ವರುಣ್ ಧವನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಜಾನ್ವಿ ಕಪೂರ್

 

ವರುಣ್ ಧವನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಜಾನ್ವಿ ಕಪೂರ್

ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಹುಬೇಡಿಕಯ ನಟಿಮಣಿಯರ ಸಾಲಿನಲ್ಲಿ ಒಬ್ಬರು. ಬಲಾವ್ ಸಿನಿಮಾ ಮೂಲಕ ನಟ ವರುಣ್ ಧವನ್ ಜೊತೆಗೆ ಜಾನ್ವಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

‘ಇಬ್ಬರು ಬಿಗ್ ಸ್ಟಾರ್‌ಗಳನ್ನು ಇಟ್ಟುಕೊಂಡು ನನ್ನ ಮುಂದಿನ ಪ್ರಾಜೆಕ್ಟ್ ಪ್ಲ್ಯಾನ್ ಮಾಡಿದ್ದೇನೆ. ಚಿತ್ರಕ್ಕೆ ಬವಾಲ್ ಎಂದು ಹೆಸರಿಡಲಾಗಿದ್ದು, 2023 ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಯಾಗಲಿದೆ. ವರುಣ್ ಮತ್ತು ಜಾನ್ವಿ ತಮ್ಮ ಕೆಮಿಸ್ಟ್ರಿ ಮೂಲಕ ಸಿನಿಮಾದಲ್ಲಿ ಮೋಡಿ ಮಾಡಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ನಿತೇಶ್ ತಿವಾರಿ.

ನನ್ನ ಮುಂದಿನ ಸಿನಿಮಾ ಬಗ್ಗೆ ನಾನು ತುಂಬಾ ಕಾತುರನಾಗಿದ್ದೇನೆ ಎಂದು ಬರೆದುಕೊಂಡಿರುವ ವರುಣ್ ಧವನ್ ಬವಾಲ್ ಸಿನಿಮಾದ ಪೋಸ್ಟರ್ನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.  

ಜಾನ್ವಿ ಕಪೂರ್ ಗುಡ್ಲಕ್ ಜೆರ್ರಿ ಮತ್ತು ಮಿಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮಲಯಾಳಂನ ಹೆಲೆನ್ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಇದೀಗ ಬಲಾವ್ ಸಿನಿಮಾದಲ್ಲಿ ವರೂಣ್ ಧವನ್ ಅವರಿಗೆ ಜೊತೆಯಾಗಿದ್ದಾರೆ.

Comments

Popular posts from this blog

ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ರಾಜಧಾನಿ- ಜಗತ್ತಿನ ಟಾಪ್‌ 50ರಲ್ಲಿ ಭಾರತದ 35 ನಗರಗಳು

37 ವರ್ಷಗಳಲ್ಲೇ ಇದೇ ಮೊದಲು: ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ, ಸತತ 2ನೇ ಬಾರಿಗೆ 'ಯೋಗಿ ಸರ್ಕಾರ'!!

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ಮನವಿ.