Russia Ukraine Crisis | Harjot Singh: ಇಂದು (ಶುಕ್ರವಾರ) ರಾಜ್ಯ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ಮಾತನಾಡುತ್ತಾ ಕೀವ್‌ನಿಂದ ಬರುವಾಗ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಮಾಧ್ಯಮವೊಂದು ಸಂಪರ್ಕಿಸಿದ್ದು, ಪರಿಸ್ಥಿತಿಯ ಭೀಕರತೆಯನ್ನು ಆತ ವಿವರಿಸಿದ್ದಾನೆ.ಗಾಯಗೊಂಡಿರುವ ವಿದ್ಯಾರ್ಥಿ ಹರ್ಜೋತ್ ಸಿಂಗ್ಕೀವ್: ಇಂದು (ಶುಕ್ರವಾರ) ರಾಜ್ಯ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ಮಾತನಾಡುತ್ತಾ ಕೀವ್‌ನಿಂದ ಬರುವಾಗ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಎನ್ಡಿಟಿವಿ ಸಂಪರ್ಕಿಸಿದೆ. ಅದರ ಮೂಲಕ ವಿದ್ಯಾರ್ಥಿ ರಕ್ಷಣೆಗೆ ಮನವಿ ಮಾಡಿದ್ದು, ಅಸಹಾಯಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾನೆ. ಉಕ್ರೇನ್ ರಾಜಧಾನಿ ಕೀವ್‌ನಿಂದ (Kyiv) ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ತನಗೆ ಗುಂಡೇಟು ಹಾಗೂ ಪೆಟ್ಟು ಬಿದ್ದಿದ್ದು, ಕಾಲು ಮುರಿದಿದೆ ಎಂದು ವಿದ್ಯಾರ್ಥಿ ಹರ್ಜೋತ್ ಸಿಂಗ್ (Harjot Singh) ಹೇಳಿದ್ದಾರೆ. ‘ಗುಂಡು ನನ್ನ ಭುಜದಿಂದ ಪ್ರವೇಶಿಸಿತು. ಅದನ್ನು ಆಸ್ಪತ್ರೆಯಲ್ಲಿ ಎದೆಯಿಂದ ಹೊರತೆಗೆದರು. ನನ್ನ ಕಾಲು ಮುರಿದಿದೆ’ ಎಂದು ಹರ್ಜೋತ್ ಸಿಂಗ್ ಕೀವ್ ಸಿಟಿ ಆಸ್ಪತ್ರೆಯಿಂದ ಮಾತನಾಡುತ್ತಾ ಹೇಳಿದ್ದಾರೆ. ‘‘ನಾನು ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದೆ. ನನ್ನನ್ನು ಎಲ್ವಿವ್‌ಗೆ (Lviv) ಕರೆದೊಯ್ಯಲು ಕೆಲವು ಸೌಲಭ್ಯಗಳು ಬೇಕಾಗಿದ್ದವು. ಆದರೆ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ಈ ಮಾಧ್ಯಮ ಮಾತ್ರ ನನ್ನನ್ನು ತಲುಪಿದೆ. ಪ್ರಸ್ತುತ ಇದರ ಮೂಲಕವಾದರೂ ನನ್ನ ಕಷ್ಟ ಜಗತ್ತಿಗೆ ತಿಳಿಯಲಿ’’ ಎಂದು ಅವರು ಹೇಳಿದ್ದಾರೆ. ಅಲ್ಲದೇ ತಮ್ಮಂತೆ ಹಲವು ಜನರು ಕೀವ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಹರ್ಜೋತ್ ಸಿಂಗ್ ಅವರಿಗೆ ಗುಂಡು ತಗುಲುವ ಸಂದರ್ಭದಲ್ಲಿ ಕೀವ್‌ನಿಂದ ತಪ್ಪಿಸಿಕೊಂಡು ಗಡಿಗೆ ತೆರಳುವ ಸನ್ನಾಹದಲ್ಲಿದ್ದರು. ಕೀವ್‌ನಿಂದ ತಪ್ಪಿಸಿಕೊಂಡು ಮತ್ತೊಂದು ನಗರ ಎಲ್ವಿವ್‌ಗೆ ತೆರಳಲು ಅವರು ಪ್ರಯತ್ನಿಸುತ್ತಿದ್ದರು. ಈ ಕುರಿತು ವಿವರಿಸಿರುವ ಅವರು, ‘ನಾನು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದೆ. ನನ್ನನ್ನು ಎಲ್ವಿವ್‌ಗೆ ಕರೆದೊಯ್ಯಲು ಅವರು ಸೌಲಭ್ಯವನ್ನು ಒದಗಿಸಬಹುದೇ ಎಂದು ಕೇಳಿದೆ. ಆದರೆ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಬದಲಾಗಿ ಹಲವು ನೆಗೆಟಿವ್ ಕಾಮೆಂಟ್ಗಳು ನನಗೆ ಸಿಗುತ್ತಿವೆ’ ಎಂದು ಅವರು ಹೇಳಿದ್ದಾರೆ.
ದೆಹಲಿ ಬಳಿಯ ಛತ್ತರ್‌ಪುರದ ವಿದ್ಯಾರ್ಥಿಯಾಗಿರುವ ಅವರು ಮತ್ತಷ್ಟು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘‘ನನ್ನಂತೆಯೇ ಇನ್ನೂ ಅನೇಕ ಜನರು ಕೀವ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ’’ ಎಂದಿರುವ ಅವರು, ‘‘ಅನೇಕರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ನಾನು ನಿರಂತರವಾಗಿ ರಾಯಭಾರ ಕಚೇರಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆ. ಆ ಸಂದರ್ಭದಲ್ಲಿ ಅವರಿಗೆ ನೀವು ನಮಗಿಂತ ಮೊದಲೇ ಕೀವ್ ಬಿಟ್ಟು ಹೊರಟಿದ್ದೀರಿ. ನೀವು ಇಲ್ಲಿಯೇ ಇದ್ದು ನಮ್ಮಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕಾಗಿದೆ ಎಂದು ಹೇಳಿದ್ದೆ’’ ಎಂದಿದ್ಧಾರೆ ಹರ್ಜೋತ್.
ನಾವು ಒಳ್ಳೆಯದಷ್ಟನ್ನೇ ಹಾರೈಸಬಹುದು. ಈ ಮೂಲಕವಾದರೂ ಜನರಿಗೆ ನಿಜ ಸ್ಥಿತಿಯ ಅರಿವಾಗಲಿ ಎಂದಿರುವ ಹರ್ಜೋತ್, ಭಾರತದಲ್ಲಿ ತಾಯಿ ಹಾಗೂ ಕುಟುಂಬದವರು ಕಣ್ಣೀರಿಡುತ್ತಿರುವುದನ್ನು ವಿವರಿಸಿದ್ದಾರೆ. ಭಾರತ ಸರ್ಕಾರದ ಪ್ರಕಾರ ಉಕ್ರೇನ್ನಲ್ಲಿ 20,000 ಭಾರತೀಯರಿದ್ದರು. ಈ ಪೈಕಿ 17,000 ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. 6,000 ಜನ ತವರಿಗೆ ಮರಳಿದ್ದು, 1,700 ಜನ ಉಕ್ರೇನ್ ತೊರೆಯಲು ಕಾಯುತ್ತಿದ್ದಾರೆ ಎನ್ನಲಾಗಿತ್ತು.
ಮಂಗಳವಾರದಂದು ಕರ್ನಾಟಕ ಮೂಲದ ನವೀನ್ ರಷ್ಯಾದ ದಾಳಿಗೆ ಖಾರ್ಕಿವ್ನಲ್ಲಿ ಮೃತಪಟ್ಟಿದ್ದರು. ಉಕ್ರೇನ್ನಿಂದ ಗಡಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆಯ ದೇಶಗಳ ಮೂಲಕ ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.
ಕೀವ್: ಇಂದು (ಶುಕ್ರವಾರ) ರಾಜ್ಯ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ಮಾತನಾಡುತ್ತಾ ಕೀವ್‌ನಿಂದ ಬರುವಾಗ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಎನ್ಡಿಟಿವಿ ಸಂಪರ್ಕಿಸಿದೆ. ಅದರ ಮೂಲಕ ವಿದ್ಯಾರ್ಥಿ ರಕ್ಷಣೆಗೆ ಮನವಿ ಮಾಡಿದ್ದು, ಅಸಹಾಯಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾನೆ. ಉಕ್ರೇನ್ ರಾಜಧಾನಿ ಕೀವ್‌ನಿಂದ (Kyiv) ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ತನಗೆ ಗುಂಡೇಟು ಹಾಗೂ ಪೆಟ್ಟು ಬಿದ್ದಿದ್ದು, ಕಾಲು ಮುರಿದಿದೆ ಎಂದು ವಿದ್ಯಾರ್ಥಿ ಹರ್ಜೋತ್ ಸಿಂಗ್ (Harjot Singh) ಹೇಳಿದ್ದಾರೆ. ‘ಗುಂಡು ನನ್ನ ಭುಜದಿಂದ ಪ್ರವೇಶಿಸಿತು. ಅದನ್ನು ಆಸ್ಪತ್ರೆಯಲ್ಲಿ ಎದೆಯಿಂದ ಹೊರತೆಗೆದರು. ನನ್ನ ಕಾಲು ಮುರಿದಿದೆ’ ಎಂದು ಹರ್ಜೋತ್ ಸಿಂಗ್ ಕೀವ್ ಸಿಟಿ ಆಸ್ಪತ್ರೆಯಿಂದ ಮಾತನಾಡುತ್ತಾ ಹೇಳಿದ್ದಾರೆ. ‘‘ನಾನು ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದೆ. ನನ್ನನ್ನು ಎಲ್ವಿವ್‌ಗೆ (Lviv) ಕರೆದೊಯ್ಯಲು ಕೆಲವು ಸೌಲಭ್ಯಗಳು ಬೇಕಾಗಿದ್ದವು. ಆದರೆ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ಈ ಮಾಧ್ಯಮ ಮಾತ್ರ ನನ್ನನ್ನು ತಲುಪಿದೆ. ಪ್ರಸ್ತುತ ಇದರ ಮೂಲಕವಾದರೂ ನನ್ನ ಕಷ್ಟ ಜಗತ್ತಿಗೆ ತಿಳಿಯಲಿ’’ ಎಂದು ಅವರು ಹೇಳಿದ್ದಾರೆ. ಅಲ್ಲದೇ ತಮ್ಮಂತೆ ಹಲವು ಜನರು ಕೀವ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಹರ್ಜೋತ್ ಸಿಂಗ್ ಅವರಿಗೆ ಗುಂಡು ತಗುಲುವ ಸಂದರ್ಭದಲ್ಲಿ ಕೀವ್‌ನಿಂದ ತಪ್ಪಿಸಿಕೊಂಡು ಗಡಿಗೆ ತೆರಳುವ ಸನ್ನಾಹದಲ್ಲಿದ್ದರು. ಕೀವ್‌ನಿಂದ ತಪ್ಪಿಸಿಕೊಂಡು ಮತ್ತೊಂದು ನಗರ ಎಲ್ವಿವ್‌ಗೆ ತೆರಳಲು ಅವರು ಪ್ರಯತ್ನಿಸುತ್ತಿದ್ದರು. ಈ ಕುರಿತು ವಿವರಿಸಿರುವ ಅವರು, ‘ನಾನು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದೆ. ನನ್ನನ್ನು ಎಲ್ವಿವ್‌ಗೆ ಕರೆದೊಯ್ಯಲು ಅವರು ಸೌಲಭ್ಯವನ್ನು ಒದಗಿಸಬಹುದೇ ಎಂದು ಕೇಳಿದೆ. ಆದರೆ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಬದಲಾಗಿ ಹಲವು ನೆಗೆಟಿವ್ ಕಾಮೆಂಟ್ಗಳು ನನಗೆ ಸಿಗುತ್ತಿವೆ’ ಎಂದು ಅವರು ಹೇಳಿದ್ದಾರೆ.
ದೆಹಲಿ ಬಳಿಯ ಛತ್ತರ್‌ಪುರದ ವಿದ್ಯಾರ್ಥಿಯಾಗಿರುವ ಅವರು ಮತ್ತಷ್ಟು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘‘ನನ್ನಂತೆಯೇ ಇನ್ನೂ ಅನೇಕ ಜನರು ಕೀವ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ’’ ಎಂದಿರುವ ಅವರು, ‘‘ಅನೇಕರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ನಾನು ನಿರಂತರವಾಗಿ ರಾಯಭಾರ ಕಚೇರಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆ. ಆ ಸಂದರ್ಭದಲ್ಲಿ ಅವರಿಗೆ ನೀವು ನಮಗಿಂತ ಮೊದಲೇ ಕೀವ್ ಬಿಟ್ಟು ಹೊರಟಿದ್ದೀರಿ. ನೀವು ಇಲ್ಲಿಯೇ ಇದ್ದು ನಮ್ಮಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕಾಗಿದೆ ಎಂದು ಹೇಳಿದ್ದೆ’’ ಎಂದಿದ್ಧಾರೆ ಹರ್ಜೋತ್.
ನಾವು ಒಳ್ಳೆಯದಷ್ಟನ್ನೇ ಹಾರೈಸಬಹುದು. ಈ ಮೂಲಕವಾದರೂ ಜನರಿಗೆ ನಿಜ ಸ್ಥಿತಿಯ ಅರಿವಾಗಲಿ ಎಂದಿರುವ ಹರ್ಜೋತ್, ಭಾರತದಲ್ಲಿ ತಾಯಿ ಹಾಗೂ ಕುಟುಂಬದವರು ಕಣ್ಣೀರಿಡುತ್ತಿರುವುದನ್ನು ವಿವರಿಸಿದ್ದಾರೆ. ಭಾರತ ಸರ್ಕಾರದ ಪ್ರಕಾರ ಉಕ್ರೇನ್ನಲ್ಲಿ 20,000 ಭಾರತೀಯರಿದ್ದರು. ಈ ಪೈಕಿ 17,000 ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. 6,000 ಜನ ತವರಿಗೆ ಮರಳಿದ್ದು, 1,700 ಜನ ಉಕ್ರೇನ್ ತೊರೆಯಲು ಕಾಯುತ್ತಿದ್ದಾರೆ ಎನ್ನಲಾಗಿತ್ತು.
ಮಂಗಳವಾರದಂದು ಕರ್ನಾಟಕ ಮೂಲದ ನವೀನ್ ರಷ್ಯಾದ ದಾಳಿಗೆ ಖಾರ್ಕಿವ್ನಲ್ಲಿ ಮೃತಪಟ್ಟಿದ್ದರು. ಉಕ್ರೇನ್ನಿಂದ ಗಡಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆಯ ದೇಶಗಳ ಮೂಲಕ ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.
Comments
Post a Comment