ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆ: ಸಿಧು
ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆ: ಸಿಧು

ಚಂಡೀಗಢ: ಪಂಜಾಬ್‍ನ ರಾಜ್ಯಸಭಾ ನಾಮನಿರ್ದೇಶಿತರಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೊರತು ಪಡಿಸಿ ಉಳಿದ ಸಂಸದರೆಲ್ಲರೂ ದೆಹಲಿ ರಿಮೋಟ್ ಕಂಟ್ರೋಲ್‍ನ ಬ್ಯಾಟರಿಗಳು ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಟೀಕಿಸಿದರು.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಂಜಾಬ್‍ನಿಂದ ಐದು ರಾಜ್ಯಸಭಾ ನಾಮನಿರ್ದೇಶಿತರ ಪಕ್ಷದ ಆಯ್ಕೆ ಕುರಿತು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದರು.
ಟ್ವೀಟ್‍ನಲ್ಲಿ ಏನಿದೆ?: ದೆಹಲಿ ರಿಮೋಟ್ ಕಂಟ್ರೋಲ್‍ಗೆ ಹೊಸ ಬ್ಯಾಟರಿಗಳು ಸೇರ್ಪಡೆಯಾಗಿವೆ. ಹರ್ಭಜನ್ ಅವರನ್ನು ಹೊರತು ಪಡಿಸಿದರೆ, ಉಳಿದವರು ದೆಹಲಿ ರಿಮೋಟ್ ಕಂಟ್ರೋಲ್‍ಗೆ ಬ್ಯಾಟರಿಗಳಾಗಿದ್ದಾರೆ. ಇದರಿಂದ ಪಂಜಾಬ್‍ಗೆ ದ್ರೋಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್‍ನಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲವು ಸಾಧಿಸಿರುವ ಹಿನ್ನಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ.
Comments
Post a Comment