ದಳಪತಿಯ ಬೀಸ್ಟ್ ಎದುರಿಗೆ ಯಶ್ ನಟನೆ ಕೆಜಿಎಫ್ 2
ದಳಪತಿಯ ಬೀಸ್ಟ್ ಎದುರಿಗೆ ಯಶ್ ನಟನೆ ಕೆಜಿಎಫ್ 2

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಖ್ಯಾತ ನಟಿ ಪೂಜಾ ಹೆಗ್ಡೆ ಅಭಿನಯದ `ಬೀಸ್ಟ್’ ಸಿನಿಮಾವು ಇದೇ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ.
ದಳಪತಿ ವಿಜಯ್ ಅವರ ಈ ಹಿಂದಿನ ಚಿತ್ರ `ಮಾಸ್ಟರ್’ ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿತ್ತು. ಅಪರಾಧ ಚಟುವಟಿಕೆಗಳಿಕೆ ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಉತ್ತಮ ಸಂದೇಶ ನೀಡಿದ ಈ ಚಿತ್ರವು ಬಾಕ್ಸ್ ಆಫೀಸ್‍ನಲ್ಲೂ ಸದ್ದು ಮಾಡಿತ್ತು. ಕೋವಿಡ್ ಕಾರಣದಿಂದಾಗಿ ಶೇ.50ರಷ್ಟು ಸಿನಿಮಾ ಪ್ರದರ್ಶನಕ್ಕೆ ಅವಕಾಶವಿದ್ದ ಸಂದರ್ಭದಲ್ಲೂ ಈ ಸಿನಿಮಾ ದೊಡ್ಡ ಹೆಜ್ಜೆಯನ್ನಿರಿಸಿತ್ತು. ಇದೀಗ ಬಹುನಿರೀಕ್ಷಿತ ಚಿತ್ರ `ಬೀಸ್ಟ್’ನೊಂದಿಗೆ ತೆರೆಯ ಮೇಲೆ ಬರಲು ದಳಪತಿ ಸಿದ್ಧರಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.
ಡಿಸೆಂಬರ್‌ನಲ್ಲಿ ಎಕ್ಸೈಟಿಂಗ್ ಪೋಸ್ಟರ್ ಬಿಡುಗಡೆ ಮಾಡಿದ್ದ ಬೀಸ್ಟ್ ಚಿತ್ರತಂಡವು ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಈ ಸಿನಿಮಾ ಏಪ್ರಿಲ್ 2ನೇ ವಾರದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ವರದಿಯಾಗಿತ್ತು. ಕೇರಳದಲ್ಲಿ ಏ.14 ರಂದು ಹೊಸ ವರ್ಷ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 13ರಂದೇ ಚಿತ್ರತಂಡವು ಬೀಸ್ಟ್ ಅನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ.
Comments
Post a Comment