40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ
40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ
ಹುಬ್ಬಳ್ಳಿ: ಗ್ರಾಮೀಣಾಭಿವೃದ್ಧಿ ಇಲಾಖೆ 40% ಕಮಿಷನ್ ಇಲಾಖೆಯಿದ್ದ ಹಾಗೆ. ಕಾಮಗಾರಿಗಳ ಬಿಲ್ ಆಗಬೇಕು ಅಂದ್ರೆ 40% ಕಮಿಷನ್ ಕೊಡಲೇ ಬೇಕು ಅಂತ, ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದು, ಸಚಿವ ಕೆಎಸ್ ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರ ಸಂತೋಷ್, ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಅಭಿವೃದ್ಧಿಗಾಗಿ, 4 ಕೋಟಿ ವೆಚ್ಚದಲ್ಲಿ ಸುಮಾರು 108 ವಿವಿಧ ಕಾಮಗಾರಿಗಳನ್ನು ಈಶ್ವರಪ್ಪ ಮಂಜೂರು ಮಾಡಿದ್ದರು. ಸದ್ಯ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಗುತ್ತಿಗೆದಾರ ಸಂತೋಷ ಅವರಿಗೆ ಇನ್ನೂ ಒಂದು ರೂಪಾಯಿ ಸಹ ಬಂದಿಲ್ಲ.
ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಈಶ್ವರಪ್ಪ ಆಪ್ತರು ಮತ್ತು ಇಲಾಖೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತು ಹಣ ಬಿಡುಗಡೆ ಮಾಡಲು ಸೂಚನೆ ನೀಡುವಂತೆ ಪ್ರಧಾನಿ ಮೋದಿಗೆ ಗುತ್ತಿಗೆದಾರ ಸಂತೋಷ ಪತ್ರ ಬರೆದಿದ್ದಾರೆ.
Comments
Post a Comment