ಹಲಾಲ್ ಮಾಂಸ ಮುಸ್ಲಿಮರ ದೇವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು : ಸಿ.ಟಿ ರವಿ
ಹಲಾಲ್ ಮಾಂಸ ಮುಸ್ಲಿಮರ ದೇವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು : ಸಿ.ಟಿ ರವಿ

ಬೆಂಗಳೂರು: ಮುಸ್ಲಿಮರು ಅವರ ದೇವರಿಗೆ ಒಪ್ಪಿಸಿದ ಹಲಾಲ್ ಮಾಂಸ ಅವರ ದೇವರಿಗೆ ಪ್ರಿಯ ನಮ್ಮ ದೇವರಿಗೆ ಎಂಜಲು ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.
ಹಲಾಲ್ ಮಾಂಸಕ್ಕೆ ಹಿಂದು ಸಂಘಟನೆಗಳು ಬಹಿಷ್ಕಾರ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ಹೇಳುವ ರೈಟ್ಸ್ ಇದೆಯೋ ಹಾಗೇ. ಅದನ್ನ ಬಹಿಷ್ಕಾರಿಸಿ ಅಂತ ಹೇಳುವ ರೈಟ್ಸ್ ನಮಗಿದೆ. ಹಲಾಲ್ ಅಂದರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಏನಾದರೂ ಇದ್ಯಾ? ಸಮಾರಸ್ಯವನ್ನು ಹೇರುವುದಕ್ಕೆ ಬರುವುದಿಲ್ಲ. ಹಾಗಂತ ಸಮಾರಸ್ಯ ಒನ್ ವೇ ಅಲ್ಲ, ಅದು ಟೂ ವೇ. ಹಲಾಲ್ ಇಲ್ಲದ ಮಾಂಸ ಅವರು ತಿನ್ನುವುದಕ್ಕೆ ರೆಡಿಯಾದರೆ, ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲಾ ಈಗಲೂ ಒಪ್ಪಿಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್. ಆರ್ಥಿಕ ಜಿಹಾದ್ ಅಂದರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಬಂದು ತಗೋತಾರಾ? ಮುಸ್ಲಿಂರ ಅಂಗಡಿಯಲ್ಲಿ ತೆಗೆದುಕೊಳ್ಳಬೇಕು ಅಂತ ನೀವು ಯಾಕೆ ಹೇಳುತ್ತೀರಾ? ಹೇಳುವುದಕ್ಕೆ ಏನು ರೈಟ್ಸ್ ಇದೆ ಎಂದು ಕಿಡಿಕಾರಿದ್ದಾರೆ.
ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ವಿಚಾರ: ರಾಜಕಾರಣದಲ್ಲಿ ಬಹಳ ಸಂಗತಿಗೆ ಆಧಾರ ಇರುವುದಿಲ್ಲ. ಆಧಾರ ಇದ್ದರೆ ಆಗಲೇ ಸಂಬಂಧಪಟ್ಟವರ ಮೇಲೆ ದೂರು ಕೊಡಬೇಕಿತ್ತು. ಈಶ್ವರಪ್ಪ ಕಳೆದ ನಾಲ್ಕು ದಶಕದಿಂದ ರಾಜಕೀಯದಲ್ಲಿದ್ದವರು. ಹಿಂದೆ ಇಲ್ಲದ ಆರೋಪ ಈಗ ಮಾಡುತ್ತಿದ್ದಾರೆ ಅಂದರೆ ಭವಿಷ್ಯ ರಾಜಕಾರಣ ಇರಬಹುದು. ನೇರವಾಗಿ ಮಾತಾಡುವವರಿಗೆ ಶತ್ರುಗಳ ಹೆಚ್ಚಾಗಿರುತ್ತಾರೆ. ನಾನು ನಂಬುವುದಿಲ್ಲ, ಅವರ ಹೆಸರಲ್ಲಿ ಮೋಸ ಮಾಡಿರಬಹುದು. ಸತ್ಯಾಸತ್ಯತೆ ತಿಳಿದು ಆರೋಪ ಮಾಡಬೇಕು ಎಂದಿದ್ದಾರೆ.
Comments
Post a Comment