kannada breaking news fast news crime news police news no 1 news channel in Karnataka
Get link
Facebook
X
Pinterest
Email
Other Apps
-
ಚೆನ್ನೈನಲ್ಲಿ ಮೇಯರ್ ಹುದ್ದೆ ಅಲಂಕರಿಸಿದ ಮೊದಲ ದಲಿತ ಮಹಿಳೆ
ಚೆನ್ನೈ: ಇದೇ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಡಿಎಂಕೆ ಪಕ್ಷವು 28 ವರ್ಷ ವಯಸ್ಸಿನ ಆರ್.ಪ್ರಿಯಾ ಅವರನ್ನು ಮೇಯರ್ ಸ್ಥಾನಕ್ಕೆ ನೇಮಕವಾಗಿದ್ದಾರೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚೆನ್ನೈನ ಒಟ್ಟು 200 ವಾರ್ಡ್ಗಳ ಪೈಕಿ ಡಿಎಂಕೆ 153 ವಾರ್ಡ್ಗಳಲ್ಲಿ ಗೆಲುವು ಸಾಧಿಸಿರುವುದರಿಂದ ಪಕ್ಷ ಸೂಚಿಸಿರುವಂತೆ ಪ್ರಿಯಾ ಅವರೇ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ನಂತರ ಪ್ರಿಯಾ ಚೆನ್ನೈನ ಮೂರನೇ ಮಹಿಳಾ ಮೇಯರ್ ಆಗಲಿದ್ದಾರೆ. ಪ್ರಿಯಾ ಅವರು ಮಂಗಳಪುರಂನ ವಾರ್ಡ್ 74ರ ಕೌನ್ಸಿಲರ್ ಆಗಿದ್ದಾರೆ. ಆರ್.ಪ್ರಿಯಾ ಯಾರು ಗೊತ್ತಾ?: ಎಂ.ಕಾಂ ಪದವೀಧರೆಯಾಗಿರುವ ಪ್ರಿಯಾ ಅವರು ಚೆನ್ನೈ ಕಾರ್ಪೊರೇಷನ್ ಮೇಯರ್ ಸ್ಥಾನಕ್ಕೇರಲಿರುವ ಮೂರನೇ ಮಹಿಳೆ. ಈ ಹಿಂದೆ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ಅವರು ಮೇಯರ್ ಆಗಿ ಅಧಿಕಾರ ನಿರ್ವಹಿಸಿದ್ದಾರೆ. ಡಿಎಂಕೆಯ ಮಾಜಿ ಶಾಸಕ ಚೆಂಗೈ ಶಿವಂ ಅವರ ಮೊಮ್ಮಗಳು ಪ್ರಿಯಾ. ಅವರ ತಂದೆ ಆರ್.ರಾಜನ್ ಸಹ ಡಿಎಂಕೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾರ್ಪೊರೇಷನ್ ಚುನಾವಣೆಯಲ್ಲಿ ಪ್ರಿಯಾ 74ನೇ ವಾರ್ಡ್ನಿಂದ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ ಹೈದರಾಬಾದ್: ಆಟೋ ಟ್ರಾಲಿ ಚಾಲಕನೋರ್ವ ಸಾರ್ವಜನಿಕ ಪೋರ್ಟಬಲ್ ಶೌಚಾಲಯವನ್ನು ಕದ್ದು 45 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಆರೋಪಿಯನ್ನು ಎಂ ಜೋಗಯ್ಯ ಎಂದು ಗುರುತಿಸಲಾಗಿದ್ದು, ಈತ ಮೇದಕ್ ಜಿಲ್ಲೆಯ ದೋಮಲಗುಡ ನಿವಾಸಿಯಾಗಿದ್ದಾನೆ. ಇದೀಗ ಮಲ್ಕಾಜ್ಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಜೋಗಯ್ಯ ಮತ್ತು ಆತನ ಇಬ್ಬರು ಸಹಚರರಾದ ಬುದ್ಧ ಭವನದ ಜಿಎಚ್ಎಂಸಿ ಕಾರ್ಯಕರ್ತ ಅರುಣ್ ಕುಮಾರ್ ಮತ್ತು ಮಲ್ಕಾಜ್ಗಿರಿಯ ಆನಂದಬಾಗ್ನಲ್ಲಿರುವ ಜೈನ್ ಕನ್ಸ್ಟ್ರಕ್ಷನ್ನ ಬಿಕ್ಷಪತಿ ಸಾರ್ವಜನಿಕ ಆಸ್ತಿಯನ್ನು ಕದ್ದು ಪರಾರಿಯಾಗಿದ್ದರು. ನಂತರ ಜೋಗಯ್ಯ ಸಾರ್ವಜನಿಕ ಶೌಚಾಲಯವನ್ನು 45,000 ರೂ.ಗೆ ಮುಶೀರಾಬಾದ್ನ ಸ್ಕ್ರ್ಯಾಪ್ ವ್ಯಾಪಾರಿಗೆ ಮಾರಾಟ ಮಾಡಿದ್ದಾನೆ. ಬಳಿಕ ಬಂದ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೆ ಇಟ್ಟುಕೊಂಡಿದ್ದ. ಆದರೆ ಕಳೆದ ವಾರ ಜಿಎಚ್ಎಂಸಿ ಜಿಲ್ಲಾಧಿಕಾರಿ ಜಿ.ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದರು. ಈ ವೇಳೆ ಜೋಗಯ್ಯ ಕಂಡು ಬಂದಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿ, ಆರೋಪಿ ಬಳಿ ಇದ್ದ ಹಣ ಮತ್ತು ಆಟೋ ಟ್ರಾಲಿಯನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ ಉರಿ ಬಿಸಿಲಲ್ಲಿ ಬಾವಿಗೆ ಇಳೀತಿರೋ ವ್ಯಕ್ತಿ… ಮಣ್ಣನ್ನ ತುಂಬಿರೋ ಬುಟ್ಟಿಯನ್ನ ಮೇಲಕ್ಕೆ ಎತ್ತುತ್ತಿರೋ ಮಹಿಳೆ. ಬಾವಿಗೆ ಇಳಿದ ಹಗ್ಗದ ಸಹಾಯದಿಂದಲೇ ಮೇಲಕ್ಕೆ ಬರ್ತಿರೋ ವ್ಯಕ್ತಿ. ಇನ್ನೂ ನೀರು ಬಂದಿಲ್ಲ ಎಷ್ಟು ಆಳ ತೆಗೆಯಬೇಕೋ ಅಂತ ಯೋಚಿಸ್ತಿರೋ ದಂಪತಿ. ಏನಿದು, ಬಾವಿ ಕಥೆ ಅಂತಿದ್ದೀರಾ… ಈ ಬಾವಿಯ ಹಿಂದೆ ಮೈನವಿರೇಳಿಸೋ ಸ್ಟೋರಿ ಇದೆ. ಈ ದಂಪತಿ ಹೆಸ್ರು ರಾಜು-ಶಾರದಾ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಣಜೂರಿನವರು. 30*40 ಸೈಟಲ್ಲಿ ಗುಡಿಸಲು ಹಾಕ್ಕೊಂಡ್ ಬದುಕುತ್ತಿದ್ದಾರೆ. ಕೂಲಿಯೇ ಇವ್ರ ಜೀವಾಳ. ದಿನವಿಡಿ ದಣಿದು ಬಂದ್ರೆ ಸಂಜೆ ನೀರಿಗೆ ಹಾಹಾಕಾರ. ನೀರು ಕೇಳಿದರೆ ಜನ ಜಗಳಕ್ಕೆ ಬರ್ತಿದ್ರು. ಸಮೀಪದ ನಲ್ಲಿ ಬಳಿ ನೀರಿಗೆ ಹೋದಾಗ ಗಲಾಟೆಯೂ ಆಯ್ತು. ಯಾರನ್ನ ಕೇಳಿದ್ರು ನೀರು ಕೊಡ್ಲಿಲ್ಲ. ಆಗಲೇ ತೀರ್ಮಾನಿಸಿದ ಈ ದಂಪತಿ ನೀರಿಗಾಗಿ ಬಾವಿಯನ್ನೇ ತೆಗೆದಿದ್ದಾರೆ. 30*40 ಸೈಟಿನಲ್ಲಿ ದಂಪತಿಗಳಿಬ್ಬರು ಸೇರಿ 5 ಅಡಿ ಅಗಲ, 60 ಅಡಿ ಆಳದ ಬಾವಿಯನ್ನೇ ತೋಡಿದ್ದಾರೆ. ಹಗಲಲ್ಲಿ ಕೂಲಿಗೂ ಹೋಗಿ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ದಿನಕ್ಕೆ ನಾಲ್ಕೇ ಗಂಟೆ ಕೆಲಸ ಮಾಡಿ ಬಾವಿಯನ್ನೇ ತೋಡಿದ್ದಾರೆ. ಬಾವಿಯಲ್ಲಿ ನೀರು ಜಿನುಗುತ್ತಿದ್ದು ಇನ್ನೈದು ಅಡಿ ತೆಗೆದರೆ ಸಮೃದ್ಧ ಜಲ ಉಕ್ಕಲಿದೆ. ನೀರಿಲ್ಲ ಅಂತ ನೊಂದು ಕೂತ ದಂಪತಿಗೆ ಹೊಳೆದದ್ದೇ ಬಾವಿ ಐಡಿಯಾ. 13 ವರ್ಷ ಶಬರಿಮಲೆಗೆ ಹೋಗಿದ್...
ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು ಮುಂಬೈ: ಮೋಸ್ಟ್ ವ್ಯಾಲ್ಯುಬಲ್ ಭಾರತೀಯ ಸೆಲೆಬ್ರಿಟಿಗಳ ಲಿಸ್ಟ್ ಬಿಡುಗಡೆಯಾಗಿದೆ. ಈ ಲಿಸ್ಟ್ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗಿದ್ದರೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಡಫ್ ಮತ್ತು ಫೆಲ್ಪ್ಸ್ನ ಮೋಸ್ಟ್ ವ್ಯಾಲ್ಯೂಬಲ್ ಭಾರತೀಯ ಸೆಲೆಬ್ರಿಟಿಗಳ ಹೊಸ ಸಮೀಕ್ಷೆಯಲ್ಲಿ ಬಿಡುಗಡೆಯಾಗಿದೆ. ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ 2021ರಲ್ಲಿ 237.7 ಡಾಲರ್(1,800 ಕೋಟಿ ರೂ.) ಇತ್ತು. ಆದರೆ ಈಗ ಈ ಮೌಲ್ಯ 185.7 ಮಿಲಿಯನ್ ಡಾಲರ್ಗೆ(1,400 ಕೋಟಿ ರೂ.) ಇಳಿಕೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿ 21% ರಷ್ಟು ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗಿದೆ. ಆದರೂ ಕೊಹ್ಲಿಗೆ ಮೊದಲ ಸ್ಥಾನ ಸಿಕ್ಕಿದೆ. ಈ ಲಿಸ್ಟ್ನಲ್ಲಿ, ಕ್ರಮವಾಗಿ ರಣವೀರ್ ಸಿಂಗ್ 158.3 ಮಿಲಿಯನ್ ಡಾಲರ್(1200 ಕೋಟಿ ರೂ.), ಅಕ್ಷಯ್ ಕುಮಾರ್ 139.6 ಮಿಲಿಯನ್ ಡಾಲರ್(1058 ಕೋಟಿ ರೂ.), ಆಲಿಯಾ ಭಟ್ 68.1 ಮಿಲಿಯನ್ ಡಾಲರ್(516 ಕೋಟಿ ರೂ), ಎಂ.ಎಸ್.ಧೋನಿ 61.2 ಮಿಲಿಯನ್ ಡಾಲರ್(463 ಕೋಟಿ ರೂ.) ಇದ್ದು ಟಾಪ್ 5 ಸ್ಥಾನಗಳಲ್ಲಿ ಇದ್ದಾರೆ. ಸಚಿನ್ ತೆಂಡೂಲ್ಕರ್ 47.4 ಮಿಲಿಯನ್ ಡಾಲರ್(359 ಕೋಟಿ ರೂ.) ಪಡೆದು 11ನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ 32.2 ಡಾಲರ್(244 ಕೋಟಿ ರೂ.) ಪಡೆದು 13ನೇ ಸ್ಥಾನದಲ್ಲಿದ್ದಾರೆ. ಪಿ....
Comments
Post a Comment