Posts

ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದ ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ

Image
  ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದ ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ ಚಿಕ್ಕಮಗಳೂರು:  ಹೆದ್ದಾರಿ ಅಗಲಿಕರಣದ ವೇಳೆ ರೈತರು ಜಮೀನು ಕಳೆದುಕೊಳ್ಳುತ್ತಾರೆ. 62 ಕೋಟಿ ಪರಿಹಾರ ಕೊಡಬೇಕಾದ ಜಾಗದಲ್ಲಿ ಎರಡೂವರೆ ಲಕ್ಷ ನೀಡಲು ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ವಿರೋಧಿಸಿ ಶ್ರೀಗಂಧದ ಬೆಳೆಗಾರರು ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಬೆಳಗಾರರು ಇಂದು ಸೀರೆಂಜ್‍ನಲ್ಲಿ ರಕ್ತ ತೆಗೆದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.  ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಪರಿಹಾರ ನೀಡ ಬೇಕು. 22 ರೈತರಿಗೆ 62 ಕೋಟಿ ಪರಿಹಾರ ಬರಬೇಕು. ಎರಡೂವರೆ ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಹೆದ್ದಾರಿ ಅಗಲೀಕರಣದ ವೇಳೆ ಜಮೀನು ಕಳೆದುಕೊಳ್ಳಲಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಲು ಒತ್ತಾಯ ಮಾಡಲಾಗಿದೆ.

ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ

Image
  ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ ರಾಮನಗರ:  ಯುಗಾದಿ ಹಬ್ಬದ ಸಂದರ್ಭದಲ್ಲಿ ಹಳ್ಳಿ ಜನರು ಇಸ್ಪೀಟು ಆಡುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. ಅವರಿಗೆ ಪೊಲೀಸರು ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಳ್ಳಿಗಾಡಿನಲ್ಲಿ ಯುಗಾದಿ ಹಬ್ಬದ ವೇಳೆ ಎಲ್ಲರೂ ಮನೆಯಲ್ಲೇ ಇರುತ್ತಾರೆ. ರೈತರು ಹಬ್ಬದ ಮಾರನೇ ದಿನದಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ಆ ಎರಡು ದಿನ ಇಸ್ಪೀಟು ಆಡಿ ಸಂತಸ ಪಡುತ್ತಾರೆ. ಇದು ಸಂಪ್ರದಾಯವಾದ್ದರಿಂದ ಪೊಲೀಸರು ಜನರಿಗೆ ತೊಂದರೆ ಕೊಡದಂತೆ ಸರ್ಕಾರ ನಿರ್ದೇಶನ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದೇ ವೇಳೆ ಹಲಾಲ್ ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹಿಂದೂ, ಮುಸ್ಲಿಂ ಇನ್ನಾವುದೇ ಸಮಾಜವು ಪರಸ್ಪರ ಬಾಂಧವ್ಯದಿಂದ ಇರುವ ವಾತಾವರಣ ಇತ್ತು. ಕರಾವಳಿ ಭಾಗದಲ್ಲಿ ಮಾತ್ರ ಕೆಲವರು ಅವರೇ ವಿವಾದ ಹುಟ್ಟುಹಾಕಿಕೊಂಡಿದ್ದರು. ಆದರೆ ಇಂದು ಪ್ರತಿದಿನ ಹಿಂದುತ್ವದ ಹೆಸರಿನಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾ ಸಮಾಜದ ಶಾಂತಿ ಕದಡುವ ಕೆಲಸವಾಗುತ್ತಿದೆ ಎಂದು ದೂರಿದ್ದಾರೆ.  ಹಬ್ಬದ ಹೊಸತೊಡಕು ಮಾಡುವ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಮಾಡುವವರು ಹಲಾಲ್ ಮಾಡಿದ್ದಾರೋ ಇ...

ವರುಣ್ ಧವನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಜಾನ್ವಿ ಕಪೂರ್

Image
  ವರುಣ್ ಧವನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಜಾನ್ವಿ ಕಪೂರ್ ಮುಂಬೈ:  2023 ರಿಂದ 2027ರ ಅವಧಿಯ ಐಪಿಎಲ್ ಮಾಧ್ಯಮ ಹಕ್ಕು ಹರಾಜಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೆಂಡರ್ ಆಹ್ವಾನಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿದ ಬಿಸಿಸಿಐ, ಟೆಂಡರ್ ಖರೀದಿಸಲು ಇಚ್ಚಿಸುವ ಕಂಪನಿಗೆ ಮೇ 10ರ ವರೆಗೆ ಅವಕಾಶ ನೀಡಿದ್ದು, ಟೆಂಡರ್‌ಗೆ 25 ಲಕ್ಷ ರೂಪಾಯಿ ಮೂಲ ಬೆಲೆ ನಿಗದಿ ಮಾಡಿದೆ. ಹರಾಜು ಪ್ರಕ್ರಿಯೆಗೆ ಭಾಗವಹಿಸುವ ಕಂಪನಿ ಸೂಕ್ತ ದಾಖಲೆಯೊಂದಿಗೆ ಭಾಗವಹಿಸಲು ಸೂಚಿಸಿದೆ. ಟೆಂಡರ್‌ಗೆ 25 ಲಕ್ಷ ರೂ. ನಿಗದಿ ಪಡಿಸಿರುವ ಬಿಸಿಸಿಐ, ಮಾಧ್ಯಮ ಹಕ್ಕು 50,000 ಕೋಟಿ ರೂ.ಗೂ ಹೆಚ್ಚು ಮೊತ್ತಕ್ಕೆ ಮಾರಾಟಗುವ ನಿರೀಕ್ಷೆಯಲ್ಲಿದೆ. ಹರಾಜು ಪ್ರಕ್ರಿಯೆಯನ್ನು ಟಿವಿ, ಡಿಜಿಟಲ್ ಹಕ್ಕು ಸೇರಿದಂತೆ 4 ವಿಭಾಗಗಳಲ್ಲಿ ನಡೆಸುವ ಸಾಧ್ಯತೆ ಇದೆ. ಇದೀಗ 15ನೇ ಆವೃತ್ತಿ ಐಪಿಎಲ್ ನಡೆಯುತ್ತಿದ್ದು, ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಆಡುತ್ತಿದೆ. ಮುಂದಿನ ಆವೃತ್ತಿಯಲ್ಲೂ 10 ತಂಡಗಳು ಮುಂದುವರಿಯುವ ಕಾರಣ ಪಂದ್ಯಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹಾಗಾಗಿ ಜಾಹೀರಾತು ಮೂಲಕ ಹರಿದುಬರುವ ಹಣ ಮತ್ತಷ್ಟು ಏರಿಕೆಯಾಗಲಿದೆ. ಈಗಾಗಲೇ ಹರಾಜಿನಲ್ಲಿ ಹಲವು ಕಂಪನಿಗಳು ಭಾಗವಹಿಸಲು ಇಚ್ಚಿಸಿದ್ದು, ಬಿಸಿಸಿಐ ಬಂಪರ್ ಆದಾಯದ ಲೆಕ್ಕಾಚಾರದಲ್ಲಿದೆ. ಬಿಡ್ ಗೆದ್ದಿದ್ದು ಸ್ಟಾರ್ ಇಂಡಿಯಾ: 2018 ರಿಂದ 2022ರವರೆಗಿನ ಐಪಿಎಲ್ ಜಾಗತಿಕ ಪ್ರಸಾರದ ಹಕ್ಕನ್ನು ...

ವರುಣ್ ಧವನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಜಾನ್ವಿ ಕಪೂರ್

Image
  ವರುಣ್ ಧವನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಜಾನ್ವಿ ಕಪೂರ್ ಬಾ ಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಹುಬೇಡಿಕಯ ನಟಿಮಣಿಯರ ಸಾಲಿನಲ್ಲಿ ಒಬ್ಬರು. ಬಲಾವ್ ಸಿನಿಮಾ ಮೂಲಕ ನಟ ವರುಣ್ ಧವನ್ ಜೊತೆಗೆ ಜಾನ್ವಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಇಬ್ಬರು ಬಿಗ್ ಸ್ಟಾರ್‌ಗಳನ್ನು ಇಟ್ಟುಕೊಂಡು ನನ್ನ ಮುಂದಿನ ಪ್ರಾಜೆಕ್ಟ್ ಪ್ಲ್ಯಾನ್ ಮಾಡಿದ್ದೇನೆ. ಚಿತ್ರಕ್ಕೆ ಬವಾಲ್ ಎಂದು ಹೆಸರಿಡಲಾಗಿದ್ದು, 2023 ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಯಾಗಲಿದೆ. ವರುಣ್ ಮತ್ತು ಜಾನ್ವಿ ತಮ್ಮ ಕೆಮಿಸ್ಟ್ರಿ ಮೂಲಕ ಸಿನಿಮಾದಲ್ಲಿ ಮೋಡಿ ಮಾಡಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ನಿತೇಶ್ ತಿವಾರಿ. ನನ್ನ ಮುಂದಿನ ಸಿನಿಮಾ ಬಗ್ಗೆ ನಾನು ತುಂಬಾ ಕಾತುರನಾಗಿದ್ದೇನೆ ಎಂದು ಬರೆದುಕೊಂಡಿರುವ ವರುಣ್ ಧವನ್ ಬವಾಲ್ ಸಿನಿಮಾದ ಪೋಸ್ಟರ್ನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.   ಜಾನ್ವಿ ಕಪೂರ್ ಗುಡ್ಲಕ್ ಜೆರ್ರಿ ಮತ್ತು ಮಿಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮಲಯಾಳಂನ ಹೆಲೆನ್ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಇದೀಗ ಬಲಾವ್ ಸಿನಿಮಾದಲ್ಲಿ ವರೂಣ್ ಧವನ್ ಅವರಿಗೆ ಜೊತೆಯಾಗಿದ್ದಾರೆ.

ಬೀದರ್‌ನಲ್ಲಿ ಐಪಿಎಲ್ ಬುಕ್ಕಿ ಅರೆಸ್ಟ್

Image
  ಬೀದರ್‌ನಲ್ಲಿ ಐಪಿಎಲ್ ಬುಕ್ಕಿ ಅರೆಸ್ಟ್ ಬೀದರ್:  ಐಪಿಎಲ್ ಬುಕ್ಕಿಗಳ ಮೇಲೆ ಬೀದರ್ ಪೊಲೀಸರು ದಾಳಿ ಮಾಡಿ ಒಬ್ಬ ಐಪಿಎಲ್ ಬುಕ್ಕಿಯನ್ನು ಬಂಧಿಸಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಬಸವನಗರದಲ್ಲಿ ನಡೆದಿದೆ. ದಾಳಿ ಮಾಡಿದ ವೇಳೆ 8 ಮೊಬೈಲ್, 1 ಲ್ಯಾಪ್‍ಟಾಪ್ ಹಾಗೂ 1,05,500 ರೂ. ನಗದು ಹಣವನ್ನು ಹುಮ್ನಾಬಾದ್ ಪೊಲೀಸರು ಜಪ್ತಿ ಮಾಡಿದ್ದಾರೆ. ಪರಮೇಶ್ವರ್ ಅಲಿಯಾಸ್ ಪಮ್ಮಿ ಎಂಬ ಐಪಿಎಲ್ ಬುಕ್ಕಿಯನ್ನು ಬಂಧಿಸಿ ಹುಮ್ನಾಬಾದ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಐಪಿಎಲ್ ಪಂದ್ಯಗಳಿಗೆ ಹಣ ಕಟ್ಟಿಸಿಕೊಂಡು ಮಹಾರಾಷ್ಟ್ರದ ಲಾತೂರಿನ ಪ್ರಮುಖ ಬುಕ್ಕಿಗೆ ಹಣ ನೀಡುತ್ತಿದ್ದನು. ಪರಮೇಶ್ವರ್ ಬಗ್ಗೆ ಖಚಿತ ಮಾಹಿತಿ ಪಡೆದ ಹುಮ್ನಾಬಾದ್ ಪೊಲೀಸರು ದಾಳಿ ಮಾಡಿದ್ದಾರೆ. ಎಸ್ಪಿ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಹುಮ್ನಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಜ್ರಿವಾಲ್ ಮನೆಗೆ ದುಷ್ಕರ್ಮಿಗಳ ದಾಳಿ – ಸಿಸಿಟಿವಿ, ಭದ್ರತಾ ಗೋಡೆ ಧ್ವಂಸ

Image
  ಕೇಜ್ರಿವಾಲ್ ಮನೆಗೆ ದುಷ್ಕರ್ಮಿಗಳ ದಾಳಿ – ಸಿಸಿಟಿವಿ, ಭದ್ರತಾ ಗೋಡೆ ಧ್ವಂಸ ನವದೆಹಲಿ:  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳ ಗುಂಪೊಂದು ಬುಧವಾರ ಮಧ್ಯಾಹ್ನ ದಾಳಿ ನಡೆಸಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಕೇಜ್ರಿವಾಲ್ ಅವರ ಮನೆ ಮೇಲೆ ದಾಳಿ ನಡೆಸಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ತಿಳಿಸಿರುವ ಸಿಸೋಡಿಯಾ ದೆಹಲಿ ಮುಖ್ಯಮಂತ್ರಿ ನಿವಾಸದ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಭದ್ರತಾ ತಡೆಗೋಡೆಗಳು ಧ್ವಂಸವಾಗಿದೆ ಎಂದು ಹೇಳಿದ್ದಾರೆ.  ಇತ್ತೀಚೆಗೆ ಬಿಡುಗಡೆಯಾಗಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಕೇಜ್ರಿವಾಲ್ ವಿರೋಧವಾಗಿ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ತಡೆಗೋಡೆ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಧ್ವಂಸಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಸಾಬ್ರು, ಬೇಡ ಅಂದ್ರೆ ಕಿತ್ಕೊಂಡು ಬನ್ನಿ: ಸಿಎಂ ಇಬ್ರಾಹಿಂ

Image
  ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಸಾಬ್ರು, ಬೇಡ ಅಂದ್ರೆ ಕಿತ್ಕೊಂಡು ಬನ್ನಿ: ಸಿಎಂ ಇಬ್ರಾಹಿಂ - ಸತ್ತ ವ್ಯಕ್ತಿಗೆ ಆರತಿ ಮಾಡ್ತಿರೋದು ಟಿಪ್ಪುಗೆ ಮಾತ್ರ ಬೆಂಗಳೂರು:  ರಾಯಚೂರು ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಸಾಬ್ರು. ಬೇಡ ಅಂದ್ರೆ ಆ ಜಾಗ ಕೊಟ್ಟು ಹೋಗಿ ಎಂದು ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಶೃಂಗೇರಿ, ಮೂಕಾಂಬಿಕೆ ದೇವಾಲಯದಲ್ಲಿ ಸಲಾಂ ಆರತಿ ಮಾಡುತ್ತಾರೆ. ಸತ್ತ ವ್ಯಕ್ತಿಗೆ ಈಗಲೂ ಆರತಿ ಮಾಡ್ತಿರುವುದು ಟಿಪ್ಪು ಸುಲ್ತಾನ್‍ಗೆ ಮಾತ್ರ. ರಾಘವೇಂದ್ರ ಸ್ವಾಮೀಜಿ ಮಠದ ಬೃಂದಾನವ ಜಾಗ ಕೊಟ್ಟಿದ್ದು ಸಾಬ್ರು, ಬೇಡ ಅಂದ್ರೆ ಕಿತ್ಕೊಂಡು ಬನ್ನಿ, ಅಯ್ಯೋ ಏನಾಗಿದೆ ನಿಮಗೆ ಎಂದು ಪ್ರಶ್ನಿಸಿದರು. ಹಲಾಲ್ ಕಟ್ ಮಾಡೋದು ವೈಜ್ಞಾನಿಕ, ಬ್ಲಡ್ ಹೊರಗೆ ಬರುತ್ತೆ. ಜಟ್ಕಾ ಕಟ್ ಬ್ಲಡ್ ಬಾಡಿಯಿಂದ ಹೊರಗೆ ಬರಲ್ಲ. ಪಶು ವೈದ್ಯರು ಹಲಾಲ್, ಜಟ್ಕಾ ಎರಡು ವೈಜ್ಞಾನಿಕ ಅಂತಾದ್ರೆ ತಿನ್ನಲಿ ಬೇಕಾದ್ರೆ ಅವರು. ಜಟ್ಕಾನೇ ತಿಂತೀವಿ ಅಂದ್ರೆ ಏನು ಮಾಡಲು ಆಗಲ್ಲ, ಕುಡಿಯೋರನ್ನ ಕುಡಿಬೇಡ ಅನ್ನೋದಕ್ಕೆ ಆಗುತ್ತೆ ಎಂದು ಮರುಪ್ರಶ್ನೆ ಹಾಕಿದರು. ಎಲೆಕ್ಷನ್ ಬರ್ತಿದೆ ಅದಕ್ಕೆ ಅಷ್ಟೇ. ಇಸ್ಲಾಂನಲ್ಲಿ ಕುಳಿತು ನೀರು ಕುಡಿಬೇಕು, ಕುಳಿತು ಉಚ್ಚೆ ಉಯ್ಯೋದು ಅಂತಿದೆ. ಅದು ವೈಜ್ಞಾನಿಕ. ನಾವು ತೆಂಗಿನಕಾಯಿ, ಸೌತೆಕಾಯಿ ಕಟ್ ಮಾಡಿ ಬದುಕಿಕೊಳ್ತೀವಿ, ಭಗವಂತ ಅನ್ನ ಕೊಡ್ತಾನೆ. ಒಂದು ವರ್ಗದ ಹಿಂದೂ ಜನ ಮಾಡ್ತಿಲ್ಲ, ಬೆರಳೆಣಿ...