ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

 

ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

ಬಾಲಿವುಡ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಹವಾ ಎಬ್ಬಿಸಿದ್ದೇ ತಡ ಹಲವು ಫೈಲ್ಸ್ ಗಳು ಅಲ್ಲಲ್ಲಿ ಓಪನ್ ಆಗುತ್ತಿವೆ. ನಾನಾ ರೀತಿಯ ಫೈಲ್ಸ್ ಗಳು ಇನ್ನೂ ಸಿನಿಮಾವಾಗಿ ಬರಲಿ ಎಂಬ ಹಲವರ ಬೇಡಿಕೆಯ ಬೆನ್ನೆಲ್ಲೆ ಕೇರಳದಲ್ಲೊಂದು ಸಿನಿಮಾ ಶುರುವಾಗುತ್ತಿದೆ. ಅದಕ್ಕೆ ‘ದಿ ಕೇರಳ ಸ್ಟೋರಿ’ ಎಂದು ಹೆಸರಿಟ್ಟಿದ್ದಾರೆ ನಿರ್ದೇಶಕ ಸುದಿಪ್ತೋ ಸೇನ್.

ನಿರ್ದೇಶಕರು ಕೇವಲ ಘೋಷಣೆ ಮಾಡಿಲ್ಲ, ಟೀಸರ್ ಕೂಡ ರಿಲೀಸ್ ಮಾಡಿದ್ದಾರೆ. ಆ ಟೀಸರ್ ನಲ್ಲಿ ಭಯಾನಕ ಸತ್ಯವೊಂದನ್ನು ಹೊರಗೆಡವಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕೇರಳದ ಮಾಜಿ ಸಿಎಂ ಅಚ್ಯುತಾನಂದ್ ಅವರ ವಿಡಿಯೋ ತುಣಕಕ್ಕೂ ಟೀಸರ್ ನಲ್ಲಿ ಸೇರಿಸಿದ್ದಾರೆ. ಹೀಗಾಗಿ ದಿ ಕೇರಳ  ಸ್ಟೋರಿ ಟೀಸರ್ ನಿಂದಲೇ ಕೇರಳದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಈ ಸಿನಿಮಾದಲ್ಲಿ ಕೇರಳದಲ್ಲಿ ನಡೆದಿದೆ ಎನ್ನಲಾದ ಮಾನವ ಕಳ್ಳಸಾಗಣೆಯ ಕುರಿತಾದ ಸ್ಟೋರಿಯನ್ನು ಹೇಳಲು ಹೊರಟಿದ್ದಾರಂತೆ ನಿರ್ದೇಶಕ ಸೇನ್. ದಶಕವೊಂದರ ಕಾಲದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮಾನವ ಕಳ್ಳಸಾಗಣೆ ಕುರಿತಾದ ಸಂಶೋಧನೆ ಇದರಲ್ಲಿ ಇದೆಯಂತೆ.

ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಮುಸ್ಲಿಂ ಸಂಘಟನೆಯೊಂದರು ಸಂಚು ರೂಪಿಸಿದ್ದ ಮತ್ತು ನಿಷೇಧಿತ ಸಂಘಟನೆ ಎನ್.ಡಿ.ಎಫ್ ಸಹ ಇಂಥದ್ದೇ ಆಲೋಚನೆ ಹೊಂದಿತ್ತು. ಇವರ ಗುರಿಯು ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವುದೇ ಆಗಿತ್ತು ಎಂದು ಕೇರಳ ಮಾಜಿ ಸಿಎಂ ಅಚ್ಯುತಾನಂದ್ ಹೇಳಿದ್ದರು ಎನ್ನಲಾದ ವಿಡಿಯೋವನ್ನು ಟೀಸರ್ ನಲ್ಲಿ ಹಾಕಿದ್ದಾರೆ. ಈಗ ಅದು ವೈರಲ್ ಕೂಡ ಆಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಕೇರಳದಿಂದ 32 ಸಾವಿರಕ್ಕೂ ಹೆಚ್ಚು ಯುವತಿಯರನ್ನು ಯುದ್ಧ ಪೀಡಿತ ದೇಶಗಳಿಗೆ ರವಾನಿಸಲಾಗಿದೆ ಎನ್ನುವ ಮಾಹಿತಿಯನ್ನೂ ಆ ಟೀಸರ್ ಬಿಟ್ಟುಕೊಡುತ್ತದೆ. ಈ ಹುಡುಗಿಯರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ ಎಂದಿದ್ದಾರೆ ನಿರ್ದೇಶಕರು. ಆ ಯುವತಿಯರ ಬದುಕಿನ ಬಗ್ಗೆ ಈಗಾಗಲೇ ಸಂಶೋಧನೆ ಮಾಡಿರುವ ನಿರ್ದೇಶಕರು ಈ ಸತ್ಯ ಘಟನೆಯನ್ನು ಯಥಾವತ್ತಾಗಿ ತರಲು ನಿರ್ದೇಶಕರು ನಿರ್ಧರಿಸಿದ್ದಾರಂತೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು