ಅದೃಷ್ಟದ ಗಾಯಕ: 150ಕ್ಕೂ ಹೆಚ್ಚು ಹುಡುಗಿರ ಪ್ರಪೋಸಲ್ ರಿಜೆಕ್ಟ್ ಮಾಡಿದ ಖ್ಯಾತ ಗಾಯಕ

 

ಅದೃಷ್ಟದ ಗಾಯಕ: 150ಕ್ಕೂ ಹೆಚ್ಚು ಹುಡುಗಿರ ಪ್ರಪೋಸಲ್ ರಿಜೆಕ್ಟ್ ಮಾಡಿದ ಖ್ಯಾತ ಗಾಯಕ

ಹಿಂದಿ ಫೇಮಸ್ ಸಿಂಗರ್ ಮಿಕಾ ಸಿಂಗ್ ಟಾಪ್ ಸೆಲೆಬ್ರಿಟಿಗಳಿಂದ ಸಾಮಾನ್ಯರ ಮದುವೆ ಇವೆಂಟ್‌ಗಳಿಗೆ ಇವರು ಇದ್ದೆ ಇರುತ್ತಾರೆ. ಆದರೆ ಇವರಿಗೆ ಇನ್ನು ಕಂಕಣಭಾಗ್ಯ ಕೂಡಿಬಂದಿಲ್ಲ. ಸಿಂಗ್ ಅವರಿಗೆ ಇಲ್ಲಿವರೆಗೂ ಮದುವೆಗಾಗಿ 150 ಹುಡುಗಿಯರ ಪ್ರಪೋಸಲ್ ಬಂದಿದ್ದರೂ, ಅವುಗಳಲ್ಲಿ ಯಾವುದನ್ನೂ ಒಪ್ಪಿಕೊಳ್ಳದೇ ರಿಜೆಕ್ಟ್ ಮಾಡಿದ್ದಾರೆ. ಈಗ ಸ್ವಯಂವರ ಶೋ ಮೂಲಕ ವಧು ಹುಡುಕಲು ಸಿದ್ಧವಾಗಿದ್ದಾರೆ.

ಸಿಂಗ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಸಂಭ್ರಮದಲ್ಲಿ ಹಾಡುವ ನಿಮಗೆ ಮದುವೆ ಆಗಬೇಕು ಎಂಬ ಆಸೆಯಿಲ್ವ ಎಂದು ಕೇಳುತ್ತಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳ ಮಾತುಗಳಿಗೆ ಸ್ಪಂದಿಸಿದ ಸಿಂಗ್, ನನಗೂ ಹುಡುಗಿಯನ್ನು ಆಯ್ಕೆ ಮಾಡಬೇಕು ಎಂದು ಹಲವರಿಗೆ ಆಸೆ ಇದೆ. ಇದಕ್ಕಾಗಿ ನಾನು ಹಲವು ವರ್ಷ ಹುಡುಕಿದ್ದೇನೆ. ಈಗಲೂ ನನಗೆ ಆಫರ್ ಸಿಗುತ್ತಿರುವುದಕ್ಕೆ ಖುಷಿ ಇದೆ. ನಾನು 20 ವರ್ಷದಲ್ಲಿ ಸುಮಾರು 150 ಮದುವೆ ಪ್ರಪೋಷಲ್ ರಿಜೆಕ್ಟ್ ಮಾಡಿದ್ದೇನೆ ಎಂದು ತಿಳಿಸಿದರು.

ನೆಗೆಟಿವ್ ಗಾಸಿಪ್ ಹಬ್ಬಿತ್ತು
ಆಗ ನನಗೆ ನನ್ನ ಕೆಲಸ ತುಂಬಾನೇ ಮುಖ್ಯವಾಗಿತ್ತು. ನನಗೆ ಪಾರ್ಟಿ ಮಾಡುವುದಕ್ಕೆ ಹುಡುಗಿಯ ಜೊತೆ ಸುತ್ತಾಡುವುದಕ್ಕೆ ಇಷ್ಟ. ಈ ಕಾರಣಕ್ಕೆ ನಾನು ಮದುವೆ ಆಗುತ್ತಿಲ್ಲ ಎಂಬ ಗಾಸಿಪ್ ಎಲ್ಲ ಕಡೆ ಹಬ್ಬಿತ್ತು. ಆದರೆ ಸತ್ಯ ಬೇರೆ ಇದೆ. ಮದುವೆ ಅಗುವುದಕ್ಕೆ ನನಗೆ ಧೈರ್ಯ ಇರಲಿಲ್ಲ. ಮನೆ ಹಿರಿಯರ ಬಗ್ಗೆ ಒಂದು ಬಗೆಯ ಗೌರವ ಹಾಗೂ ಭಯವಿದೆ. ಆದರೆ ಈಗ ನಾನು ಸ್ವಯಂವರದ ಹಿಂದಿ ಶೋ ಹೋಗಲು ನಮ್ಮ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ನಾನು ಮದುವೆ ಆಗಲು ನಿರ್ಧಾರ ಮಾಡಿದಕ್ಕೆ ನನ್ನ ಕುಟುಂಬ ಖುಷಿ ಪಡುತ್ತಿದೆ. ಜನರನ್ನು ಭೇಟಿ ಮಾಡುವುದಕ್ಕೆ ನನಗೆ ಏನೂ ಸಮಸ್ಯೆ ಇಲ್ಲ. ನಾನು ಒಳ್ಳೆಯ ಮನಸ್ಸಿರುವ ಕೆಟ್ಟ ಹುಡುಗ. ಹೀಗಾಗಿ ಹೆಚ್ಚಿಗೆ ಫ್ಯಾನ್ಸ್ ಇದ್ದಾರೆ. ಕಲಾವಿದರು ತಮ್ಮ ಕಾರ್ಯಕ್ರಮಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ನಾನು ಯಾವುದನ್ನು ಪೋಸ್ಟ್ ಮಾಡಿಲ್ಲ. ಆದರೂ ಜನರು ನನ್ನ ಮೇಲೆ ಅಭಿಮಾನ ಇಟ್ಟಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.

ಲವ್ ಮಾಡಿದ್ದೆ
2001ರಲ್ಲಿ ನನಗೆ ಗರ್ಲ್ ಫ್ರೆಂಡ್ ಇದ್ದಳು. ಅವಳು ದೆಹಲಿ ಹುಡುಗಿಯಾಗಿದ್ದಳು. ನಾನು ಬಾಲಿವುಡ್ನಲ್ಲಿ ಇರುವುದಕ್ಕೆ ಆಕೆಯ ಪೋಷಕರು ನನ್ನನ್ನು ಇಷ್ಟಪಡಲಿಲ್ಲ. ಅದಕ್ಕೆ ರಿಜೆಕ್ಟ್ ಆಯ್ತು. ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದ ಗರ್ಲ್ಫ್ರೆಂಡ್ ಬಾಲಿವುಡ್ ಹಾಗೆ ಹೀಗೆ ಎಂದು ಬಿಟ್ಟಳು. ನನ್ನ 2 ಮಾಜಿ ಗರ್ಲ್ಫ್ರೆಂಡ್‌ಗೆ ಮದುವೆ ಆಗಿದೆ. ನನ್ನ ಕೆಲಸ ಮತ್ತು ನನ್ನ ಪೋಷಕರನ್ನು ದೂರ ಮಾಡುವಂತ ಹುಡುಗಿ ನನಗೆ ಬೇಡ ಎಂದು ಮಾತನಾಡಿದರು. 

ಈಗ ನನಗೆ 44 ವರ್ಷ. ಒಳ್ಳೆ ಹುಡುಗಿ ಸಿಕ್ಕರೆ ಮದುವೆ ಆಗುವೆ ಇಲ್ಲದಿದ್ದರೆ ಒಂಟಿಯಾಗಿರುತ್ತೀನಿ. ನನಗೆ ಸಿಗುವ ಹುಡುಗಿ ಬಗ್ಗೆ ಹೆಚ್ಚಿಗೆ ಕನಸಿಲ್ಲ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಂತವರಾಗಿರಬೇಕು. ನಾವು ಅರ್ಥ ಮಾಡಿಸುವ ಅಗತ್ಯವಿಲ್ಲ ಹಾಗೆ ಅರ್ಥ ಮಾಡಿಕೊಳ್ಳುವಂತ ಹುಡುಗಿ ಬೇಕು ಎಂದ ಸಿಂಗ್.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು