ವಕೀಲರ ಕಚೇರಿಗಳಿಗೂ ವಿದ್ಯುತ್ ಸಬ್ಸಿಡಿ – ಬಜೆಟ್‍ನಲ್ಲಿ ಆಪ್ ಘೋಷಣೆ

 

ವಕೀಲರ ಕಚೇರಿಗಳಿಗೂ ವಿದ್ಯುತ್ ಸಬ್ಸಿಡಿ – ಬಜೆಟ್‍ನಲ್ಲಿ ಆಪ್ ಘೋಷಣೆ

ನವದೆಹಲಿ: ನ್ಯಾಯಲಯದ ಆವರಣದೊಳಗಿರುವ ವಕೀಲರ ಕಚೇರಿಗಳಿಗೂ ವಿದ್ಯುತ್ ಸಬ್ಸಿಡಿ ಯೋಜನೆಯನ್ನು ವಿಸ್ತರಣೆ ಮಾಡಲಾಗುವುದು ಎಂದು ದೆಹಲಿಯ ಉಪಮುಖ್ಯಮಂತ್ರಿ, ಹಣಕಾಸು ಸಚಿವ ಮನೀಶ್ ಸಿಸೋಡಿಯ ಘೋಷಿಸಿದ್ದಾರೆ.

ಬಜೆಟ್ ಮಂಡನೆಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ 200 ಯೂನಿಟ್ ಉಚಿತ ವಿದ್ಯುತ್ ಮತ್ತು 400 ಯೂನಿಟ್ ಬಳಕೆದಾರರಿಗೆ ನೀಡುವ ಸಬ್ಸಿಡಿ ಯೋಜನೆಯನ್ನು ನಗರದ ಎಲ್ಲ ನ್ಯಾಯಾಲಯಗಳಲ್ಲಿರುವ ವಕೀಲರ ಕಚೇರಿಗಳಿಗೂ ಅನ್ವಯ ಆಗಲಿದೆ ಎಂದು ತಿಳಿಸಿದರು.

ವಿದ್ಯುತ್ ಸಬ್ಸಿಡಿಗಾಗಿ 2022-23ರ ಬಜೆಟ್‍ನಲ್ಲಿ 3250 ಕೋಟಿ ರೂ.ಹಣವನ್ನು ಇದಕ್ಕಾಗಿ ಆಪ್ ಖರ್ಚು ಮಾಡುತ್ತಿದೆ. 2015ರ ಚುನಾವಣೆ ಸಂದರ್ಭದಲ್ಲಿ ಆಪ್ ಉಚಿತ ವಿದ್ಯುತ್ ಈ ಭರವಸೆಯನ್ನು ನೀಡಿತ್ತು. ಅದರಂತೆ ಈಗ ಉಚಿತ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿ ವಿಸ್ತರಿಸುತ್ತಿದೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು