ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ: ಡಿಕೆಶಿ
ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ: ಡಿಕೆಶಿ
- ಮೈಸೂರು ಹುಲಿ ಅಂತ ಬ್ರಿಟೀಷರು ಬಿರುದು ಕೊಟ್ಟಿದ್ದು ಕಾಂಗ್ರೆಸ್ ಅಲ್ಲ

ಬೆಂಗಳೂರು: ಟಿಪ್ಪು ವಿಚಾರದಲ್ಲಿ ದೇಶದ ಇತಿಹಾಸವನ್ನು ಯಾರು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ತಿಳಿಸಿದರು.
ಪಠ್ಯಪುಸ್ತಕದಲ್ಲಿ ಟಿಪ್ಪು ವಿಚಾರ ಕೈ ಬಿಡುವ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ಕೊಟ್ಟ ಡಿಕೆಶಿ, ಇತಿಹಾಸವನ್ನು ಯಾರು ಬದಲಿಸಲು ಸಾಧ್ಯವಿಲ್ಲ. ಈ ದೇಶದ ರಾಷ್ಟ್ರಪತಿಗಳೇ ಟಿಪ್ಪು ಬಗ್ಗೆ ಕಳೆದ ಬಾರಿ ಸದನದಲ್ಲಿ ಹಾಡಿ ಹೊಗಳಿದ್ದಾರೆ. ಸಮಿತಿಯಲ್ಲಿ ಇರುವವರು ಪ್ರಜ್ಞೆ ಇರುವವರು. ಯಾರೂ ಕೂಡ ತಿರುಚೋಕ್ಕೆ ಆಗಲ್ಲ ಎಂದು ಉತ್ತರಿಸಿದರು.
ಟಿಪ್ಪುಗೆ ‘ಮೈಸೂರು ಹುಲಿ’ ಎಂಬ ಬಿರುದು ಗೊಂದಲ ಯಾಕೆ? ಬಿಜೆಪಿ ಅವರು ಲಂಡನ್ ಮ್ಯೂಸಿಯಂಗೆ ಹೋಗಿ ನೋಡ್ಲಿ. ಮೈಸೂರು ಹುಲಿ ಬಿರುದು ನಾವು ಕೊಟ್ಟಿದ್ದಲ್ಲ. ಬ್ರಿಟೀಷರು ಬಿರುದು ಕೊಟ್ಟಿದ್ದು, ಕಾಂಗ್ರೆಸ್ ಕೊಟ್ಟಿದ್ದಲ್ಲ. ಸ್ವತಂತ್ರ ಪೂರ್ವದಲ್ಲೆ ಬ್ರಿಟೀಷರು ಕೊಟ್ಟ ಬಿರುದು ಎಂದರು.
ಹೋಗಿ ಯಾಕೆ ಕೊಟ್ರಿ ಅಂತ ಬ್ರಿಟೀಷರನ್ನ ಕೇಳ್ತೇವಿ ಇರಿ. ರಾಷ್ಟ್ರಪತಿಗಳು ಟಿಪ್ಪು ಬಗ್ಗೆ ಓದಿ ಹೋಗಿದ್ದರು. ಟಿಪ್ಪು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ. ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ ಎಂದು ತಿರುಗೇಟು ಕೊಟ್ಟರು.
Comments
Post a Comment