ಕ್ಯಾನ್ಸರ್ ಪೀಡಿತ 52 ವರ್ಷದ ತಾಯಿ ಪ್ರೀತಿಸಿದ ಹುಡುಗನೊಂದಿಗೆ ಮರು ಮದುವೆ ಮಾಡಿಸಿದ ಮಗ
44 ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಸ್ತನ ಕ್ಯಾನ್ಸರ್ಗೆ ತುತ್ತಾದ ಅಮ್ಮನಿಗೆ ಮಗನೊಬ್ಬ 52ನೇ ವಯಸ್ಸಿಗೆ ಮರು ಮದುವೆ ಮಾಡಿಸಿದ್ದಾರೆ. ಸದ್ಯ ಈ ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜಿಮೀತ್ ಗಾಂಧಿ ಎನ್ನುವವರು ತಮ್ಮ ತಾಯಿಯ ಜೀವನದ ಪ್ರೇಮ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಜಿಮೀತ್ ತಮ್ಮ ತಾಯಿಯ ಬಗ್ಗೆ ಹೇಳುವಾಗ ಆಕೆ 2013ರಲ್ಲಿ 44 ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡರು. 2019ರಲ್ಲಿ 3ನೇ ಹಂತದ ಸ್ತನ ಕ್ಯಾನ್ಸರ್ಗೆ ತುತ್ತಾದರು. 2 ವರ್ಷಗಳ ಚಿಕಿತ್ಸೆಯ ಬಳಿಕ ಒಂದು ಹಂತಕ್ಕೆ ಗುಣಮುಖರಾಗಿದ್ದರು. ಆದರೆ ಕಳೆದ ವರ್ಷ ಡೆಲ್ಟಾ ವೇರಿಯಂಟ್ಗೆ ತುತ್ತಾದರು. ಆದರೂ ಜೀವನೋತ್ಸಾಹ ಕಳೆದುಕೊಳ್ಳದ ಅವರು ಒಂಟಿಯಾಗಿ ಬದುಕುತ್ತಿದ್ದರು. ಅವರು 52 ವರ್ಷದಲ್ಲೂ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಅವರ ಮಗನಾಗಿ ತಾಯಿಯ ಆಸೆಯನ್ನು ಈಡೇರಿಸುವುದು ಕರ್ತವ್ಯವಾಗಿದೆ. ಹೀಗಾಗಿ ಅವರು 52ನೇ ವರ್ಷದಲ್ಲಿ ಇಷ್ಟಪಟ್ಟ ಹುಡುಗನೊಂದಿಗೆ ಮದುವೆ ಮಾಡಿಸಿದ್ದೇನೆ. ಅಮ್ಮ ಎಂದರೆ ನಿಜಕ್ಕೂ ಹೋರಾಟಗಾರ್ತಿಯೂ ಹೌದು, ಯೋಧನೂ ಹೌದು, ಜೀವನದ ಯುದ್ಧದಲ್ಲಿ ಎದುರಾಗುವ ಪ್ರತೀ ಸವಾಲನ್ನು ಎದೆಗುಂದದೆ ಎದುರಿಸಿ ಗಟ್ಟಿಯಾಗಿ ನಿಲ್ಲುತ್ತಾಳೆ ಎಂದು ಬರೆದುಕೊಂಡಿದ್ದಾರೆ.
Comments
Post a Comment