ಕಲಾವಿದ ದೇವಿಕಿರಣ್ ಕೈಚಳಕದಲ್ಲಿ ಪವರ್ ಸ್ಟಾರ್ ಪುನೀತ್

 

ಕಲಾವಿದ ದೇವಿಕಿರಣ್ ಕೈಚಳಕದಲ್ಲಿ ಪವರ್ ಸ್ಟಾರ್ ಪುನೀತ್

ಮಂಗಳೂರು: ಡಾ. ಪುನೀತ್ ರಾಜ್‍ಕುಮಾರ್ ಎಲ್ಲರನ್ನು ಬಿಟ್ಟು ಅಗಲಿದರೂ ಅಭಿಮಾನಿಗಳು ಒಂದಲ್ಲ ಒಂದು ರೀತಿ ಇಂದಿಗೂ ಅಭಿಮಾನವನ್ನು ತೋರಿಸುತ್ತಿದ್ದಾರೆ. ಇಂದು ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು, ಅಭಿಮಾನಿಗಳು ‘ಅಪ್ಪು’ ಹುಟ್ಟುಹಬ್ಬದ ಪ್ರಯುಕ್ತ ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂತೆಯೇ ಮಂಗಳೂರಿನ ಅಪ್ಪಟ ‘ಅಪ್ಪು’ ಅಭಿಮಾನಿಯೊಬ್ಬರು ‘ಲೈಫ್ ಬಾಯ್’ ಬಾತ್ ಸೋಪ್‍ನಲ್ಲಿ ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ಗಂಟೆಯಲ್ಲಿ ಸೋಪ್‍ನಲ್ಲಿ ಅಪ್ಪು ಚಿತ್ರವನ್ನು ಗುಂಡು ಪಿನ್ ಮೂಲಕ ಚಿತ್ರಿಸಿದ್ದಾರೆ.

ಮಂಗಳೂರಿನ ಗಣೇಶಪುರದ ದೇವಿಕಿರಣ್ ಬೇರೆ ಸೋಪ್‍ನಿಂದ ಅಪ್ಪು ಚಿತ್ರ ರಚಿಸಲು ಟ್ರೈ ಮಾಡಿದರೂ ಸಾಧ್ಯವಾಗಿರಲಿಲ್ಲ. ಆ ಬಳಿಕ ಲೈಫ್‍ಬಾಯ್ ಸೋಪ್‍ನಿಂದ ಅಪ್ಪು ಚಿತ್ರ ಮಾಡಿ ಯಶಸ್ಸು ಕಂಡಿದ್ದಾರೆ. ಅಪ್ಪು ಚಿತ್ರ ರಚನೆಯ ವೀಡಿಯೋವನ್ನು ದೇವಿಕಿರಣ್ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದು ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೀಡಿಯೋ ಸಾಕಷ್ಟು ವೈರಲ್ ಕೂಡಾ ಆಗುತ್ತಿದೆ.


Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು