹಲಿಯಲ್ಲಿ ಮಾತ್ರ ಆಡಳಿತದಲ್ಲಿದ್ದ ಆಮ್​ ಆದ್ಮಿ ಪಕ್ಷ ಇದೀಗ ಪಂಜಾಬ್​ನಲ್ಲೂ ಸರ್ಕಾರ ರಚನೆ ಮಾಡುತ್ತಿದೆ. ಪಂಜಾಬ್​ನಲ್ಲಿ ಅಧಿಕಾರದಲ್ಲಿದ್ದ ಒಂದು ರಾಷ್ಟ್ರೀಯ ಪಕ್ಷವನ್ನು ಸೋಲಿಸಿ, ಜಯ ಸಾಧಿಸಿದ್ದು ಸಾಧನೆಯಲ್ಲದೆ ಇನ್ನೇನೂ ಅಲ್ಲ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಈ ಗೆಲುವಿನ ಬೆನ್ನಲ್ಲೇ ಆಪ್​ ನಾಯಕ ರಾಘವ್ ಚಡ್ಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ,  ಆಮ್ ಆದ್ಮಿ ಪಕ್ಷ, ಪ್ರಾದೇಶಿಕ ಪಕ್ಷವಾಗಿ ಉಳಿದಿಲ್ಲ. ಅದೀಗ ರಾಷ್ಟ್ರೀಯ ಪಕ್ಷವಾಗಿ ಮಾರ್ಪಾಡಾಗಿದೆ. ಅತಿ ಶೀಘ್ರದಲ್ಲಿಯೇ ಕಾಂಗ್ರೆಸ್​ನ್ನು ಹಿಂದಿಕ್ಕಿ, ಅತಿದೊಡ್ಡ ಮತ್ತು ಪ್ರಭಾವಿ ಪ್ರತಿಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.  ಅಷ್ಟೇ ಅಲ್ಲ, ಮುಂದೆ ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಖಂಡಿತವಾಗಿಯೂ ಒಂದಲ್ಲ ಒಂದು ದಿನ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದೂ ಪ್ರತಿಪಾದಿಸಿದ್ದಾರೆ.

ಆಪ್​ ಪಾಲಿಗೆ ಇಂದು ಅದ್ಭುತವಾದ ದಿನ. ಯಾಕೆಂದರೆ ನಮ್ಮ ಪಕ್ಷ ಒಂದು ರಾಷ್ಟ್ರೀಯ ಪಕ್ಷವೆಂದು ಇಂದು ಸಾಬೀತಾಯ್ತು. ದೇವರು ನಮಗೆ ಆಶೀರ್ವಾದ ಮಾಡಿದ್ದಾನೆ.  ಕೇಜ್ರಿವಾಲ್ ಸರ್ಕಾರದ ಆಡಳಿತ ದೆಹಲಿಯಲ್ಲಿ ಹೇಗಿದೆ ಎಂಬುದನ್ನು ಪಂಜಾಬ್​ ಜನರು ನೋಡಿದ್ದಾರೆ. ಅದೇ ಮಾದರಿಯ ಸರ್ಕಾರ ಬೇಕು ಎಂದು ಇಲ್ಲಿಯೂ ಆಪ್​ನ್ನು ಗೆಲ್ಲಿಸಿದ್ದಾರೆ. 5ವರ್ಷಗಳಿಂದ ಪಂಜಾಬ್​ ಜನರನ್ನು ಸೌಲಭ್ಯ ವಂಚಿತರನ್ನಾಗಿಸಿದವರನ್ನು, ನಾವು ಪಂಜಾಬ್​​ನ್ನು ಸದಾ ಆಳುತ್ತೇವೆ ಎಂಬ ಭ್ರಮೆಯಲ್ಲಿ ಇದ್ದವರನ್ನು ಇಲ್ಲಿನ ಜನರು ಓಡಿಸಿದ್ದಾರೆ. ಅವರಿಗೆ ತಕ್ಕ ಪಾಠವನ್ನು ಇಲ್ಲಿನ ಮತದಾರರು ಕಲಿಸಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.

ಪಂಜಾಬ್​ನ ಆರ್ಥಿಕತೆ ಸುಧಾರಣೆಯನ್ನು ಪುನರುಜ್ಜೀವನಗೊಳಿಸಿ, ಇಲ್ಲಿನ ವೈಭವನ್ನು ಮರುಸ್ಥಾಪಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಈ ವಿಜಯ ನಮ್ಮ ಪಾಲಿಗೆ ಎಷ್ಟು ಮುಖ್ಯ ಎಂಬುದು ನಮಗೇ ಗೊತ್ತು. ನಮಗೆ ಈ ಗೆಲುವಿನ ಬೆಲೆ ಗೊತ್ತು. 2017ರಲ್ಲಿಯೇ ನಮಗೆ ಇಲ್ಲಿ ಗೆಲುವಿನ ಭರವಸೆ ಇತ್ತು. ಆದರೆ ಆ ವರ್ಷ ಕೈತಪ್ಪಿದ್ದು, ಈಗ ಕೈ ಹಿಡಿಯಿತು ಎಂದಿದ್ದಾರೆ. ಪಂಜಾಬ್​​ನಲ್ಲಿ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದ್ದು, ಆಪ್​ ಅಧಿಕಾರ ಗದ್ದುಗೆಗೆ ಏರಿದೆ. ಭಗವಂತ್ ಮಾನ್​ ಅಲ್ಲಿನ ಮುಂದಿನ ಮುಖ್ಯಮಂತ್ರಿಯಾಗಿದ್ದಾರೆ.



Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ