ಹಿಂದಿಯಲ್ಲಿ 100 ಕೋಟಿ ಕ್ಲಬ್ ತಲುಪಿದ ಆರ್.ಆರ್.ಆರ್ : ಯಾವ ದಿನ ಎಷ್ಟು ಲೆಕ್ಕ?

 

ಹಿಂದಿಯಲ್ಲಿ 100 ಕೋಟಿ ಕ್ಲಬ್ ತಲುಪಿದ ಆರ್.ಆರ್.ಆರ್ : ಯಾವ ದಿನ ಎಷ್ಟು ಲೆಕ್ಕ?

ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಿದೆ. ವಿಶ್ವದಾದ್ಯಂತ ಮೂರೇ ದಿನಕ್ಕೆ 500 ಕೋಟಿ ರೂಪಾಯಿ ಬಾಚಿದ್ದ ಈ ಸಿನಿಮಾ, ಹಿಂದಿಯಲ್ಲಂತೂ ಸಖತ್ ಕಮಾಯಿ ಮಾಡಿದೆ.  ಕೇವಲ ನಾಲ್ಕೇ ದಿನಕ್ಕೆ ಹಿಂದಿಯಲ್ಲಿ ಅದು 100 ಕೋಟಿ ಕ್ಲಬ್ ಸೇರಿದೆ. ಅತೀ ಕಡಿಮೆ ಅವಧಿಯಲ್ಲಿ ನೂರು ಕೋಟಿ ಕ್ಲಬ್ ಸೇರಿದ ದಕ್ಷಿಣದ ಮೊದಲ ಸಿನಿಮಾ ಇದಾಗಿದೆ. 

ಮೊದಲ ದಿನ 19 ಕೋಟಿ, ಎರಡನೇ ದಿನ 24 ಕೋಟಿ, ಮೂರನೇ ದಿನ 31.5 ಕೋಟಿ ಮತ್ತು ನಾಲ್ಕನೇ ದಿನಕ್ಕೆ 17 ಕೋಟಿ ರೂಪಾಯಿಗಳ ಕೆಲಕ್ಷನ್ ಆಗಿದ್ದು, ಮಂಗಳವಾರ ನೂರು ಕೋಟಿಗೂ ಅಧಿಕ ಹಣ ಆರ್.ಆರ್.ಆರ್ ನಿರ್ಮಾಪಕರ ಜೇಬಿಗೆ ಬೀಳಲಿದೆ.

ಮೂರು ದಿನದ ವಿಶ್ವದ ಲೆಕ್ಕಾಚಾರ

ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ, ವೀಕೆಂಡ್ ನಲ್ಲಿ ವಿದೇಶದಲ್ಲೂ ಸಖತ್ ಕಮಾಯಿ ಮಾಡಿದೆಯಂತೆ. ಇದೇ ವೇಗದಲ್ಲೇ ಒಂದು ವಾರ ಪ್ರದರ್ಶನ ಕಂಡರೆ, ಒಂದು ವಾರದಲ್ಲಿ ಸಾವಿರ ಕೋಟಿ ಹಣ ಗಳಿಸಿದ ಮೊದಲ ಚಿತ್ರ ಇದಾಗಲಿದೆ.

ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 14.5 ಕೋಟಿ ಗಳಿಕೆ ಮಾಡಿದ್ದರೆ, ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿತ್ತು. ತಮಿಳು ನಾಡಿನಲ್ಲಿ 10 ಕೋಟಿ, ಕೇರಳದಲ್ಲಿ 4 ಕೋಟಿ, ಹಿಂದಿಯಲ್ಲಿ 14 ಕೋಟಿ, ಉತ್ತರ ಭಾರತದಲ್ಲಿ 25 ಕೋಟಿ, ಹೀಗೆ ಭಾರತದಲ್ಲೇ ಮೊದಲ ದಿನ ಆರ್.ಆರ್.ಆರ್ ಗಳಿಸಿದ ಒಟ್ಟು ಮೊತ್ತ 156 ಕೋಟಿ ಆಗಿತ್ತು. ವಿದೇಶದಲ್ಲೂ ಕೂಡ ಹಿಂದೆ ಬಿದ್ದಿರಲಿಲ್ಲ. ಯುಎಸ್ ನಲ್ಲೇ 42 ಕೋಟಿ ಕಲೆಕ್ಷನ್ ಮಾಡಿತ್ತು. ಬೇರೆ ಬೇರೆ ದೇಶಗಳಿಂದ 25 ಕೋಟಿ ಬಂದಿತ್ತು. ವಿಶ್ವದಾದ್ಯಂತ ಮೊದಲ ದಿನದ ಒಟ್ಟು ಕಲೆಕ್ಷನ್ 223 ಕೋಟಿ ಆಗಿತ್ತು.

Comments

Popular posts from this blog

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಮಗಳ ಮೃತ ದೇಹ ಹೊತ್ತು 10 ಕಿ.ಮೀ ಸಾಗಿದ ತಂದೆ

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ