ನಾನು ಗಾಂಧಿ, ನೆಹರೂ ಕುಟುಂಬದ ಗುಲಾಮ: ಕಾಂಗ್ರೆಸ್ ಶಾಸಕ


ನಾನು ಗಾಂಧಿ, ನೆಹರೂ ಕುಟುಂಬದ ಗುಲಾಮ: ಕಾಂಗ್ರೆಸ್ ಶಾಸಕ

ಜೈಪುರ: ನಾನು ಗಾಂಧಿ-ನೆಹರೂ ಕುಟುಂಬದ ಗುಲಾಮ ಎಂದು ಕಾಂಗ್ರೆಸ್ ಶಾಸಕ ಸಂಯಮ್ ಲೋಧಾ ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ರಾಜಸ್ಥಾನದ ಸಿರೋಹಿ ಶಾಸಕ ಸಂಯಮ್ ಲೋಧಾ, ರಾಜಸ್ಥಾನ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನವದ ವೇಳೆ ಮಾತನಾಡಿದ್ದಾರೆ. ನಾನು ನೆಹರು, ಗಾಂಧಿ ಕುಟುಂಬದ ಗುಲಾಮ. ಕೊನೇ ಉಸಿರು ಇರುವ ತನಕವೂ ನಾವು ನೆಹರು ಹಾಗೂ ಗಾಂಧಿ ಕುಟುಂಬದ ಗುಲಾಮರಾಗಿಯೇ ಉಳಿಯುತ್ತೇವೆ. ಈ ದೇಶವೂ ರೂಪು ಗೊಂಡಿರುವುದೇ ನೆಹರು ಮತ್ತು ಗಾಂಧಿ ಕುಟುಂಬದಿಂದಾಗಿ ಎಂದು ಹೇಳಿದ್ದಾರೆ.

ಈ ಹೇಳಿಕೆ ಬಿಜೆಪಿ ಶಾಸಕರಿಂದ ಭಾರೀ ಗದ್ದಲಕ್ಕೆ ಕಾರಣವಾಯಿತು. ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಪ್ರತಿಕ್ರಿಯಿಸಿ, ಇದೊಂದು ಹೊಸ ಸಂಸ್ಕೃತಿ ಹುಟ್ಟಿಕೊಂಡಿದೆ. ಗುಲಾಮಗಿರಿಗೆ ಅಭಿನಂದನೆಗಳು. ಸಮಾಜಕ್ಕೆ ಏನು ಸಂದೇಶ ನೀಡುತ್ತೀರಿ? ಎಂದು ಧ್ವನಿ ಎತ್ತುವ ಮೂಲಕವಾಗಿ ಸಭಾತ್ಯಾಗ ಮಾಡಿದ್ದಾರೆ.

ಈ ಲೋಧಾ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರೂ ಆಗಿದ್ದಾರೆ. ಹರಿದೇವ್ ಜೋಶ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತಿದ್ದುಪಡಿ ಮಸೂದೆ ಸಂಬಂಧ ಮಾತನಾಡುವಾಗ ಹೀಗೆ ಹೇಳಿದ್ದಾರೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು