ಅಪ್ಪು ಸಮಾಧಿ ಬಳಿ ಭಾವುಕರಾದ ರಾಮ್ ಗೋಪಾಲ್ ವರ್ಮಾ

 

ಅಪ್ಪು ಸಮಾಧಿ ಬಳಿ ಭಾವುಕರಾದ ರಾಮ್ ಗೋಪಾಲ್ ವರ್ಮಾ

ಟ ಪುನೀತ್   ರಾಜ್‌ಕುಮಾರ್‌ ಅಗಲಿ ಇಂದಿಗೆ 5 ತಿಂಗಳು ಕಳೆದಿವೆ. ಆದರೂ, ಅಪ್ಪು ಸಮಾಧಿಗೆ ನಮನ ಸಲ್ಲಿಸಲು ಬರುತ್ತಿರುವ ಅಭಿಮಾನಿಗಳು, ಕಲಾವಿದರು ದಂಡು ಕೊಂಚವೂ ಕಡಿಮೆ ಆಗಿಲ್ಲ. ಇಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭೇಟಿ ನೀಡಿ ಅಪ್ಪು ನಮನ ಸಲ್ಲಿಸಿದ್ದಾರೆ.


ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಪುತ್ರಿ ವಂದಿತಾ, ರಾಘವೇಂದ್ರ ರಾಜ್‌ಕುಮಾರ್‌  ಹಾಗೂ ಕುಟುಂಬಸ್ಥರು ಇಂದು ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆಯೇ ರಾಮ್ ಗೋಪಾಲ್ ವರ್ಮಾ ಕೂಡ ಭೇಟಿ ನೀಡಿ, ಅಪ್ಪು ಸಮಾಧಿಗೆ ಹಾಗೂ ಪಾರ್ವತಮ್ಮ,  ರಾಜ್‌ಕುಮಾರ್‌ ಅವರ ಸಮಾಧಿಗೂ ನಮನ ಸಲ್ಲಿಸಿದರು. 


ಮಾಧ್ಯಮಗಳೊಂದಿಗೆ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ಪುನೀತ್ ಒಬ್ಬ ಒಳ್ಳೆ ನಟ ಮಾತ್ರ ಅಲ್ಲ. ಒಬ್ಬ ಒಳ್ಳೆ ವ್ಯಕ್ತಿ ಕೂಡ ಆಗಿದ್ದರು. ಕಿಲ್ಲಿಂಗ್ ವೀರಪ್ಪನ್ ಚಿತ್ರೀಕರಣದ ಸಮಯದಲ್ಲಿ ಎರಡು ಬಾರಿ ಭೇಟಿಯಾಗಿದ್ದೇನೆ. ಅಪ್ಪು ಅವರನ್ನು ಎಲ್ಲರು ಪ್ರೀತಿಸುತ್ತಾರೆ. ಅವರು ಇಲ್ಲ ಎನ್ನವ ಮಾತು ತುಂಬಾ ಶಾಕಿಂಗ್ ಆಗಿದೆ. ಎಲ್ಲರ ಹೃದಯದಲ್ಲಿ ಅವರು ಇರುತ್ತಾರೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು