ಭಯೋತ್ಪಾದಕರ ಹೆಸರಲ್ಲಿ ಬಿಜೆಪಿ ಸೈನಿಕರನ್ನು ಕೊಂದಿದೆ: ಶಿವರಾಜ್ ತಂಗಡಗಿ


ಭಯೋತ್ಪಾದಕರ ಹೆಸರಲ್ಲಿ ಬಿಜೆಪಿ ಸೈನಿಕರನ್ನು ಕೊಂದಿದೆ: ಶಿವರಾಜ್ ತಂಗಡಗಿ

ಕೊಪ್ಪಳ: ಭಯೋತ್ಪಾದಕರ ಹೆಸರಲ್ಲಿ ಬಿಜೆಪಿ ಸೈನಿಕರನ್ನು ಕೊಂದಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಡಿಎಕ್ಸ್ ಬಾಂಬ್ ಹೇಗೆ ಬಂತು? ನೀವು ಸರ್ಕಾರ ಮಾಡುತ್ತಿರೋ ದನಕಾಯುತ್ತಿರೋ? ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ. ಚುನಾವಣೆ ಬಂದ ತಕ್ಷಣ ಇವರಿಗೆ ಪಾಕಿಸ್ತಾನ, ಸೈನಿಕರು ನೆನಪಾಗುತ್ತಾರೆ. ದೇಶದಲ್ಲಿ ಸರ್ಕಾರ ಸಿನಿಮಾ ಮಾಡುವ ಪರಸ್ಥಿತಿ ಬಂದಿದೆ ಎಂದು ದಿ ಕಾಶ್ಮೀರಿ ಫೈಲ್ ಸಿನಿಮಾ ಬಗ್ಗೆ ವ್ಯಂಗ್ಯವಾಡಿದರು.‌ 

ಬಿಜೆಪಿಯವರು ಟಿಕೆಟ್ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರಿಗೆ ಸಹಾಯ ಮಾಡಿದ್ದೇ ಬಿಜೆಪಿ ಮತ್ತು ಆರ್‍ಎಸ್‍ಎಸ್‍ನವರು ಎಂದು ವ್ಯಂಗ್ಯವಾಡಿದರು. 

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು