ಹ್ಯಾಪಿ ಬರ್ತಡೇ ಪವರ್ ಸ್ಟಾರ್ ಬ್ಯಾನರ್ ಹೊತ್ತ ವಿಮಾನ : ಯಾವೆಲ್ಲ ಸ್ಥಳದಲ್ಲಿ ಹಾರಾಟ, ವೇಳಾಪಟ್ಟಿ ಡಿಟೇಲ್ಸ್
ಹ್ಯಾಪಿ ಬರ್ತಡೇ ಪವರ್ ಸ್ಟಾರ್ ಬ್ಯಾನರ್ ಹೊತ್ತ ವಿಮಾನ : ಯಾವೆಲ್ಲ ಸ್ಥಳದಲ್ಲಿ ಹಾರಾಟ, ವೇಳಾಪಟ್ಟಿ ಡಿಟೇಲ್ಸ್
ಪುನೀತ್ ರಾಜ್ ಕುಮಾರ್ ಜನ್ಮದಿನದ ನಿಮಿತ್ತ ಮತ್ತು ಜೇಮ್ಸ್ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹೂಗಳನ್ನು ಸುರಿಸುವ ಅಭಿಮಾನಿಗಳ ಆಸೆಗೆ ಪೊಲೀಸ್ ಇಲಾಖೆ ತಣ್ಣೀರೆರಚಿತ್ತು. ಮಾಡಿಕೊಂಡಿದ್ದ ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿತ್ತು. ಆದರೂ, ಪುಟ್ಟ ವಿಮಾನವೊಂದು ಬಾನಂಗಳದಿಂದಲೇ ‘ಹ್ಯಾಪಿ ಬರ್ತಡೇ ಪವರ್ ಸ್ಟಾರ್’ ಎಂಬ ಬ್ಯಾನರ್ ಹೊತ್ತು, ಶುಭಾಶಯ ಕೋರಿದೆ.
ಬೆಳಗ್ಗೆ 9.30ಕ್ಕೆ ಬಾನಂಗಳಕ್ಕೆ ಹಾರಿದ ವಿಮಾನ ಕಂಡು ಪುನೀತ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಎರಡು ಗಂಟೆಗಳ ಕಾಲ ಈ ಬ್ಯಾನರ್ ಹೊತ್ತ ಮಿನಿ ವಿಮಾನ ಆಗಸದಲ್ಲಿ ಹಾರಾಡಿದೆ. ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟ ಈ ಪುಟ್ಟ ವಿಮಾನವು ಮೊದಲು ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳದ ಮೇಲೆ ಹಾರಾಟ ನಡೆಸಿತು. ಈ ಸ್ಥಳದಲ್ಲಿಯೇ ಸುಮಾರು 25ಕ್ಕೂ ಹೆಚ್ಚು ನಿಮಿಷ ಹಾರಾಟ ಮಾಡಿ, ಅಭಿಮಾನಿಗಳ ಹರ್ಷೋದ್ಘಾರಕ್ಕೆ ಸಾಕ್ಷಿ ಆಯಿತು. ನಂತರ ಸದಾಶಿವ ನಗರ, ಒರಾಯನ್ ಮಾಲ್, ರಾಜಾಜಿನಗರ, ಮಲ್ಲೇಶ್ವರಂ, ಗಾಂಧಿನಗರ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಹಾರಾಡಿದೆ. 9.30 ರಿಂದ ಶುರುವಾದ ಈ ಪುಟ್ಟ ವಿಮಾನದ ಹಾರಾಟ, 11.30ಕ್ಕೆ ಮತ್ತೆ ಜಕ್ಕೂರು ವಿಮಾನ ನಿಲ್ದಾಣ ತಲುಪಿದ ನಂತರ ಮುಕ್ತಾಯವಾಯಿತು.
ಸಂಜೆ ಮತ್ತೊಂದು ಸುತ್ತಿನ ಹಾರಾಟಕ್ಕೆ ಈ ವಿಮಾನ ಸಜ್ಜಾಗಿದೆ. ಸಂಜೆ 4 ಗಂಟೆಗೆ ಶುರುವಾಗುವ ಹಾರಾಟ ಎರಡು ಗಂಟೆಗಳ ಕಾಲ ಅದು ವಿವಿಧ ಸ್ಥಳಗಳ ಮೇಲೆ ಹಾರಾಡಲಿದೆ. ಶಿವರಾಜ್ ಕುಮಾರ್ ನಿವಾಸವಿರುವ ಮಾನ್ಯತಾ ಟೆಕ್ ಪಾರ್ಕ್, ಮೈಸೂರು ರಸ್ತೆ, ಬನಶಂಕರಿ, ಜೆ.ಪಿ. ನಗರ, ಗೋಪಾಲ್ ಮಹಲ್, ಕೆ.ಆರ್. ಮಾರ್ಕೆಟ್, ಬಾಣಸವಾಡಿ, ಕೆ.ಆರ್. ಪುರಂ, ಸಿಲ್ಕ್ ಬೋರ್ಡ್, ದೊಮ್ಮಲೂರು ಹೀಗೆ ಇತರ ಸ್ಥಳಗಳ ಮೇಲೆ ಈ ಮಿನಿ ಹಕ್ಕಿ ಹಾರಾಟ ಮಾಡಲಿದೆ.
Comments
Post a Comment