ಮತ್ತೆ ನೈಜಘಟನೆಯ ಬೆನ್ನುಹತ್ತಿದ ನಿರ್ದೇಶಕ ಮಂಸೋರೆ

 

ಮತ್ತೆ ನೈಜಘಟನೆಯ ಬೆನ್ನುಹತ್ತಿದ ನಿರ್ದೇಶಕ ಮಂಸೋರೆ

ರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಮಂಸೋರೆ, ಇದೀಗ ಮತ್ತೊಂದು ಸಿನಿಮಾಗೆ ಆಕ್ಸನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಇಂದಿನಿಂದ ಚಿತ್ರೀಕರಣ ಆರಂಭಿಸಿದೆ. ಇವರ ಚೊಚ್ಚಲು ಸಿನಿಮಾ ‘ಹರಿವು’ ಕೂಡ ನೈಜಘಟನೆಯನ್ನೇ ಆಧರಿಸಿತ್ತು. ಇದೀಗ ನಾಲ್ಕನೇ ಚಿತ್ರಕ್ಕೂ ಅವರು ನಡೆದ ಘಟನೆಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 

ಹರಿವು ಸಿನಿಮಾದಲ್ಲಿ ಮಗನನ್ನು ಕಳೆದುಕೊಂಡ ಅಸಹಾಯಕ ತಂದೆಯೊಬ್ಬರು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹಳ್ಳಿಗೆ ತಮ್ಮ ಮಗನ ಶವವನ್ನು ಪೆಟ್ಟಿಗೆಯಲ್ಲಿ  ತಗೆದುಕೊಂಡು ಹೋದ ಅಮಾನವೀಯ ಘಟನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಬಾರಿ ಅವರು ಘಟನೆಯ ಬಗ್ಗೆ ಹೇಳಿಕೊಳ್ಳದೇ ‘ಈ ನೆಲದ ಮಣ್ಣಿನ ಜನರ ಆರ್ದ್ರ ಬದುಕಿನ ನೈಜ ಘಟನೆಯೊಂದನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದಷ್ಟೇ ಬರೆದುಕೊಂಡಿದ್ದಾರೆ. 

Comments

Popular posts from this blog

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಮಗಳ ಮೃತ ದೇಹ ಹೊತ್ತು 10 ಕಿ.ಮೀ ಸಾಗಿದ ತಂದೆ

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ