ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿ

ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿ

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ಬುರ್ಕಾ ಮಾನಸಿಕ ಗುಲಾಮಗಿರಿ ಎಂದು ತಿಳಿಸಿದ್ದಾರೆ. ಅವರ ಮಾತನ್ನು ಹೇಳುವವರು, ಒಮ್ಮೆ ಅಂಬೇಡ್ಕರ್ ಹೇಳಿರುವುದನ್ನು ಓದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಮಕ್ಕಳು ಒಂದೇ ಅನ್ನೋದಕ್ಕೆ ಹಿಜಬ್‍ನ್ನು ಶಾಲೆಗಳಲ್ಲಿ ಬ್ಯಾನ್ ಮಾಡಲಾಗಿದೆ. ಎಲ್ಲರೂ ಒಂದಾಗಿ ಕಲಿಯಬೇಕು ಎನ್ನುವುದು ಉದ್ದೇಶವಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಹಿಜಬ್, ಬುರ್ಕಾ ಬ್ಯಾನ್ ಮಾಡಿಲ್ಲ. ಫ್ರಾನ್ಸ್, ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಬುರ್ಕಾವನ್ನು ಬ್ಯಾನ್ ಮಾಡಲಾಗಿದೆ. ಭಾರತ ಆಗಲಿ, ಕರ್ನಾಟಕ ಆಗಲಿ ಹಿಜಬ್, ಬುರ್ಕಾವನ್ನು ಬ್ಯಾನ್ ಮಾಡಿಲ್ಲ ಎಂದರು.

ಹಿಜಬ್ ವಿಚಾರ ಬಹಳ ಸ್ಪಷ್ಟ ಇದೆ. ಅವರ ಮೂಗಿಗೆ ನೇರವಾಗಿ ತೀರ್ಪು ಬಂದರೆ ಸಂವಿಧಾನ ಬಗ್ಗೆ ಮಾತಾಡ್ತಾರೆ. ಹಿಂದೆ ಶಾಬಾನ ವಿಚಾರವಾಗಿ ತೀರ್ಪು ಬಂದಾಗ ಹೀಗೆ ಮಾಡಿದ್ದರು. ಅಂದಿನ ರಾಜೀವ್ ಗಾಂಧಿ ಸರ್ಕಾರ ಬೆದರಿಕೆಗೆ ಮಣಿದಿತ್ತು. ಇಂದು ಆ ರೀತಿ ಮಣಿಯೋದಿಲ್ಲ. ಈಗ ಇರೋದು ಬಿಜೆಪಿ ಸರ್ಕಾರ. ನಿಮ್ಮ ಅಜೆಂಡಾ ಈಗ ತರಬೇಡಿ. ಜಿನ್ನಾ ಅಜೆಂಡಾ ಈಗ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು

Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ