ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ
ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

ಕೋಲ್ಕತ್ತ: ಟಿಎಂಸಿ ಮುಖಂಡನ ಹತ್ಯೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬಿರ್‌ಭುಮ್‌ನಲ್ಲಿ ಹಲವು ಮನೆಗಳಿಗೆ ಬೆಂಕಿ ಬಿದ್ದ ಪರಿಣಾಮ 10 ಮಂದಿ ಸಜೀವ ದಹನವಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇಲ್ಲಿನ ರಾಮಪುರಹಾಟ್‌ನ ಬಗುಟಿ ಗ್ರಾಮ ಪಂಚಾಯಿತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು ಅವರ ಗ್ರಾಮದಲ್ಲಿನ ವಿರೋಧಿ ಗುಂಪಿನ ಕೆಲವು ಮನೆಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ.
ದಾಳಿ ಹಿನ್ನೆಲೆಯಲ್ಲಿ 10 ರಿಂದ 12 ಮಂದಿಗೆ ಬೆಂಕಿ ಬಿದ್ದಿದ್ದು, 10 ಮಂದಿ ಸಜೀವ ದಹನವಾಗಿದ್ದಾರೆ. ಸುಟ್ಟು ಕರಕಲಾದ 10 ಮೃತದೇಹವನ್ನು ಹೊರತೆಗೆಲಾಗಿದ್ದು, ಒಂದೇ ಮನೆಯಿಂದ 7 ಮೃತದೇಹಗಳನ್ನು ಹೊರತೆಗೆದಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ. ದೇಹಗಳು ಸಂಪೂರ್ಣ ಸುಟ್ಟಿರುವುದರಿಂದ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ. ಎಲ್ಲ ದೇಹಗಳನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಢಿದಿದ್ದಾರೆ
ಇನ್ನೂ ಮುಖಂಡ ಶೇಖ್ ಅವರ ಹತ್ಯೆಯ ಸಂಬಂಧ ಈವರೆಗೂ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮನೆಗೆ ಬೆಂಕಿಯಿಟ್ಟ ಗುಂಪಿನ ಬಗ್ಗೆ ರಾಜ್ಯ ಸರ್ಕಾರವು ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ ಎಂದು ಡಿಜಿಪಿ ಮಾಳವೀಯ ಹೇಳಿದ್ದಾರೆ.
Comments
Post a Comment