ಜೈಲುವಾಸಕ್ಕೆ ಅಮೆರಿಕಾದಲ್ಲೇ ತಾಲೀಮು ಮಾಡಿದ್ದರಂತೆ ನಟ ಚೇತನ್

 

ಜೈಲುವಾಸಕ್ಕೆ ಅಮೆರಿಕಾದಲ್ಲೇ ತಾಲೀಮು ಮಾಡಿದ್ದರಂತೆ ನಟ ಚೇತನ್

ಜಾಮೀನಿನ ಮೇಲೆ ಜೈಲಿನಿಂದ ಆಚೆ ಬಂದ ನಂತರ ನಟ, ಸಾಮಾಜಿಕ ಹೋರಾಟಗಾರ ನಟ ಚೇತನ್ ಮತ್ತೆ ವ್ಯವಸ್ಥೆಯ ವಿರುದ್ಧ ಗುಡುಗುತ್ತಿದ್ದಾರೆ. ಈ ನಡುವೆ ಅವರು ಜೈಲಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಜೈಲಿನಲ್ಲಿರುವಾಗ ಎದೆಗುಂದಲಿಲ್ಲ. ಕಾರಣ ಅಮೆರಿಕಾದಲ್ಲಿಯೇ ಅದನ್ನು ಅಭ್ಯಾಸ ಮಾಡಿದ್ದೆ ಎಂದು ಹಂಚಿಕೊಂಡಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, 2003ರಲ್ಲಿ ಬೇಸಿಗೆಯ ಸಮಯದಲ್ಲಿ ವಾಷಿಂಗ್ಟನ್, ಡಿಸಿ, ಯು.ಎಸ್.ಎ ನಲ್ಲಿ ಸಂಬಳವಿಲ್ಲದ ಕಾನೂನಿನ ತರಬೇತಿ ವಿದ್ಯಾರ್ಥಿಯಾಗಿದ್ದಾಗ 3 ತಿಂಗಳ ಕಾಲ ನೆಲದ ಮೇಲೆ ಮಲಗುತ್ತಿದ್ದೆ. ನನ್ನ ಕಾಲೇಜಿನ ಸಹಪಾಠಿಗಳು ಇದರ ಬಗ್ಗೆ ಕೇಳಿದಾಗ ‘ಶಿಕ್ಷಣ ಮುಗಿದ ನಂತರ ಕರ್ನಾಟಕದಲ್ಲಿ ನಾನು ಹೋರಾಟಗಾರನಾದಾಗ ಖಂಡಿತವಾಗಿಯೂ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಈಗಲೇ ಸಿದ್ಧವಾಗಿರುವುದು ಒಳ್ಳೆಯದು ಎಂದು ಹೇಳಿದ್ದೆ. ಎರಡು ದಶಕಗಳ ಹಿಂದಿನ ಅಭ್ಯಾಸ ನನ್ನ ಸೆರೆವಾಸದ ವಾರದಲ್ಲಿ ಉಪಯೋಗಕ್ಕೆ ಬಂತು’ ಎಂದು ಬರೆದಿದ್ದಾರೆ.
ಅಲ್ಲದೇ ಚೇತನ್ ಗಡಿಪಾರು ಆಗುತ್ತಾರೆ ಎನ್ನುವ ವಿಷಯವೂ ಹರಿದಾಡುತ್ತಿತ್ತು. ಈ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಅದೆಲ್ಲವೂ ಸುಳ್ಳು ಸುದ್ದಿ. ಅಂಥದ್ದು ಏನೂ ಆಗಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದೂ ಅವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟವಂತೂ ನಿಲ್ಲುವುದಿಲ್ಲ. ನಿರಂತರವಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಲೇ ಇರುವುದಾಗಿ ಅವರು ಹೇಳಿದ್ದಾರೆ.
ಹೋರಾಟದ ಜತೆ ಜತೆಗೆ ಹಲವು ಸಿನಿಮಾಗಳಲ್ಲೂ ಚೇತನ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಇವರ ನಟನೆಯ ಹೊಸ ಸಿನಿಮಾ ಚಿತ್ರೀಕರಣವಾಗುತ್ತಿದೆ. ಅಲ್ಲದೇ, ಒಂದು ಸಿನಿಮಾ ಬಿಡುಗಡೆಗೆ ಸಿದ್ಧವಿದೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು