ಭಗವದ್ಗೀತೆ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ


ಭಗವದ್ಗೀತೆ ಬಗ್ಗೆ ನಮಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ

- ಹಿಂದುತ್ವ ಬಿಜೆಪಿ ಆಸ್ತಿನಾ?

ಕಲಬುರಗಿ: ರಾಜೀವ್ ಗಾಂಧಿ ಅವರು ದೂರದರ್ಶನದಲ್ಲಿ ರಾಮಾಯಣ, ಮಹಾಭಾರತ ತೋರಿಸುವ ವ್ಯವಸ್ಥೆಯನ್ನು ಮಾಡಿದ್ದರು. ಭಗವದ್ಗೀತೆ ಬಗ್ಗೆ ನಮಗೆ ಯಾವುದೇ ಹೊಟ್ಟೆ ಉರಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯದಾ ಯದಾ ಹಿ ಧರ್ಮಸ್ಯ, ಯಾವ ಶ್ಲೋಕ ಬೇಕು ಹೇಳಿ ನಾನು ಹೇಳುತ್ತೇನೆ. ನಾವು ಹಿಂದುಗಳು, ಹಿಂದುತ್ವ ಬಿಜೆಪಿ ಆಸ್ತಿನಾ? ಎಲ್ಲಾ ಧರ್ಮದ ಉತ್ತಮ ವಿಚಾರಗಳನ್ನು ಕಲಿಸಲಿ ನಮಗೆ ಅಭ್ಯಂತರವಿಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ.

ಮೇಕೆದಾಟು ವಿಚಾರವಾಗಿ ಮಾತನಾಡಿ, ಡಬಲ್ ಇಂಜಿನ ಸರ್ಕಾರಕ್ಕೆ ಬದ್ದತೆ ಇರಬೇಕು. ಎಲ್ಲಾ ಸರಿಯಿದೆ ಅಂತ ಸಿಎಂ ಹೇಳಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಬೇಕು. ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ಬೇಕೋ, ತಮಿಳುನಾಡು ಬೇಕೋ ಅನ್ನೋದನ್ನು ಹೇಳಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆವರಗೆ ಸುಮ್ಮನಿದ್ದರು. ಆದರೆ ಇದೀಗ ಪೆಟ್ರೋಲ್ ಮತ್ತು ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಮತದಾರರು ತಾಳ್ಮೆ ಕಳೆದುಕೊಂಡಿದ್ದಾರೆ. ಜನರ ಆದಾಯ ಹೆಚ್ಚು ಆಗಿಲ್ಲ ಬೆಲೆ ಏರಿಕೆ ಮಾತ್ರ ಹೆಚ್ಚಾಗುತ್ತಿದೆ. ಬೆಲೆ ಏರಿಕೆ ವಿರೋಧಿಸಿ, ಪಿಕ್ ಪಾಕೇಟರ್ಸ್ ವಿರುದ್ಧ ಹೋರಾಟ ಮಾಡುತ್ತೇವೆ. ಸಿಎಂ ಅವರು ಬೆಲೆ ಏರಿಕೆ ಮಾಡಬಾರದು. ಡಬಲ್ ಇಂಜಿನ್ ಸರ್ಕಾರ ಅಂತ ಹೇಳುತ್ತೀರಿ. ಇದೀಗ ಸರ್ಕಾರವೇ ಬೆಲೆ ಏರಿಕೆಯ ವೆಚ್ಚ ಭರಿಸಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು