ರೌಡಿಗಳಿಗೆ ಉತ್ತೇಜನ ಕಾರಣಕ್ಕೆ ನಯನತಾರಾ ಮೇಲೆ ದೂರು ದಾಖಲು


ರೌಡಿಗಳಿಗೆ ಉತ್ತೇಜನ ಕಾರಣಕ್ಕೆ ನಯನತಾರಾ ಮೇಲೆ ದೂರು ದಾಖಲು

ಮಿಳಿನ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಪ್ರಣಯದ ಹಕ್ಕಿಗಳಂತೆ ಎಲ್ಲಿಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಈ ಜೋಡಿಯ ಮೇಲೆ ದೂರು ದಾಖಲಾಗಿದ್ದು, ದೂರಿನಲ್ಲಿ ಇವರು ರೌಡಿಗಳಿಗೆ ಉತ್ತೇಜಿಸುತ್ತಾರೆ ಎಂದು ಬರೆಯಲಾಗಿದೆ.

ನಯನತಾರಾ ಮತ್ತು ವಿಘ್ವೇಶ್ ಶಿವನ್ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯಿದೆ. ಇಬ್ಬರೂ ಈಗಾಗಲೇ ಎರಡು ವರ್ಷದಿಂದ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಪ್ರೀತಿಯ ನೆನಪಾಗಾಗಿ ಅವರು ‘ರೌಡಿ ಪಿಕ್ಚರ್ಸ್’ ಸಂಸ್ಥೆಯನ್ನು ಶುರು ಮಾಡಿದ್ದರು. ಈ ಸಂಸ್ಥೆಯಿಂದ ಭೂಗತ ಜಗತ್ತಿನ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ದೂರು ದಾರರು ಆರೋಪ ಮಾಡಿದ್ದಾರೆ. ಇವರ ಚಿತ್ರಗಳಿಂದಾಗಿ ರೌಡಿಗಳಿಗೆ ಮತ್ತಷ್ಟು ಉತ್ತೇಜನ ಸಿಗುತ್ತಿದೆ ಎಂದೂ ದೂರಲಾಗಿದೆ.

ರೌಡಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಂತಹ ಬಹುತೇಕ ಸಿನಿಮಾಗಳು ರೌಡಿಸಂ ಹಿನ್ನೆಲೆಯ ಕಥೆಯನ್ನೇ ಒಳಗೊಂಡಿವೆ. ಅಲ್ಲದೇ ವಿಘ್ನೇಶ್ ಶಿವನ್ ನಿರ್ದೇಶನದ, ವಿಜಯ್ ಸೇತುಪತಿ ನಟನೆಯ ‘ರೌಡಿಧಂ’ ಸಿನಿಮಾ ಕೂಡ ಅಂಥದ್ದೇ ಕಥೆಯನ್ನು ಹೊಂದಿತ್ತು. ಈ ಸಿನಿಮಾದಲ್ಲಿ ನಯನತಾರಾ ಕೂಡ ನಟಿಸಿದ್ದರು. ಇಲ್ಲಿಯೇ ನಯನತಾರಾಗೂ ಮತ್ತು ವಿಘ್ನೇಶ್ ಗೂ ಪ್ರೇಮಾಂಕುರವಾಗಿತ್ತು.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು