ಚಾಲಕನ ನಿಯಂತ್ರಣ ತಪ್ಪಿದ ಲಾರಿ: ಅರ್ಧ ಮನೆಯೇ ಧ್ವಂಸ
ಚಾಲಕನ ನಿಯಂತ್ರಣ ತಪ್ಪಿದ ಲಾರಿ: ಅರ್ಧ ಮನೆಯೇ ಧ್ವಂಸ

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮನೆಗೆ ನುಗ್ಗಿದ ಪರಿಣಾಮ ಅರ್ಧ ಮನೆಯೇ ಧ್ವಂಸಗೊಂಡು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆ ಸಮೀಪದ ಓಡೆಯನಪುರದಲ್ಲಿ ನಡೆದಿದೆ.
ಗ್ರಾಮದ ರಸ್ತೆ ಬದಿಯಲ್ಲಿರುವ ಮಲ್ಲೇಶ್ ಅವರ ಅರ್ಧ ಮನೆ ಧ್ವಂಸಗೊಂಡಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ತಡರಾತ್ರಿ ಈ ಘಟನೆ ನಡೆದಿದೆ.
ಮನೆಗೆ ಲಾರಿ ನುಗ್ಗಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಹಸುಗಳಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಆದರೆ ಅಕ್ಕಪಕ್ಕದವರ ನೆರವಿನಿಂದ ಹಸುಗಳ ರಕ್ಷಣೆ ಮಾಡಲಾಗಿದೆ. ಲಾರಿ ಉಡುಪಿ ಜಿಲ್ಲೆಯ ಲಾರಿ ಕುಶಾಲನಗರದಿಂದ ಸಕಲೇಶಪುರಕ್ಕೆ ಹೋಗುತ್ತಿತ್ತು. ಘಟನೆಯಿಂದಾಗಿ ಲಾರಿ ಚಾಲಕ ಸಂತೋಷ್‍ಗೆ ಸಣ್ಣಪುಟ್ಟ ಗಾಯವಾಗಿದೆ.
ಕಿಡಿಗೇಡಿಗಳು ರಸ್ತೆಗೆ ದೊಡ್ಡ ದೊಡ್ಡ ಕಲ್ಲು ಇಟ್ಟಿದ್ದರಿಂದ ಅನಾಹುತವಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸದ್ಯ ಶನಿವಾರ ಸಂತೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Comments
Post a Comment