ಒಂದೇ ವಾರದಲ್ಲಿ ಸತತ ನಾಲ್ಕನೇ ದಿನವು ಭಾರೀ ಏರಿಕೆ ಕಂಡ ಪೆಟ್ರೋಲ್, ಡಿಸೇಲ್

 

ಒಂದೇ ವಾರದಲ್ಲಿ ಸತತ ನಾಲ್ಕನೇ ದಿನವು ಭಾರೀ ಏರಿಕೆ ಕಂಡ ಪೆಟ್ರೋಲ್, ಡಿಸೇಲ್

ನವದೆಹಲಿ: 80 ಪೈಸೆಯಂತೆ ಸತತ ನಾಲ್ಕು ದಿನಗಳಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗುತ್ತಲೇ ಬರುತ್ತಿದೆ. ಪಂಚರಾಜ್ಯ ಚುನಾವಣೆ ನಂತರ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಒಂದೇ ವಾರದಲ್ಲಿ ನಾಲ್ಕನೇ ಬಾರಿ ತೈಲ ದರಗಳು ಏರಿಕೆಯಾದಂತಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 103.09 ರೂ ಇದ್ದ, ಪೆಟ್ರೋಲ್ ದರ 103.91 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‍ಗೆ 87.35 ರೂ ಇದ್ದ, ಡೀಸೆಲ್ ದರ ರೂ. 88.12ಗೆ ಏರಿಕೆಯಾಗಿದೆ.

ದೆಹಲಿಯಲ್ಲಿ 80 ಪೈಸೆ ಹೆಚ್ಚಳದ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ ರೂ.98.61 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.89.87 ದಾಖಲಾಗಿದೆ.ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 85 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ.ಪೆಟ್ರೋಲ್ ದರ ರೂ.113.35, ಡೀಸೆಲ್ ರೂ.97.55 ದಾಖಲಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 104.43 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.47 ರೂಪಾಯಿ ಇದೆ. ಹೈದರಾಬಾದ್‍ನಲ್ಲಿ ಲೀಟರ್‍ಗೆ ಪೆಟ್ರೋಲ್ ಬೆಲೆ 111.78ರೂ ಹಾಗೂ ಡೀಸೆಲ್‍ಗೆ 98.08ರೂ ದಾಖಲಾಗಿದೆ. ಲಖನೌದಲ್ಲಿ ಪೆಟ್ರೋಲ್ ದರ 98.44ರೂ ಹಾಗೂ ಡೀಸೆಲ್ ದರ 90 ರೂಗೆ ಏರಿಕೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನಲೆ ಈಗ ಭಾರತದಲ್ಲೂ ತೈಲ ಬೆಲೆ ಏರಿಕೆ ಆರಂಭವಾಗಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ.

Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ