Ukraine Crisis: ಉಕ್ರೇನ್ನಲ್ಲಿದ್ದ 20,000 ಭಾರತೀಯರಲ್ಲಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್; ರಾಜ್ಯದ 149 ವಿದ್ಯಾರ್ಥಿಗಳು ವಾಪಸ್ Operation Ganga | Russia Ukraine War: ‘ಆಪರೇಷನ್ ಗಂಗಾ’ ಮೂಲಕ ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ನಡೆಯುತ್ತಿದೆ. ಇದುವರೆಗೆ ಎಷ್ಟು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ? ಭಾರತದ ಎಷ್ಟು ವಿದ್ಯಾರ್ಥಿಗಳು ಇನ್ನೂ ಅಲ್ಲಿ ಸಿಲುಕಿಕೊಂಡಿದ್ದಾರೆ? ಈ ಎಲ್ಲಾ ಮಾಹಿತಿ ಇಲ್ಲಿದೆ. Edited By: sandeep s ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಸ್ಥರ ಭೇಟಿ ಮಾಡಿ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರೂ ಆಗಿರುವ ಅವರು, ‘‘ಖಾರ್ಕಿವ್ನಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಸೂಚಿಸಿರುವ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಭಾರತದ ವಿದ್ಯಾರ್ಥಿಗಳು ಖಾರ್ಕಿವ್ನಿಂದ ಹೊರಬಂದಿದ್ದಾರೆ. ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಕೂಡ ಖಾರ್ಕಿವ್ನಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ರಾಜ್ಯದ 693 ವಿದ್ಯಾರ್ಥಿಗಳ ಪೈಕಿ 149 ವಿದ್ಯಾರ್ಥಿಗಳು ವಾಪಸ್ ಆಗ
Comments
Post a Comment