ಬಾವಿಗೆ ಬಿದ್ದ ಸಹೋದರಿಯರಿಬ್ಬರ ಶವ ಪತ್ತೆ – ನಾಲ್ವರ ಬಂಧನ

ಬಾವಿಗೆ ಬಿದ್ದ ಸಹೋದರಿಯರಿಬ್ಬರ ಶವ ಪತ್ತೆ – ನಾಲ್ವರ ಬಂಧನ

ಬೀದರ್: ಬಾವಿಗೆ ಬಿದ್ದು ಸಾವನ್ನಪ್ಪಿರುವ ಸಹೋದರಿಯರಿಬ್ಬರ ಆತ್ಮಹತ್ಯೆ  ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಬಾಜೀ, ವಿಠಲ್, ರಾಣಿ ಬಂಧಿತ ಆರೋಪಿಗಳಾಗಿದ್ದಾರೆ. ನಾಲ್ಕು ಜನ ಆರೋಪಿಗಳನ್ನು ಮೇಹಕರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಡೆದಿದ್ದೇನು?: ಎರಡು ದಿನಗಳ ಹಿಂದೆ ಅಂಕಿತ(15) ಹಾಗೂ ಶ್ರದ್ಧಾ(13) ಸಹೋದರಿಯರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಟ್ಟರ್ಗಾ ಗ್ರಾಮದಲ್ಲಿ ಘಟನೆಯಾಗಿದ್ದು, ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ಮದುವೆ ಸಂಬಂದ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಈ ವೇಳೆ ಸಂಬಾಜೀ, ಸಹೋದರಿಯರ ಪೋಷಕರ ಮೇಲೆ ಹಲ್ಲೆ ಮಾಡಿದ್ದನು. ಈ ವಿಚಾರವಾಗಿ ಮನನೊಂದು ಸಹೋದರಿಯರಿಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು