ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈಬಿಟ್ಟಿಲ್ಲ: ಶಾಸಕ ಎನ್.ಮಹೇಶ್

 

ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈಬಿಟ್ಟಿಲ್ಲ: ಶಾಸಕ ಎನ್.ಮಹೇಶ್

ಚಾಮರಾಜನಗರ: ತಾಯಿ ಹೃದಯ ಇರುವ ವ್ಯಕ್ತಿ ಬಿಎಸ್‌ವೈ. ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈ ಬಿಟ್ಟಿಲ್ಲ ಎಂದು ಬಿಜೆಪಿ ಶಾಸಕ ಎನ್.ಮಹೇಶ್ ಹೊಗಳಿಸಿದರು.

ಗೌಡಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಇನ್ನು ಮುಂದೆ ಯಡಿಯೂರಪ್ಪ ಶ್ರೀಕೃಷ್ಣನ ಪಾತ್ರ ವಹಿಸಲಿದ್ದಾರೆ. ಬಿಎಸ್‌ವೈ ಇದುವರೆಗೆ ಅರ್ಜುನನ ಪಾತ್ರ ನಿರ್ವಹಿಸಿ ಕೆಳಗಿಳಿದಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಪಕ್ಷಗಳು ಅವರ ಕಥೆ ಮುಗಿಯಿತು ಎಂದುಕೊಂಡಿದ್ದವು. ಆದರೆ ಬಿಎಸ್‌ವೈ ರಾಜ್ಯ ರಾಜಕೀಯದಲ್ಲಿ ಶ್ರೀಕೃಷ್ಣ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪ ಬದಲಾವಣೆ ಆಗಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲು ಅವರು ಬದಲಾವಣೆ ಆಗಿದ್ದಾರೆ. ಕಂಬಳಿ ಹುಳುವಾಗಿದ್ದ ಯಡಿಯೂರಪ್ಪ ಈಗ ಚಿಟ್ಟೆಯಾಗಿ ಬದಲಾಗಿದ್ದಾರೆ. ತಾಯಿ ಹೃದಯ ಇರುವ ವ್ಯಕ್ತಿ ಬಿಎಸ್‌ವೈ. ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈ ಬಿಟ್ಟಿಲ್ಲ. ಅವರನ್ನು ಎಲ್ಲಿಗೆ ತಲುಪಿಸಬೇಕಿತ್ತೋ ಅಲ್ಲಿಗೆ ತಲುಪಿಸಿದ್ದಾರೆ ಎಂದು ಹೇಳಿದರು.

Comments

Popular posts from this blog

ಕಾಂಗ್ರೆಸ್ ಉಳಿಯಬೇಕಾದ್ರೆ ಮೊದಲು ಸಿದ್ದರಾಮಯ್ಯರನ್ನು ವಜಾ ಮಾಡಿ: ಈಶ್ವರಪ್ಪ

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು