ಶ್ರೀರಾಮ ಎಂದಿಗೂ ದ್ವೇಷ ಮಾಡಿ ಎಂದಿಲ್ಲ: ಕೇಜ್ರಿವಾಲ್

 

ಶ್ರೀರಾಮ ಎಂದಿಗೂ ದ್ವೇಷ ಮಾಡಿ ಎಂದಿಲ್ಲ: ಕೇಜ್ರಿವಾಲ್

ನವದೆಹಲಿ: ಬಿಜೆಪಿಗರು ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಶ್ರೀರಾಮನು ಎಂದಿಗೂ ದ್ವೇಷದ ಬಗ್ಗೆ ಹೇಳಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.

ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ರಾಮಾಯಣ ಹಾಗೂ ಭಗವದ್ಗೀತೆಯಲ್ಲಿರುವ ಹಿಂದುತ್ವದ ಬಗ್ಗೆ ನನಗೆ ನಂಬಿಕೆ ಇದೆ. ರಾಮಾಯಣದಲ್ಲಿ ಶ್ರೀರಾಮ ಹೇಳಿರುವುದೆಲ್ಲವೂ ಹಿಂದುತ್ವವೇ ಆಗಿದೆ. ಶ್ರೀರಾಮನು ನಮ್ಮ ನಡುವೆಯೇ ದ್ವೇಷ ಮಾಡಿ ಎಂದು ಎಂದಿಗೂ ಕಲಿಸಿಲ್ಲ. ಆದರೆ ಇವರು ದ್ವೇಷದ ಹೆಸರಲ್ಲಿ ಅನೇಕರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇತ್ತೀಚಿನ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಿಂದುತ್ವದ ಅಜೆಂಡಾದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಯಿತು. ಯಾಕೆಂದರೆ ಪ್ರತಿಪಕ್ಷಗಳು ಪ್ರಬಲವಾಗಿರಲಿಲ್ಲ ಎಂದು ಹೇಳಿದರು. 

ಪಂಜಾಬ್‍ನಲ್ಲಿ ತನ್ನ ಇತ್ತೀಚಿನ ಚುನಾವಣಾ ಗೆಲುವಿನ ನಂತರ, ಆಮ್ ಆದ್ಮಿ ಪಕ್ಷವು ಗುಜರಾತ್‍ನ ಸ್ಪರ್ಧಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗುಜರಾತ್‍ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು