‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ
‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

ಅಮೆರಿಕಾದ ಲಾಸ್ ಎಂಜಲ್ಸ್‍ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಇದು ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆಯೇ ನಟ ವಿಲ್ ಸ್ಮಿತ್ ಹಾಸ್ಯನಟ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ವಿವಾದಕ್ಕೆ ಸಿಲುಕಿಕೊಂಡಿದ್ದು, ಬಾಲಿವುಡ್ ಕ್ವಿನ್ ಕಂಗನಾ ರಣಾವತ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
94ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಸ್ಮಿತ್ ಕಪಾಳಮೋಕ್ಷ ವಿವಾದ ಎಲ್ಲಕಡೆ ಭಾರೀ ಸದ್ದು ಮಾಡುತ್ತಿದ್ದು, ಸೋಶಿಯಲ್ ಮೀಡಿಯಾ ಮೂಲಕ ಪ್ರಪಂಚದಾದ್ಯಂತದ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್ ಮತ್ತು ಹಾಲಿವುಡ್‍ನ ಹಲವಾರು ಸೆಲೆಬ್ರಿಟಿಗಳು ಕೂಡ ಈ ಘಟನೆಗೆ ಭಾರೀ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ.
ಈ ಕುರಿತು ಬಿ’ಟೌನ್ ಕಂಗನಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ಯಾವುದೋ ಮೂರ್ಖರು ಕೆಟ್ಟ ಜೋಕ್ ಮಾಡಲು ನನ್ನ ತಾಯಿ ಮತ್ತು ಸಹೋದರಿಯ ಅನಾರೋಗ್ಯವನ್ನು ಬಳಸಿದರೆ ನಾನು ಅವರನ್ನು ವಿಲ್ ಸ್ಮಿತ್ ಮಾಡಿದಂತೆ ಕಪಾಳಮೋಕ್ಷ ಮಾಡುತ್ತೇನೆ. ಅವರು ನನ್ನ ‘ಲಾಕ್ ಅಪ್’ ಶೋಗೆ ಬರಬೇಕು ಎಂದು ಆಫರ್ ಮಾಡಿದ್ದಾರೆ.
ಹಾಸ್ಯನಟ ಕ್ರಿಸ್ ರಾಕ್ ಅವರು ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಮೇಲೆ ಕಾಮಿಡಿ ಮಾಡಿದರು. ಈ ಹಿನ್ನೆಲೆ ಕೋಪಕೊಂಡ ವಿಲ್ ಸ್ಮಿತ್ ವೇದಿಕೆ ಮೇಲೆ ಕ್ರಿಸ್‍ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಎಲ್ಲಕಡೆ ಸುದ್ದಿಯಾಗಿದ್ದು, ತಮ್ಮ ವೈಯಕ್ತಿಕ ಜೀವನಕ್ಕೆ ಯಾರೇ ಮೂಗುತುರಿಸಿದರು ಈ ಪರಿಸ್ಥಿತಿ ಬರುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕಾರ್ಡಿ ಬಿ, ಮರಿಯಾ ಶ್ರೀವರ್, ಟ್ರೆವರ್ ನೋಹ್ ಸೇರಿದಂತೆ ಹಲವಾರು ಹಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ವೇದಿಕೆ ಮೇಲೆ ನಡೆದ ಈ ಘಟನೆಗೆ ಪ್ರತಿಕ್ರಿಯೆ ಕೊಟ್ಟಿದ್ದರು. ಈ ವೇಳೆ ಸಮಾರಂಭದಲ್ಲಿ ಉಪಸ್ಥಿತರಿಂದ ಹಲವು ತಾರೆಯರು ದಿಗ್ಭ್ರಮೆಗೊಂಡಿದ್ದರು.
Comments
Post a Comment