GAIL ಸಂಸ್ಥೆಯ ವಿರುದ್ಧ ಬೆಂಗಳೂರಿನ ಸದಾನಂದ ನಗರ ನಿವಾಸಿಗಳ ಪ್ರತಿಭಟನೆ‌

 

GAIL ಸಂಸ್ಥೆಯ ವಿರುದ್ಧ ಬೆಂಗಳೂರಿನ ಸದಾನಂದ ನಗರ ನಿವಾಸಿಗಳ ಪ್ರತಿಭಟನೆ‌

ಬೆಂಗಳೂರು: NGEF ಲೇಔಟ್ ಸದಾನಂದ ನಗರದ ಉದ್ಯಾನವನದಲ್ಲಿ GAIL ಸಂಸ್ಥೆ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದು, ಜನಾಕ್ರೋಶ ಎದುರಾಗಿದೆ‌.

ಇಲ್ಲಿನ ನಿವಾಸಿಗಳಿಗೆ ಮಕ್ಕಳಿಗೆ ವೃದ್ಧರಿಗೆ ಯುವಕರಿಗೆ ವಾಕಿಂಗ್ ಮಾಡಲು, ಆಟವಾಡಲು ಇರೋದು ಇದೊಂದೆ ಪಾರ್ಕ್ ಆಗಿದೆ. ಹೀಗಾಗಿ ಬೇರೆ ಸ್ಥಳದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಸ್ಥಾವರವನ್ನು ಈ ಪಾರ್ಕ್ ಜಾಗಕ್ಕೆ ಶಿಫ್ಟ್ ಮಾಡಲು ಹೊರಟಿರುವುದರ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.

ಈ ಸ್ಥಾವರ ನಿರ್ಮಾಣಕ್ಕೆ ಪಾರ್ಕ್‌ನಲ್ಲಿರುವ ಸುಮಾರು 30-50 ಮರಗಳ ತೆರವು ಮಾಡಬೇಕಾಗಿದೆ. ಹಸಿರನ್ನು ಅಪೋಷನ ತೆಗೆದುಕೊಂಡು ಈ ಸ್ಥಾವರ ನಿರ್ಮಾಣ ಬೇಕಾಗಿಲ್ಲ‌ ಉದ್ಯಾನವನ ಹೊರತುಪಡಿಸಿ ಬೇರೆ ಜಾಗದಲ್ಲಿ ನಿರ್ಮಾಣ ಮಾಡಲಿ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. NGEF ಲೇಔಟ್ ಸದಾನಂದ ನಗರದ ಉದ್ಯಾನವನ ಬಿಡಿಎಗೆ ಸೇರಿದ್ದು, ಸದ್ಯ ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.


Comments

Popular posts from this blog

ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ