ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

 

ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

ಕೊಡಗಿನ ಬೆಡಗಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಒಂದರ ಹಿಂದೆ ಒಂದು ಸಿನಿಮಾಗಳ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಲೇ ಇದ್ದಾರೆ. ಈ ಮಧ್ಯೆ ಅವರು ಫಿಟ್ನೆಸ್ ಕಡೆಗೂ ಹೆಚ್ಚು ಗಮನ ಕೊಡುತ್ತಾರೆ. ತಾವು ಜಿಮ್ ನಲ್ಲಿ ಕಳೆದ ಕ್ಷಣಗಳ ವೀಡಿಯೋ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಆರೋಗ್ಯದ ಬಗ್ಗೆ ಟಿಪ್ಸ್ ಕೊಡುತ್ತಾರೆ.

ನಟ, ನಟಿಯರಿಗೂ ಫಿಟ್ನೆಸ್ ತುಂಬಾ ಮುಖ್ಯ. ಬೇಸಿಗೆಯಲ್ಲಿ ಸಿನಿಮಂದಿ ಹೆಚ್ಚು ವರ್ಕೌಟ್ ಮಾಡುವುದು ಸಾಮಾನ್ಯ. ಅದೇ ರೀತಿ ರಶ್ಮಿಕಾ ಸಹ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋ, ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ವೀಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳು 6 ಸಾವಿರಕ್ಕೂ ಹೆಚ್ಚು ಕಾಮೆಂಟ್ ಮಾಡಿದ್ದಾರೆ.

ಈ ವೀಡಿಯೋಗೆ ರಶ್ಮಿಕಾ, ನಿಮಗೆ ಈ ವೀಡಿಯೋ ಇಷ್ಟವಾಗಿದ್ರೆ ಬೈಸೆಪ್ಸ್ ಇಮೋಜಿ ಕಳುಹಿಸಿ ಎಂದು ಬರೆದುಕೊಂಡಿದ್ದಾರೆ. ಕಳೆದ ಬಾರಿಯೂ ಈ ನಟಿ ವರ್ಕೌಟ್ ವೀಡಿಯೋ ಶೇರ್ ಮಾಡಿದ್ದರು. ಪ್ರಸ್ತುತ ಬಾಲಿವುಡ್, ಟಾಲಿವುಡ್ ಎಂದು ಬ್ಯುಸಿಯಾಗಿರುವ ಈ ನಟಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು