ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್


ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

ವಾಷಿಂಗ್ಟನ್: ಉಕ್ರೇನ್-ರಷ್ಯಾ ನಡುವೆ ಯುದ್ಧ ತೀವ್ರಗತಿಯಲ್ಲಿ ಸಾಗುತ್ತಿದೆ. ಈ ನಡುವೆ ರಷ್ಯಾ ಸೇನೆ 1,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಕೊಟ್ಟಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿದ್ದಾರೆ. ಈ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾ ಅಧ್ಯಕ್ಷ ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದು ಕರೆದಿದ್ದಾರೆ.

ಶ್ವೇತಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾ – ಉಕ್ರೇನ್ ಯುದ್ಧ ಕುರಿತು ಮಾತನಾಡಿದ ಬೈಡನ್, ಉಕ್ರೇನ್‍ನಲ್ಲಿ ರಷ್ಯಾದ ನಾಯಕನ ದಾಳಿಯು ಹೆಚ್ಚು ನಾಗರಿಕರನ್ನು ಬಲಿತೆಗೆದುಕೊಂಡಿತು. ‘ನೂರಾರು’ ಜನರು ಆಶ್ರಯ ಪಡೆದಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಇದು ಅಮಾನವೀಯವಾಗಿದೆ. ಈ ಮೂಲಕ ಪುಟಿನ್ ‘ಯುದ್ಧ ಅಪರಾಧಿ’ ಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Joe Biden

ಬಂದರು ನಗರವಾದ ಮಾರಿಯುಪೋಲ್‍ನ ಅಧಿಕಾರಿಗಳು ಡ್ರಾಮಾ ಥಿಯೇಟರ್‌ನಲ್ಲಿ ಸತ್ತವರನ್ನು ಎಣಿಸಲು ಹೆಣಗಾಡುತ್ತಿದ್ದರು. ಕಟ್ಟಡದ ಅವಶೇಷಗಳಿಂದ ದಟ್ಟವಾದ ಹೊಗೆ ಏರಿತುತ್ತಿದೆ ಎಂದು ಹೇಳಿದ್ದಾರೆ.

ಫೆಬ್ರವರಿ 24 ರಂದು ಪುಟಿನ್ ಆಕ್ರಮಣ ಮಾಡಿದ ನಂತರ ಉಕ್ರೇನ್‍ನಾದ್ಯಂತ ನಾಗರಿಕರ ಮೇಲಿನ ಹಲ್ಲೆ ನಡೆಯುತ್ತ ಇದೆ. ಇತ್ತೀಚೆಗೆ ಇದು ಅತೀರೇಕಕ್ಕೆ ಹೋಗಿದ್ದು, ಮನೆಗಳು, ಆಸ್ಪತ್ರೆಗಳು, ಆಂಬ್ಯುಲೆನ್ಸ್ ಗಳು ಮತ್ತು ಗಿರಣಿ ಅಂಗಡಿಗಳ ಮೇಲೆಯೇ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದಾರೆ. ಇದರಿಂದ ಅಲ್ಲಿನ ನಾಗರಿಕರು ತಮ್ಮ ಸುರಕ್ಷತೆಯ ಜಾಗ ಹುಡುಕುವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ.

Biden slams 'war criminal' Putin as Ukraine civilian horror grows

ಉಕ್ರೇನ್‍ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯು ಯುಎಸ್ ಕಾಂಗ್ರೆಸ್ ಮತ್ತು ಅಧ್ಯಕ್ಷರಿಗೆ ಸಹಾಯಕ್ಕಾಗಿ ಒಂದು ದೊಡ್ಡ ಮನವಿಯನ್ನು ಮಾಡಿದ್ದರು. ಅದಕ್ಕೆ ಬೈಡನ್, ರಷ್ಯಾದ ಆಕ್ರಮಣಕಾರಿ ಸೈನ್ಯದ ವಿರುದ್ಧ ಹೋರಾಡಲು 1 ಬಿಲಿಯನ್ ಹೊಸ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಪ್ರತಿಕ್ರಿಯಿಸಿದ್ದರು.

Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ