ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಸಾಬ್ರು, ಬೇಡ ಅಂದ್ರೆ ಕಿತ್ಕೊಂಡು ಬನ್ನಿ: ಸಿಎಂ ಇಬ್ರಾಹಿಂ
ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಸಾಬ್ರು, ಬೇಡ ಅಂದ್ರೆ ಕಿತ್ಕೊಂಡು ಬನ್ನಿ: ಸಿಎಂ ಇಬ್ರಾಹಿಂ
- ಸತ್ತ ವ್ಯಕ್ತಿಗೆ ಆರತಿ ಮಾಡ್ತಿರೋದು ಟಿಪ್ಪುಗೆ ಮಾತ್ರ
ಬೆಂಗಳೂರು: ರಾಯಚೂರು ಮಂತ್ರಾಲಯ ಮಠಕ್ಕೆ ಜಾಗ ಕೊಟ್ಟಿದ್ದು ಸಾಬ್ರು. ಬೇಡ ಅಂದ್ರೆ ಆ ಜಾಗ ಕೊಟ್ಟು ಹೋಗಿ ಎಂದು ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶೃಂಗೇರಿ, ಮೂಕಾಂಬಿಕೆ ದೇವಾಲಯದಲ್ಲಿ ಸಲಾಂ ಆರತಿ ಮಾಡುತ್ತಾರೆ. ಸತ್ತ ವ್ಯಕ್ತಿಗೆ ಈಗಲೂ ಆರತಿ ಮಾಡ್ತಿರುವುದು ಟಿಪ್ಪು ಸುಲ್ತಾನ್‍ಗೆ ಮಾತ್ರ. ರಾಘವೇಂದ್ರ ಸ್ವಾಮೀಜಿ ಮಠದ ಬೃಂದಾನವ ಜಾಗ ಕೊಟ್ಟಿದ್ದು ಸಾಬ್ರು, ಬೇಡ ಅಂದ್ರೆ ಕಿತ್ಕೊಂಡು ಬನ್ನಿ, ಅಯ್ಯೋ ಏನಾಗಿದೆ ನಿಮಗೆ ಎಂದು ಪ್ರಶ್ನಿಸಿದರು.
ಹಲಾಲ್ ಕಟ್ ಮಾಡೋದು ವೈಜ್ಞಾನಿಕ, ಬ್ಲಡ್ ಹೊರಗೆ ಬರುತ್ತೆ. ಜಟ್ಕಾ ಕಟ್ ಬ್ಲಡ್ ಬಾಡಿಯಿಂದ ಹೊರಗೆ ಬರಲ್ಲ. ಪಶು ವೈದ್ಯರು ಹಲಾಲ್, ಜಟ್ಕಾ ಎರಡು ವೈಜ್ಞಾನಿಕ ಅಂತಾದ್ರೆ ತಿನ್ನಲಿ ಬೇಕಾದ್ರೆ ಅವರು. ಜಟ್ಕಾನೇ ತಿಂತೀವಿ ಅಂದ್ರೆ ಏನು ಮಾಡಲು ಆಗಲ್ಲ, ಕುಡಿಯೋರನ್ನ ಕುಡಿಬೇಡ ಅನ್ನೋದಕ್ಕೆ ಆಗುತ್ತೆ ಎಂದು ಮರುಪ್ರಶ್ನೆ ಹಾಕಿದರು.
ಎಲೆಕ್ಷನ್ ಬರ್ತಿದೆ ಅದಕ್ಕೆ ಅಷ್ಟೇ. ಇಸ್ಲಾಂನಲ್ಲಿ ಕುಳಿತು ನೀರು ಕುಡಿಬೇಕು, ಕುಳಿತು ಉಚ್ಚೆ ಉಯ್ಯೋದು ಅಂತಿದೆ. ಅದು ವೈಜ್ಞಾನಿಕ. ನಾವು ತೆಂಗಿನಕಾಯಿ, ಸೌತೆಕಾಯಿ ಕಟ್ ಮಾಡಿ ಬದುಕಿಕೊಳ್ತೀವಿ, ಭಗವಂತ ಅನ್ನ ಕೊಡ್ತಾನೆ. ಒಂದು ವರ್ಗದ ಹಿಂದೂ ಜನ ಮಾಡ್ತಿಲ್ಲ, ಬೆರಳೆಣಿಕೆಯಷ್ಟು ಮಂದಿ ಇದನ್ನ ಮಾಡ್ತಿದ್ದಾರೆ ಅಷ್ಟೇ. ಹಿಂದೂ ಜನರ ಆಶೀರ್ವಾದದಿಂದಲೇ ನಾನು ಇಲ್ಲಿ ತನಕ ಬಂದಿರೋದು ಎಂದು ಸಿಎಂ ಇಬ್ರಾಹಿಂ ತಿಳಿಸಿದರು.
Comments
Post a Comment