ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡೋರಿಗೆ ಹೋಗುತ್ತೆ: ಪ್ರಶಾಂತ್ ಸಂಬರ್ಗಿ

 

ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡೋರಿಗೆ ಹೋಗುತ್ತೆ: ಪ್ರಶಾಂತ್ ಸಂಬರ್ಗಿ

ಬೆಂಗಳೂರು: ಹಲಾಲ್ ಮಾಡಿದ್ದ ಹಣ ಭಯೋತ್ಪಾದನೆ ಮಾಡುವವರಿಗೆ ಹೋಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗೆ ಈ ಹಲಾಲ್ ಹಣ ಹೋಗುತ್ತದೆ. ಹಲಾಲ್ ನಮ್ಮ ಆಹಾರವಲ್ಲ. ಜೊತೆಗೆ ಹಲಾಲ್ ನಡೆಸಲು ಸರ್ಕಾರಿ ಸರ್ಟಿಫಿಕೇಟ್ ಇಲ್ಲ ಎಂದು ಕಿಡಿಕಾರಿದರು.

ಹಲಾಲ್ ಎನ್ನುವುದು ದೇಶಕ್ಕೆ ಮಾರಕವಾಗಿದೆ. ಇದು ಮುಸ್ಲಿಂ ಸಂಸ್ಕೃತಿಯಾಗಿದೆ. ಇದನ್ನು 15 ವರ್ಷಗಳಿಂದ ನಮ್ಮ ಮೇಲೆ ಹೇರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲಾಲ್ ಬಾಯ್ಕಾಟ್ ವಿಚಾರವಾಗಿ ನಾವು ಎರಡು ವರ್ಷ ಹಿಂದೆಯೇ ಈ ಅಭಿಯಾನದ ಆರಂಭ ಮಾಡಿದ್ದೇವೆ. ಹಲಾಲ್ ಎಲ್ಲಿ ಹೋಗುತ್ತದೆ ಎನ್ನುವುದರ ಕುರಿತು ಜಾಗೃತಿ ಕೆಲಸ ಮಾಡುತ್ತಿದ್ದೇವೆ. ಒಬ್ಬ ಮುಲ್ಲಾ ಹಲಾಲ್ ಮಾಡಿದರೆ ಮೆಕ್ಕಾ ಕಡೆ ಮುಖ ಮಾಡಿ ಕೋಳಿ ಕತ್ತರಿಸುತ್ತಾನೆ ಎಂದರು.

300 ಹಲಾಲ್ ಸರ್ಟಿಫಿಕೇಟ್ ಇರುವ ಕಂಪನಿಗಳಿವೆ. ಇವೆಲ್ಲ ಕಾನೂನು ಬಾಹಿರ ಸರ್ಟಿಫಿಕೇಟ್‍ಗಳಾಗಿವೆ. ಅನೇಕ ಮುಸ್ಲಿಂ ಯುವಕರಿಗೆ ಇದೊಂದು ಉದ್ಯಮವಾಗಿದೆ. ಅವರ ದೇವರಿಗೆ ಪ್ರಾರ್ಥನೆ ಮಾಡಿ ಆಮೇಲೆ ಹಿಂದೂಗಳಿಗೆ ಅರ್ಪಣೆ ಮಾಡುತ್ತಾರೆ. ಇದು ಒಳ್ಳೆದಲ್ಲ. ಹಿಂದೂ ಜಟ್ಕಾಮೀಟ್ ಆರಂಭ ಆಗಬೇಕು. ಗ್ರಾಹಕರ ಹಕ್ಕುಗಳ ಕುರಿತು ಮುಂದಿನ ಮೂರು ತಿಂಗಳ ಒಳಗೆ ಅಭಿಯಾನ ಆಗುತ್ತದೆ ಎಂದು ಹೇಳಿದರು. 

Comments

Popular posts from this blog

ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ರಾಜಧಾನಿ- ಜಗತ್ತಿನ ಟಾಪ್‌ 50ರಲ್ಲಿ ಭಾರತದ 35 ನಗರಗಳು

37 ವರ್ಷಗಳಲ್ಲೇ ಇದೇ ಮೊದಲು: ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ, ಸತತ 2ನೇ ಬಾರಿಗೆ 'ಯೋಗಿ ಸರ್ಕಾರ'!!

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ಮನವಿ.