ಲಾರಿ-ಟಿಟಿ ವಾಹನ ಡಿಕ್ಕಿ : ಓರ್ವ ಸಾವು,11 ಜನರಿಗೆ ಗಾಯ
ಲಾರಿ-ಟಿಟಿ ವಾಹನ ಡಿಕ್ಕಿ : ಓರ್ವ ಸಾವು,11 ಜನರಿಗೆ ಗಾಯ
ಚಿತ್ರದುರ್ಗ: ಲಾರಿಗೆ ಟಿಟಿ ವಾಹನ ಡಿಕ್ಕಿಹೊಡೆದಿದ್ದು,11 ಜನರಿಗೆ ಗಾಯಗಳಾಗಿ ಓರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರಲಡಕು ಗ್ರಾಮದ ಬಳಿ ನಡೆದಿದೆ.
ಟಿಟಿ ವಾಹನದಲ್ಲಿದ್ದ 25 ವರ್ಷದ ಆರಿಕ್ಯ ದಾಸ್ ಮೃತಪಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ 4ರ ಗೋಕರ್ಣದಿಂದ ಬೆಂಗಳೂರಿಗೆ ವಾಪಸ್ ತೆರಳುವಾಗ ಅಪಘಾತವಾಗಿದ್ದು, ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಪಡೆಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣವು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
Comments
Post a Comment