ಕತ್ತಲಲ್ಲಿ ಕಾಣದೆ ಮಲಗಿದ್ದ ಬಾಲಕಿಯ ಮೇಲೆ ಹರಿದ ಟೆಂಪೋ
ಕತ್ತಲಲ್ಲಿ ಕಾಣದೆ ಮಲಗಿದ್ದ ಬಾಲಕಿಯ ಮೇಲೆ ಹರಿದ ಟೆಂಪೋ
- ಬೀದಿಬದಿ ವ್ಯಾಪಾರ ಮಾಡಿ ಮಗಳ ಸಾಕುತ್ತಿದ್ದ ತಾಯಿ

ಬೆಂಗಳೂರು: ಮಲಗಿದ್ದ ಬಾಲಕಿಯೊಬ್ಬಳ ಮೇಲೆ ಚಾಲಕ ಟೆಂಪೋ ಹರಿಸಿದ ಪರಿಣಾಮ 7 ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕಿಯನ್ನು ಶಿವಾನ್ಯಾ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೆ.ಆರ್ ಮಾರ್ಕೆಟ್‍ನಲ್ಲಿ ಸಂಭವಿಸಿದೆ.
ಟೆಂಪೋದಲ್ಲಿ ತರಕಾರಿ ತುಂಬಿಕೊಂಡು ಮಾರ್ಕೆಟ್‍ಗೆ ಬರುತ್ತಿದ್ದಾಗ ಕತ್ತಲಲ್ಲಿ ಕಾಣದೆ ಚಾಲಕ ಮಲಗಿದ್ದ ಬಾಲಕಿಯ ಮೇಲೆ ಹರಿಸಿಬಿಟ್ಟಿದ್ದಾನೆ. ಪರಿಣಾಮ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಡ್ರೈವರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಇತ್ತ ಗಾಯಾಳು ಬಾಲಕಿಯನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾಳೆ. ಮಗಳನ್ನು ಕಳೆದುಕೊಂಡ ಹೆತ್ತಮ್ಮನ ಆಕ್ರಂದನ ಮುಗಿಲುಮುಟ್ಟಿತು.
ಬೀದಿಬದಿ ವ್ಯಾಪಾರ ಮಾಡಿ ಮಗಳನ್ನು ತಾಯಿ ಸಾಕುತ್ತಿದ್ದರು. ಘಟನಾ ಸ್ಥಳಕ್ಕೆ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪರಾರಿಯಾದ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Comments
Post a Comment