ನಾಳೆ ನನಗೆ ಎಕ್ಸಾಂ ಇದೆ ಅದಕ್ಕಿಂತ ಮುಖ್ಯ ಕೊಹ್ಲಿ ಆಟ ನೋಡುವುದು: ಬಾಲಕನ ಪೋಸ್ಟರ್ ವೈರಲ್

 

ನಾಳೆ ನನಗೆ ಎಕ್ಸಾಂ ಇದೆ ಅದಕ್ಕಿಂತ ಮುಖ್ಯ ಕೊಹ್ಲಿ ಆಟ ನೋಡುವುದು: ಬಾಲಕನ ಪೋಸ್ಟರ್ ವೈರಲ್

ಮುಂಬೈ: ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಅವರ ಆಟ ನೋಡುವುದೆ ಹಬ್ಬ. ಇದೀಗ ಐಪಿಎಲ್‍ನಲ್ಲಿ ಆರ್​ಸಿಬಿ ಪರ ಆಡುತ್ತಿರುವ ಕೊಹ್ಲಿ ಆಟ ನೋಡಲು ಒಬ್ಬ ಬಾಲಕ ಮರುದಿನ ಇದ್ದ ಪರೀಕ್ಷೆ ಬಿಟ್ಟು ಬಂದು ಸ್ಟೇಡಿಯಂನಲ್ಲಿ ಪೋಸ್ಟರ್ ಹಿಡಿದು ವೈರಲ್ ಆಗಿದ್ದಾನೆ.

ನಿನ್ನೆ ಬೆಂಗಳೂರು ಮತ್ತು ಪಂಜಾಬ್ ನಡುವೆ ಮುಂಬೈನಲ್ಲಿ ಪಂದ್ಯ ನಡೆಯುತ್ತಿತ್ತು. ಈ ಪಂದ್ಯ ನೋಡಲು ಮೈದಾನಕ್ಕೆ ಬಂದಿದ್ದ ಬಾಲನೋರ್ವ ಹಿಡಿದಿದ್ದ ಪೋಸ್ಟರ್ ಒಂದು ಗಮನಸೆಳೆಯಿತು. ಈ ಪೋಸ್ಟರ್‌ನಲ್ಲಿ ನನಗೆ ನಾಳೆ ಎಕ್ಸಾಂ ಇದೆ. ಆದರೆ ಕಿಂಗ್ ಕೊಹ್ಲಿ ಆಟ ನೋಡುವುದು ತುಂಬಾ ಮುಖ್ಯ ಎಂದು ಬರೆದುಕೊಂಡ ಪೋಸ್ಟರ್‌ ಹಿಡಿದು ಬಾಲಕ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿನ್ನೆ ಪಂಜಾಬ್ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದರು ಆರ್​ಸಿಬಿ ಸೋಲು ಕಂಡಿತ್ತು. ಆದರೆ ಪಂದ್ಯದಲ್ಲಿ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ನಾ ಮುಂದು ತಾ ಮುಂದು ಎಂಬಂತೆ ಬೌಂಡರಿ, ಸಿಕ್ಸರ್ ಸಿಡಿಸಲು ಮುಂದಾದರು ಅದರಲ್ಲೂ ನಾಯಕ ಡು ಪ್ಲೆಸಿಸ್ ಸಿಕ್ಸರ್‌ಗಳ ಸುರಿಮಳೆ ಗೈದರು. ಈ ಜೋಡಿ 2ನೇ ವಿಕೆಟ್‍ಗೆ 118 ರನ್ (61 ಎಸೆತ) ಜೊತೆಯಾಟವಾಡಿತು. ಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ನೋಡುತ್ತಿದ್ದಂತೆ ಅಭಿಮಾನಿಗಳು ಸಂತಸ ಪಟ್ಟರು ಆದರೆ ಅವರ ಆಟ 88 ರನ್ (57 ಎಸೆತ, 3 ಬೌಂಡರಿ, 7 ಸಿಕ್ಸ್)ಗೆ ಕೊನೆಗೊಂಡಿತು. ಬಳಿಕ ಬಂದ ದಿನೇಶ್ ಕಾರ್ತಿಕ್ ಸ್ಲಾಗ್ ಓವರ್‌ಗಳಲ್ಲಿ ಕೊಹ್ಲಿ ಜೊತೆಗೂಡಿ ರನ್ ಮಳೆ ಸುರಿಸಿದರು. ಕೊಹ್ಲಿ ಅಜೇಯ 41 ರನ್ (29 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಮಿಂಚಿದರು. 

ಆರ್‌ಸಿಬಿಯ 205 ರನ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಬಿಗ್ ಹಿಟ್ಟರ್‌ಗಳಾದ ಶಾರೂಖ್ ಖಾನ್ ಮತ್ತು ಓಡೆನ್ ಸ್ಮಿತ್ ಸೇರಿ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಸಿಡಿಸಿ 5 ವಿಕೆಟ್‍ಗಳ ಅಂತರದ ಗೆಲುವು ಸಾಧಿಸಿತು.

Comments

Popular posts from this blog

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಮಗಳ ಮೃತ ದೇಹ ಹೊತ್ತು 10 ಕಿ.ಮೀ ಸಾಗಿದ ತಂದೆ

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ