ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್


ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್



ದೇಶದಾದ್ಯಂತ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅವರ ಅನುಪಸ್ಥಿತಿಯಲ್ಲೇ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಇಡೀ ಕರುನಾಡೇ ಹಬ್ಬದಂತೆ ಸಿಂಗಾರಗೊಂಡಿದೆ. ಅವರ ನಟನೆಯ  ‘ಜೇಮ್ಸ್’ ಸಿನಿಮಾ ಕೂಡ ಇಂದೇ ಬಿಡುಗಡೆ ಆಗಿದ್ದರಿಂದ ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ. ಹಾಗಾಗಿ ಪುನೀತ್ ಅವರ ಹುಟ್ಟು ಹಬ್ಬ ಮತ್ತಷ್ಟು ಕಲರ್ ಫುಲ್ ಆಗಿದೆ.
ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ವಿಭಿನ್ನ ರೀತಿಯ ಡಿಪಿಗಳನ್ನು ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ. ಅನೇಕ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಫೋಟೋಗಳನ್ನು ತಯಾರಿಸಿ, ಶುಭಾಶಯ ಕೋರಿದ್ದಾರೆ. 

ಪುನೀತ್ ಅವರ ಬಾಲ್ಯದ ಫೋಟೋ, ಅವರ ಸಿನಿಮಾದ ಸ್ಟಿಲ್ ಹಾಗೂ ಅಪರೂಪದ ಫೋಟೋಗಳನ್ನು ಕೋಲಾಜ್ ಮಾಡಿಕೊಂಡು ಡಿಪಿ ತಯಾರಿಸಿದ್ದಾರೆ. ಕೆಲವರಂತೂ ಅಪರೂಪದ ಸಾಲುಗಳನ್ನು ಫೋಟೋದ ಜತೆ ಬಳಸಿದ್ದಾರೆ.

ಒಂದು ವಾರದಿಂದಲೇ ಪುನೀತ್ ಅವರ ಹುಟ್ಟು ಹಬ್ಬಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ನಾಡಿನ ತುಂಬಾ ಇರುವ ಅವರ ಅಭಿಮಾನಿ ಸಂಘಗಳು ಮತ್ತು ಬೇರೆ ನಾಯಕ ನಟರ ಅಭಿಮಾನಿಗಳು ಕೂಡ ಪುನೀತ್ ಅವರ ಹುಟ್ಟು ಹಬ್ಬವನ್ನು ಆಚರಿಸಲು ಸರ್ವಸಿದ್ಧತೆ ಮಾಡಿಕೊಂಡಿದ್ದರು. ಈಗ ಎಲ್ಲ ನಟ ನಟಿಯರ ಅಭಿಮಾನಿಗಳು ಪುನೀತ್ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

ರಾತ್ರಿ 12 ಗಂಟೆಯಿಂದಲೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳು, ತಾವಿರುವ ಕಡೆಯೇ ಅನ್ನ ಸಂತರ್ಪನೆ, ರಕ್ತದಾನ ಶಿಬಿರ, ನೇತ್ರದಾನ ಹಾಗೂ ಅನಾಥಾಶ್ರಮಗಳಿಗೆ ಹೋಗಿ ಅಗತ್ಯ ವಸ್ತುಗಳನ್ನು ಕೊಟ್ಟು ಬರುವ ಕಾರ್ಯವನ್ನು ಮಾಡಿದ್ದಾರೆ.


ಪುನೀತ್ ರಾಜ್ ಕುಮಾರ್ ಕುಟುಂಬ ಕೂಡ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಇರುವ ಪುನೀತ್ ಅವರ ಸಮಾಧಿ ಸ್ಥಳದಲ್ಲಿಯೇ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.




Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು